ಮೀನುಗಳ ಸಾಕಣೆಗೆ ಕೆರೆಯನ್ನು ಭೋಗ್ಯಕ್ಕೆ ಪಡೆದಿದ್ದ ಶ್ರೀನಿವಾಸ್, ತಮಗೆ ಸುಮಾರು 15 ಲಕ್ಷ ರೂಪಾಯಿ ನಷ್ಟವಾಗಿದೆ ಎನ್ನುತ್ತಾರೆ. ನಾನು ಈ ಕೆರೆಯನ್ನು ಭೋಗ್ಯಕ್ಕೆ ಪಡೆದಿದ್ದು ಕಾಟ್ಲ ಮತ್ತು ರೊಹು ಮೀನನ್ನು ಸಾಕುತ್ತಿದ್ದೇನೆ. ಇದಕ್ಕೆ ಸಾಕಷ್ಟು ಬಂಡವಾಳ ಹಾಕಿದ್ದೇನೆ. ಕಳೆದ ಮೂರು ದಿನಗಳಲ್ಲಿ ಸಾವಿರಾರು ಮೀನುಗಳು ಮೃತಪಟ್ಟಿವೆ. ಬಿಬಿಎಂಪಿಯ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ಸಲ್ಲಿಸಿದ್ದೇನೆ, ಆದರೆ ಇದು ಒಳ ಚರಂಡಿ ನೀರಿನ ಸೇರ್ಪಡೆಯಿಂದಾಗಿದೆ ಎಂದು ಬೇಜವಾಬ್ದಾರಿ ಉತ್ತರ ನೀಡಿದ್ದಾರೆ ಎನ್ನುತ್ತಾರೆ.