ದಾವಣಗೆರೆ: ಮಾನಸಿಕ ಅಸ್ವಾಸ್ಥ್ಯ, ಖಿನ್ನತೆಯ ವಿರುದ್ಧ ಜಾಗೃತಿ ಗಾಗಿ ಲಿವ್, ಲವ್ ಲಾಫ್ ಫೌಂಡೇಷನ್ ಹೆಸರಿನ ಫೌಂಡೇಷನ್ ತೆರೆದಿರುವ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಇಂದು ದಾವಣಗೆರೆ ಜಿಲ್ಲೆಗೆ ಭೇಟಿ ನೀಡಿದ್ದರು.
ಜಿಲ್ಲೆಯ ಜಗಳೂರು ತಾಲ್ಲೂಕಿನ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಬಂದಿದ್ದ ಪಡುಕೋಣೆ ಸಂಸ್ಥೆಯ ನೆರವಿನೊಂದಿಗೆ ತಾಲ್ಲೂಕಿನಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಹಾಗೂ ಚಿಕಿತ್ಸೆಗೆ ಆರ್ಥಿಕ ನೆರವು ನೀಡಿದ್ದಾರೆ.
ಪಲ್ಲಾಗಟ್ಟೆ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಆಗಮಿಸಿದ ದೀಪಿಕಾ ಪಡುಕೋಣೆ ಅಲ್ಲಿನ ವೈದ್ಯರು ಹಾಗೂ ಆಶಾ ಕಾರ್ಯಕರ್ತೆಯರ ಜತೆ ಸಂವಾದ, ಸಮಾಲೋಚನೆ ನಡೆಸಿದ್ದಾರೆ.