ಗೌರಿ ಲಂಕೇಶ್ ಗೆ ಮರಣೋತ್ತರ ಅಂತಾರಾಷ್ಟ್ರೀಯ ಆನಾ ಪೊಲಿತ್ಕೊವಾಸಾಯ ಪ್ರಶಸ್ತಿ

ಹಿರಿಯ ಪತ್ರಕರ್ತೆ ದಿವಂಗತ ಗೌರಿ ಲಂಕೇಶ್ ಗೆ ಅನಾ ಪೊಲಿತ್ಕೋವಾಸಾಯ ಅಂತಾರಾಷ್ಟ್ರೀಯ ಪ್ರಶಸ್ತಿ ಘೋಷಿಸಲಾಗಿದೆ. ಈ ಪ್ರಶಸ್ತಿಯನ್ನು ....
ಗೌರಿ ಲಂಕೇಶ್
ಗೌರಿ ಲಂಕೇಶ್
ಬೆಂಗಳೂರು: ಹಿರಿಯ ಪತ್ರಕರ್ತೆ ದಿವಂಗತ  ಗೌರಿ ಲಂಕೇಶ್ ಗೆ ಅನಾ ಪೊಲಿತ್ಕೋವಾಸಾಯ ಅಂತಾರಾಷ್ಟ್ರೀಯ ಪ್ರಶಸ್ತಿ ಘೋಷಿಸಲಾಗಿದೆ. ಈ ಪ್ರಶಸ್ತಿಯನ್ನು ಪಡೆಯುತ್ತಿರುವ ಮೋದಲ ಭಾರತೀಯರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಪ್ರಶಸ್ತಿಯನ್ನ ಪಾಕಿಸ್ತಾನದಲ್ಲಿ ಇಸ್ಲಾಮಿಕ್ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸುತ್ತಿರುವ  ಗುಲಾಲಿ ಇಸ್ಮಾಯಿಲ್ ಜೊತೆ ಹಂಚಿಕೊಳ್ಳಲಾಗುವುದು.
ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗೌರಿ ಸಹೋದರಿ ಕವಿತಾ ಲಂಕೇಶ್, ಲಂಡನ್ ಮೂಲದ ರಾ ಇನ್ ವಾರ್ ವೇದಿಕೆ ಈ ಪ್ರಶಸ್ತಿಯನ್ನು ನೀಡುತ್ತಿದೆ ಎಂದು ಹೇಳಿದರು.
ಮಾನವ ಹಕ್ಕುಗಳು ಮತ್ತು ನ್ಯಾಯದ ಪರವಾಗಿ ಹೋರಾಟ ನಡೆಸುವ ದಿಟ್ಟ ಮಹಿಳೆಯರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ರಷ್ಯಾದಿಂದ ಇ ಮೇಲ್ ಮೂಲಕ ನಮಗೆ ಈ ಮಾಹಿತಿ ಲಭ್ಯವಾಗಿದೆ ಎಂದು ಕವಿತಾ ತಿಳಿಸಿದ್ದಾರೆ. 
ಚೆಚೆನ್ಯಾ ಯುದ್ಧದಲ್ಲಿ  ತೀವ್ರ ತೊಂದರೆಗೊಳಗಾದ ನಾಗರಿಕರ ವಿರುದ್ದ ಹೋರಾ ನಡೆಸುತ್ತಿದ್ದ  ರಷ್ಯನ್ ಪತ್ರಕರ್ತೆ ಆನಾ ಪೊಲಿತ್ಕೋವಾಸ್ಕಾಯ ಅವರನ್ನು 2006ರ  ಅಕ್ಚೋಬರ್ 7 ರಂದು ಹತ್ಯೆ ಮಾಡಲಾಗಿತ್ತು, ನಂತರ ಹೋರಾಟ ನಡೆಸುವ ಮಹಿಳೆಯರಿಗೆ ಗೌರವ ನೀಡಲೆಂದು ದಿಟ್ಟ ಮಹಿಳೆಯರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com