ಪೋರ್ಟಬಲ್ ಇಸಿಜಿ ಸಾಧನ: ಕಡಿಮೆ ಖರ್ಚು, ಗ್ರಾಮೀಣ ಭಾಗದ ಜನತೆಗೆ ಜೀವ ರಕ್ಷಕ

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೂದಿಗೆರೆ ಗ್ರಾಮಸ್ಥರು ಇಸಿಜಿ ತಪಾಸಣೆ ಮಾಡಿಸಿಕೊಳ್ಳಬೇಕೆಂದರೆ 1,500 ರೂ ತೆತ್ತು ಹುಬ್ಬಳ್ಳಿಗೆ ತೆರಳಬೇಕಾಗುತ್ತದೆ.
ಪೋರ್ಟಬಲ್ ಇಸಿಜಿ ಸಾಧನ
ಪೋರ್ಟಬಲ್ ಇಸಿಜಿ ಸಾಧನ
Updated on: 
ಬೆಂಗಳೂರು: ರಾಜ್ಯದ ಹಲವು ಪ್ರದೇಶಗಳಲ್ಲಿ, ಪ್ರಮುಖವಾಗಿ ಗ್ರಾಮೀಣ ಭಾಗದವರಿಗೆ ಆರೋಗ್ಯ ಸೌಲಭ್ಯಗಳು ಸುಲಭವಾಗಿ ಸಿಗುವಂತಹ ಪರಿಸ್ಥಿತಿ ಇಲ್ಲದಂತಾಗಿದೆ. ಈ ಪೈಕಿ ಇಸಿಜಿ ಸೌಲಭ್ಯವೂ ಒಂದಾಗಿದ್ದು, ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೂದಿಗೆರೆ ಗ್ರಾಮಸ್ಥರು ಇಸಿಜಿ ತಪಾಸಣೆ ಮಾಡಿಸಿಕೊಳ್ಳಬೇಕೆಂದರೆ 1,500 ರೂ ತೆತ್ತು ಹುಬ್ಬಳ್ಳಿಗೆ ತೆರಳಬೇಕಾಗುತ್ತದೆ. ಆದರೆ ಡಾ. ಮಹೇಶ್ ಗದಗಿನಮಠ್ ಅವರ ಆಸ್ಪತ್ರೆಯಲ್ಲಿ ಪೋರ್ಟಬಲ್ ಇಸಿಜಿ ಸಾಧನವಿದ್ದು, ಸ್ಥಳೀಯರಿಗೆ ವರದಾನವಾಗಿದೆ. 
ಡಾ.ಮಹೇಶ್ ಗದಗಿನಮಠ್ ಅವರ ಕ್ಲಿನಿಕ್ ನಿಂಡ 60 ಕಿಮೀ ದೂರದಲ್ಲಿ ಎಲ್ಲಿಯೂ ಸಹ ಹೃದಯ ಸಮಸ್ಯೆಗಳಿಗೆ ಸಂಬಂಧಿಸಿದ ತಜ್ಞರು ಇಲ್ಲ. 65 ವರ್ಷದ ರೈತ ಹಝಾರ್ಸಾಬ್ ಎಂಬುವವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಮಹೇಶ್ ಗದಗಿನಮಠ್ ಅವರ ಕ್ಲಿನಿಕ್ ಗೆ ಬಂದಿದ್ದಾರೆ. ತಕ್ಷಣವೇ ಇಸಿಜಿ ಮಾಡಿ ಅದರಿಂದ ಬಂದ ಫಲಿತಾಂಶವನ್ನು ತಿಳಿದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ಪೋರ್ಟಬಲ್ ಇಸಿಜಿ ಸಾಧನ ನೆರವಾಗಿದೆ. 
ಮೊಬೈಲ್ ಗಾತ್ರವಿರುವ ಕಾರ್ಡಿಯೋಟ್ರಾಕ್ ಎಂಬ ಸಾಧನವನ್ನು ಡಾ.ಮಹೇಶ್ ಗದಗಿನಮಠ್ ಹೊಂದಿರುವುದು ಸ್ಥಳೀಯರಿಗೆ ನೆರವಾಗಿದ್ದು, ಕೇವಲ 250 ರೂಪಾಯಿಯಲ್ಲಿ ಇಸಿಜಿ ತಪಾಸಣೆ ಮುಗಿಯುತ್ತದೆ, ಒಂದು ವೇಳೆ ವೈದ್ಯರೇ ಸಾಧನವನ್ನು ಮನೆಗೆ ಕೊಂಡೊಯ್ದು ತಪಾಸಣೆ ನಡೆಸಿದರೆ 300 ರೂಪಾಯಿ ಪಡೆಯುತ್ತಾರೆ. ಆದರೂ ತುರ್ತುಪರಿಸ್ಥಿತಿಯಲ್ಲಿ ಈ ಪೋರ್ಟಬಲ್ ಇಸಿಜಿ ಸಾಧನ ಸ್ಥಳೀಯರ ಜೀವ ರಕ್ಷಕವಾಗಿ ಕೆಲಸ ಮಾಡುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com