ಆನ್ ಲೈನ್ ನಲ್ಲಿ ಕೇವಲ 12 ನಿಮಿಷದಲ್ಲಿ ಪ್ರಾಪರ್ಟಿ ರಿಜಿಸ್ಟ್ರೇಷನ್!

ಆಸ್ತಿ ನೊಂದಣಿ ಮಾಡಲು ವರ್ಷ, ತಿಂಗಳುಗಳ ಕಾಲ ಕಾಯಬೇಕಿಲ್ಲ. ಆಸ್ತಿ ನೊಂದಣಿ ಮತ್ತು ಕರಾರು ನೊಂದಣಿ ಈಗ ಸುಲಭವಾಗಿದ್ದು, ನೊಂದಣಿ ಮತ್ತು ಮುದ್ರಾಂಕ ಇಲಾಖೆ ನೊಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲು ಕಾವೇರಿ ಆನ್ ಲೈನ್ ಎಂಬ ಅಂತರ್ಜಾಲ ತಾಣವನ್ನು ಆರಂಭಿಸಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಆಸ್ತಿ ನೊಂದಣಿ ಮಾಡಲು ವರ್ಷ, ತಿಂಗಳುಗಳ ಕಾಲ ಕಾಯಬೇಕಿಲ್ಲ. ಆಸ್ತಿ ನೊಂದಣಿ ಮತ್ತು ಕರಾರು ನೊಂದಣಿ ಈಗ ಸುಲಭವಾಗಿದ್ದು, ನೊಂದಣಿ ಮತ್ತು ಮುದ್ರಾಂಕ ಇಲಾಖೆ ನೊಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲು ಕಾವೇರಿ ಆನ್ ಲೈನ್ ಎಂಬ ಅಂತರ್ಜಾಲ ತಾಣವನ್ನು ಆರಂಭಿಸಿದೆ. 
ನೊಂದಣಿ ಮತ್ತು ಮುದ್ರಾಂಕ ಇಲಾಖೆ ಆನ್'ಲೈನ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಇನ್ನು ಮುಂದೆ 12 ನಿಮಿಷಗಳಲ್ಲಿ ಆಸ್ತಿಗಳನ್ನು ಸುಲಭವಾಗಿ ನೊಂದಣಿ ಮಾಡಿಸಬಹುದಾಗಿದೆ. 
ಒಂದೇ ದಿನದಲ್ಲಿ ಆಸ್ತಿ ನೊಂದಣಿ ಮಾಡಿಸಿ ಅಧಿಕೃತ ಪತ್ರವನ್ನು ಪಡೆದುಕೊಳ್ಳುವ ವ್ಯವಸ್ಥೆಯನ್ನು ನೊಂದಣಿ ಮತ್ತು ಮುದ್ರಾಂಕ ಇಲಾಖೆ ಜಾರಿಗೆ ತಂದಿದ್ದು, ಇನ್ನೊಂದು ವಾರಗಳಲ್ಲಿ ಈ ಕುರಿತ ಕಾರ್ಯಗಳು ಆರಂಭಗೊಳ್ಳಲಿವೆ. ಕಾವೇರಿ ಆನ್ ಲೈನ್ ಅಂತರ್ಜಾಲ ತಾಣದಲ್ಲಿ ನೊಂದಣಿ ಜೊತೆಗೆ ಬೇಕಾದ ನೊಂದಣಿ ಪ್ರತಿಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. 
ದಾಖಲೆಗಳು ಸರಿಯಾಗಿವೆ ಎಂದಾದರೆ ಅಧಿಕಾರಿಗಳು 12 ನಿಮಿಷಗಳೊಳಗೆ ಅನುಮೋದನೆಗೊಳಿಸುತ್ತಾರೆ. ವ್ಯವಸ್ಥಿತವಾಗಿ ಆದರೆ, ಸಾಮಾನ್ಯವಾಗಿ 45 ನಿಮಿಷಗಳು ತೆಗೆದುಕೊಳ್ಳುತ್ತದೆ. ಆದರೆ, ಈ ವ್ಯವಸ್ಥೆಯಿಂದಾಗಿ ನಾವು ಕೇವಲ ಜನರ ಸಮಯವನ್ನಷ್ಟೇ ಅಲ್ಲದೆ, ಸಿಬ್ಬಂದಿಗಳ ಹೊರೆಯನ್ನೂ ಕಡಿಮೆ ಮಾಡುತ್ತಿದ್ದೇವೆಂದು ಅಧಿಕಾರಿ ಡಾ.ಕೆ.ವಿ. ತ್ರಿಲೋಕ್ ಚಂದ್ರ ಅವರು ಹೇಳಿದ್ದಾರೆ.
ಕರಾರು ನೊಂದಣಿ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಕುರಿತಂತೆ ಸಾಕಷ್ಟು ದೂರುಗಳು ಬಂದಿದ್ದವು. ಆನ್ ಲೈನ್ ವ್ಯವಸ್ಥೆ ಜನರಿಗೆ ಸಹಾಯಕವಾಗಲಿದ್ದು, ಇದರಿಂದ ಪಾರದರ್ಶಕತೆ ಹೆಚ್ಚಾಗಲಿದೆ. 
ಮೊಬೈಲ್ ಸೇವೆಗಳನ್ನು ಒದಗಿಸಲು ಚಿಂತನೆಗಳನ್ನು ನಡೆಸಲಾಗುತ್ತಿದೆ. ಪ್ರತೀ ಹಂತದಲ್ಲಿ ಜನರ ಮೊಬೈಲ್ ಗಳಿಗೆ ಸಂದೇಶಗಳನ್ನು ರವಾನಿಸಲಾಗುತ್ತದೆ. ಪೂರ್ವ-ನೊಂದಣಿ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಜನರಿಗೆ ಗೊತ್ತುಪಡಿಸಿದ ಸಂಖ್ಯೆ, ದಿನಾಂಕ ಹಾಗೂ ಸಮಯವನ್ನು ನೀಡಲಾಗುತ್ತದೆ. ನೊಂದಣಿ ಕಚೇರಿಗೆ ಹೋದ ಸಂದರ್ಭದಲ್ಲಿ ಜನರು ತಮ್ಮ ಮೊಬೈಲ್ ನಲ್ಲಿ ಅಪ್ಲಿಕೇಶನ್ ಕುರಿತ ಮಾಹಿತಿಗಳನ್ನು ತೋರಿಸಬೇಕು ಎಂದು ತಿಳಿಸಿದ್ದಾರೆ. 
ಖಾಳಿ ಜಾಗ, ಫ್ಲ್ಯಾಟ್, ಮನೆಗಳು, ವಾಣಿಜ್ಯ ಕಟ್ಟಡಗಳು, ಕೃಷಿ ಭೂಮಿ, ಖಾಲಿ ಭೂಮಿ ಹಾಗೂ ಉಡುಗೊರೆಯಾಗಿ ಬಂದ ಭೂಮಿಗಳನ್ನು ನೊಂದಣಿ ಮಾಡಿಸಬಹುದಾದ ಆಸ್ತಿಗಳಾಗಿವೆ. 
ಪ್ರತೀನಿತ್ಯ ನೊಂದಣಿ ಕಚೇರಿಯಲ್ಲಿ 4,500 ನೊಂದಣಿಗಳನ್ನು ಮಾಡಲಾಗುತ್ತಿದೆ. ಈ ಮೊದಲು ನೊಂದಣಿ ಮಾಡಿಸುತ್ತಿದ್ದ ಜನರು ಉಪ ನೊಂದಣಿ ಕಚೇರಿಗೆ ಭೇಟಿ ನೀಟಿ, ಅರ್ಜಿ ಪಡೆದು ಅರ್ಜಿಯಲ್ಲಿ ಎಲ್ಲಾ ರೀತಿಯ ಮಾಹಿತಿಗಳನ್ನು ಭರ್ತಿ ಮಾಡಿ, ಸಲ್ಲಿಸುತ್ತಿದ್ದರು. ಪ್ರಕ್ರಿಯೆ ಪೂರ್ಣಗೊಳ್ಳಲು 45 ನಿಮಿಷಗಳ ಕಾಲ ಬೇಕಾಗುತ್ತದೆ. ಇದೀಗ ಜನರು ಆನ್ ಲೈನ್ ನಲ್ಲಿಯೇ ಅರ್ಜಿಯನ್ನು ಪಡೆದು ಮಾಹಿತಿಗಳನ್ನು ಭರ್ತಿ ಮಾಡಿ ಸಲ್ಲಿಸಬಹುದಾಗಿದೆ. ಬಳಿಕ ಜನರ ಮೊಬೈಲ್ ಸಂಖ್ಯೆಗೇ ಭೇಟಿ ನೀಡಬೇಕಿರುವ ದಿನಾಂಕ ಹಾಗೂ ಸಮಯವನ್ನು ನೀಡಲಾಗುತ್ತದೆ. ಜನರ ಮೊಬೈಲ್ ಗಳಿಗೇ ಅಧಿಕಾರಿಗಳು ಆಗಾಗ ಮಾಹಿತಿಗಳನ್ನು ರವಾನಿಸುತ್ತಾರೆ. 
ರಾಜ್ಯದಲ್ಲಿ 250 ಉಪ ನೊಂದಣಿ ಕಚೇರಿಗಳಿದ್ದು, ಬೆಂಗಳೂರು ನಗರದಲ್ಲಿಯೇ ಒಟ್ಟು 48 ಕಚೇರಿಗಳಿಗೆ. ಇದರಲ್ಲಿ ಬೆಂಗಳೂರಿನ 5 ಕಚೇರಿಗಳು ಸೇರಿ 34 ಜಿಲ್ಲಾ ನೊಂದಣಿ ಕಚೇರಿಗಳಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com