ಕರ್ನಾಟಕಕ್ಕೆ 1,189 ಕೋಟಿ ರೂಪಾಯಿ ಜಿಎಸ್ ಟಿ ಪರಿಹಾರ: ಸಚಿವ ಕೃಷ್ಣ ಭೈರೇಗೌಡ

ಜಿಎಸ್ ಟಿ ಜಾರಿಯಿಂದಾಗಿ ಕಳೆದ 2 ತಿಂಗಳಲ್ಲಿ ಉಂಟಾದ ಆದಾಯದ ನಷ್ಟಕ್ಕೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 1,189 ಕೋಟಿ ರೂಪಾಯಿ ಪರಿಹಾರ ನೀಡಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.
ಕೃಷ್ಣ ಭೈರೇಗೌಡ
ಕೃಷ್ಣ ಭೈರೇಗೌಡ
Updated on: 
ಬೆಂಗಳೂರು: ಜಿಎಸ್ ಟಿ ಜಾರಿಯಿಂದಾಗಿ ಕಳೆದ 2 ತಿಂಗಳಲ್ಲಿ ಉಂಟಾದ ಆದಾಯದ ನಷ್ಟಕ್ಕೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 1,189 ಕೋಟಿ ರೂಪಾಯಿ ಪರಿಹಾರ ನೀಡಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ. 
ಕೃಷ್ಣ ಭೈರೇಗೌಡ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದು, ಜುಲೈ ಹಾಗೂ ಆಗಸ್ಟ್ ತಿಂಗಳಿಗೆ 1,189 ಕೋಟಿ ರೂಪಾಯಿ ಪರಿಹಾರ ಕೇಂದ್ರ ಸರ್ಕಾರದಿಂದ ದೊರೆತಿದೆ ಎಂದು ತಿಳಿಸಿದ್ದಾರೆ. ಜಿಎಸ್ ಟಿ ಜಾರಿಯಿಂದಾಗಿ ಕರ್ನಾಟಕಕ್ಕೆ ಉಂಟಾಗುತ್ತಿರುವ ನಷ್ಟ ಇನ್ನು ಒಂದೆರಡು ವರ್ಷ ಮಾತ್ರ ಇರಲಿದೆ. ಮುಂದಿನ ದಿನಗಳಲ್ಲಿ ಹಲವು ರಾಜ್ಯಗಳಿಗೆ ಆದಾಯ ನಷ್ಟ ಕಡಿಮೆಯಾಗಲಿದೆ. ಕೆಲವು ತಿಂಗಳ ನಂತರ ಪರಿಸ್ಥಿತಿ ಬದಲಾವಣೆಯಾಗಲಿದೆ ಎಂದು ಕೃಷ್ಣ ಭೈರೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  
"ರಾಜ್ಯದ ಆದಾಯ ಸಂಗ್ರಹದಲ್ಲಿ ಸುಧಾರಣೆಯಾಗುವ ವಿಶ್ವಾಸವಿದೆ. ಆದಾಯ ಸಂಗ್ರಹ ಸುಧಾರಣೆಯಾದರೆ ಪರಿಹಾರಕ್ಕಾಗಿ ಕೇಳುವ ಅಗತ್ಯವಿರುವುದಿಲ್ಲ, ಆದಾಯ ನಷ್ಟದ ಪ್ರಮಾಣವನ್ನು ನಿಖರವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ಜಿಎಸ್ ಟಿ ಜಾರಿಯಿಂದಾಗಿ ಜುಲೈ ತಿಂಗಳಲ್ಲಿ 600 ಕೋಟಿ ರೂ ನಷ್ಟವಾಗಿದೆ ಎಂದು ಸೆ.21 ರಂದು ಸಚಿವರು ಹೇಳಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com