ನಿನ್ನೆ ಬೆಂಗಳೂರಿನ ಕುರುಬರ ಹಳ್ಳಿಯ ವೆಂಕಟರಮಣಸ್ವಾಮಿ ದೇವಾಲಯ ಅರ್ಚಕ ವಾಸುದೇವ್ ಅವರು ನಡೆದುಕೊಂಡು ಹೋಗುತ್ತಿದ್ದಾಗ ಫುಟ್ ಪಾತ್ ಮೇಲಿನ ಸ್ಲಾಬ್ ಮುರಿದು ಅವರು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ನಾಪತ್ತೆಯಾಗಿದ್ದ ಅರ್ಚಕ ವಾಸುದೇವ್ ಅವರಿಗಾಗಿ ರಾತ್ರಿ ಇಡೀ ಶೋಧ ನಡೆಸಲಾಗಿತ್ತು. ಅಗ್ನಿಶಾಮಕ ದಳ ಹಾಗೂ ಎಸ್ ಡಿಆರ್ ಎಫ್ ತಂಡದ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದರು. ಇದೀಗ ಅರ್ಚಕ ವಾಸುದೇವ್ ಅವರು ಶವವಾಗಿ ಪತ್ತೆಯಾಗಿದ್ದು, ಘಟನೆ ನಡೆದ ಸ್ಥಳಕ್ಕಿಂತ ಅರ್ಧ ಕಿಲೋ ಮೀಟರ್ ದೂರದ ಸುಮನಹಳ್ಳಿಯ ಬಿಡ್ಜ್ ಬಳಿಯ ರಾಜಕಾಲುವೆಯಲ್ಲಿ ಅರ್ಚಕ ವಾಸುದೇವ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.