ಮೈಸೂರು: ಚಾಲಕನ ನಿರ್ಲಕ್ಷ್ಯಕ್ಕೆ ಕಾಲು ಕಳೆದುಕೊಂಡ ವಿದ್ಯಾರ್ಥಿ

ಚಾಲಕ ಮತ್ತು ನಿರ್ವಾಹಕನ ನಿರ್ಲಕ್ಷ್ಯದಿಂದಾಗಿ ಚಲಿಸುತ್ತಿದ್ದ ಬಸ್ ನ್ನು ಹತ್ತಲು ಹೋಗಿ ಕೆಳಗೆ ಬಿದ್ದು ಕಾಳಿ ಕಳೆದುಕೊಂಡಿರುವ ಹೃದಯ ವಿದ್ರಾವಕ ಘಟನೆಯೊಂದು ಮೈಸೂರು ನಗರ ಬಸ್ ನಿಲ್ದಾಣದಲ್ಲಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮೈಸೂರು: ಚಾಲಕ ಮತ್ತು ನಿರ್ವಾಹಕನ ನಿರ್ಲಕ್ಷ್ಯದಿಂದಾಗಿ ಚಲಿಸುತ್ತಿದ್ದ ಬಸ್ ನ್ನು ಹತ್ತಲು ಹೋಗಿ ಕೆಳಗೆ ಬಿದ್ದು ಕಾಳಿ ಕಳೆದುಕೊಂಡಿರುವ ಹೃದಯ ವಿದ್ರಾವಕ ಘಟನೆಯೊಂದು ಮೈಸೂರು ನಗರ ಬಸ್ ನಿಲ್ದಾಣದಲ್ಲಿ ಸೋಮವಾರ ಸಂಜೆ ನಡೆದಿದೆ. 
ಬನ್ನೂರು ಪಟ್ಟಣದ ನಿವಾಸಿ ಪುಟ್ಟಸ್ವಾಮಿಯವರ ಪುತ್ರ ಉಲ್ಲೇಖ್ (14) ಕಾಲು ಕಳೆದುಕೊಂಡ ವಿದ್ಯಾರ್ಥಿಯಾಗಿದ್ದಾನೆ. ಪ್ರಸ್ತುತ ವಿದ್ಯಾರ್ಥಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ.
ಬಸ್ ಹತ್ತುವುದಕ್ಕೂ ಮುನ್ನವೇ ಚಾಲಕ್ ಬಸ್ ನ್ನು ಚಲಿಸಿದ್ದ. ಬಳಿಕ ನಿಯಂತ್ರಣ ತಪ್ಪಿ ಬಸ್ಸಿನಿಂದ ಕಳಗೆ ಬಿದ್ದೆ ಎಂದು ವಿದ್ಯಾರ್ಥಿ ಹೇಳಿದ್ದಾರೆ. 
ವಿದ್ಯಾರ್ಥಿ ತಂದೆ ಪುಟ್ಟಸ್ವಾಮಿ ಮಾತನಾಡಿ, ನನ್ನ ಮಗ ಕೆಎ 09 ಎಫ್ 5277 ಬಸ್ ನ್ನು ಹತ್ತಿದ್ದ. ಪ್ಲಾಟ್'ಫಾರ್ಮ 1 ರಲ್ಲಿ ನಿರ್ವಾಹಕ ಪುತ್ರನ ತೋಳನ್ನು ಹಿಡಿದು ಕೆಳಗೆ ತಳ್ಳಿದ್ದಾನೆ. ಈ ವೇಳೆ ಚಾಲಕ ಬಸ್ಸನ್ನು ಚಲಿಸಲು ಆರಂಭಿಸಿದ್ದಾರೆ. ಬಳಿಕ ನಿಯಂತ್ರಣ ತಪ್ಪಿ ಉಲ್ಲೇಖ್ ಕೆಳಗಿ ಬಿದಿದ್ದಾನೆ. ಈ ವೇಳೆ ಬಸ್ಸಿನ ಚಕ್ರ ಪುತ್ರನ ಕಾಲಿನ ಮೇಲೆ ಹರಿದಿದೆ ಎಂದು ಆರೋಪಿಸಿದ್ದಾರೆ. 
ಇನ್ನು ಘಟನೆ ಕುರಿತಂತೆ ಸ್ಪಷ್ಟನೆ ನೀಡಿರುವ ಕೆಎಸ್'ಆರ್'ಟಿಸಿ ಮೈಸೂರು ವಿಭಾಗದ ನಿಯಂತ್ರಕ ಕೆ.ಹೆಚ್. ಶ್ರೀನಿವಾಸ್ ಅವರು, ಚಲಿಸುತ್ತಿದ್ದ ಬಸ್ಸನ್ನು ಹತ್ತಲು ವಿದ್ಯಾರ್ಥಿ ಹೋಗಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ. ಈಗಾಗಲೇ ನಮ್ಮ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದು, ರೂ.5000 ವೈದ್ಯಕೀಯ ವೆಚ್ಚ ನೀಡಲು ಹೋಗಿದ್ದಾರೆ. ಆದರೆ, ಬಾಲಕನ ಪೋಷಕರು ನಿರಾಕರಿಸಿದ್ದಾರೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com