ಕರಾವಳಿಗೂ ಕಾಲಿಟ್ಟ ಬ್ಲೂ ವೇಲ್ ಭೂತ: ಕೈ ಕುಯ್ದುಕೊಂಡ 9ನೇ ತರಗತಿ ವಿದ್ಯಾರ್ಥಿ

ದೇಶದ್ಯಾಂತ ಹಲವು ಮುಗ್ದ ಮಕ್ಕಳನ್ನು ಬಲಿ ಪಡೆದುಕೊಳ್ಳುತ್ತಿರುವ ಬ್ಲೂವೇಲ್ ಡೆಡ್ಲಿ ಗೇಮ್ ಚಾಲೆಂಜ್ ಕರಾವಳಿ ಗೂ ವ್ಯಾಪಿಸಿದೆ...
ಬ್ಲೂ ವೇಲ್ ಚಾಲೆಂಜ್
ಬ್ಲೂ ವೇಲ್ ಚಾಲೆಂಜ್
ಮಂಗಳೂರು:  ದೇಶದ್ಯಾಂತ ಹಲವು ಮುಗ್ದ ಮಕ್ಕಳನ್ನು ಬಲಿ ಪಡೆದುಕೊಳ್ಳುತ್ತಿರುವ ಬ್ಲೂವೇಲ್ ಡೆಡ್ಲಿ ಗೇಮ್ ಚಾಲೆಂಜ್ ಕರಾವಳಿ ಗೂ ವ್ಯಾಪಿಸಿದೆ.
ಮಂಗಳೂರಿನ ಶಾಲೆಯೊಂದರಲ್ಲಿ 9ನೇ ತರಗತಿ ಓದುತ್ತಿರುವ 15 ವರ್ಷದ ಬಾಲಕ ಬ್ಲೂವೇಲ್ ಗೇಮ್ ಗೆ ಯತ್ನಿಸಿ ಅಪಾಯದಿಂದ ಪಾರಾಗಿದ್ದಾನೆ. 
ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ  ಒಂಬತ್ತನೇ ತರಗತಿ ಓದುತ್ತಿರುವ ವಿದ್ಯಾರ್ಥಿಗೆ ಇತ್ತೀಚೆಗಷ್ಟೇ ಪೋಷಕರು ಮೊಬೈಲ್‌ವೊಂದನ್ನು ಕೊಡಿಸಿದ್ದರು.ಈತ ತನ್ನ ಕೈ ಮೇಲೆ ತಿಮಿಂಗಿಲ ಆಕಾರದಲ್ಲಿ ಕೈ ಕೊಯ್ದುಕೊಂಡಿದ್ದು ಆತನ ಸಹಪಾಠಿಗಳ ಗಮನಕ್ಕೆ ಬಂದಿದೆ. ನಂತರ ವಿದ್ಯಾರ್ಥಿಗಳು ಶಿಕ್ಷಕರಿಗೆ ವಿಷಯ ತಿಳಿಸಿದ್ದಾರೆ.
ಶಿಕ್ಷಕರು ವಿದ್ಯಾರ್ಥಿಯನ್ನು ಪ್ರಶ್ನಿಸಿದಾಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ, ನಂತರ ಆತನ ಪೋಷಕರಿಗೆ ವಿಷಯ ತಿಳಿಸಿದ ಶಾಲಾ ಆಡಳಿತ ವರ್ಗ ಆತನ ಕೈಗೆ ಮೊಬೈಲ್ ನೀಡದಂತೆ ಪೊಲೀಸರಿಗೆ ತಾಕೀತು ಮಾಡಿಗೆ.
ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ, ಕೌನ್ಸಲಿಂಗ್ ಮಾಡಿಸಲಾಗಿದೆ, ಈ ಪ್ರಕರಣದಿಂದ ಆಘಾತಗೊಂಡಿರುವ ಪೋಷಕರು, ವಿದ್ಯಾರ್ಥಿಗಳು ಮತ್ತು ಶಾಲಾ ಆಡಳಿತ ಮಂಡಳಿ, ಬ್ಲೂವೇಲ್ ಗೇಮ್  ಕೆಟ್ಟ ಪರಿಣಾಮ ಗಳನ್ನ ವಿವರಿಸುವ ಭಿತ್ತಿ ಪತ್ರ ಹಂಚಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com