

ಬೆಂಗಳೂರು: ಬೆಂಅಗಳೂರಿನಲ್ಲಿ ಮಳೆಯ ಅಬ್ಬರಕ್ಕೆ ಪ್ರಮುಖ ರಸ್ತೆಗಳಲ್ಲಿ ನೀರು ಹರಿದು ರಸ್ತೆಗಳು ಜಲಾವೃತವಾಗುವುದು ಮಾಮೂಲಿ ಎಂದಾಗಿದೆ. ರಸ್ತೆಗಳ ತುಂಬಾ ಹೊಂಡ ಗುಂಡಿಗಳು ಎದ್ದಿವೆ. ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗುತ್ತಿದೆ. ಹಲವೆಡೆ ಮರಗಳು ನೆಲಕ್ಕೆ ಉರುಳುತ್ತಿವೆ. ಇದರಿಂದ ಟ್ರಾಫಿಕ್ ಕಿರಿಕಿರಿಯಾಗುತ್ತಿದೆ. ಮಳೆ ಬಂದಾಗ, ಸಾಮಾನ್ಯ ದಿನಗಳಲ್ಲೂ ಬೆಂಗಳೂರಿನಲ್ಲಿ ಈ ಸಮಸ್ಯೆ ಸಾಮಾನ್ಯ.