ಸೆ.13 ರಂದು ಹಣಕ್ಲಾಸು ಪುಸ್ತಕ ಬಿಡುಗಡೆ

ಕನ್ನಡಪ್ರಭ.ಕಾಮ್ ನ ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಅವರ ಅಂಕಣಗಳ ಸಂಗ್ರಹ "ಹಣಕ್ಲಾಸು" ಪುಸ್ತಕ ಹಾಗೂ ಬಿಆರ್ ಪ್ರಸಾದ್ ಅವರ ಶಿಕ್ಷಕರ ಡೈರಿಯಿಂದ ಪುಸ್ತಕ ಸೆ.13 ರಂದು...
ಹಣಕ್ಲಾಸು
ಹಣಕ್ಲಾಸು
Updated on: 
ಬೆಂಗಳೂರು: ಕನ್ನಡಪ್ರಭ.ಕಾಮ್ ನ ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಅವರ ಅಂಕಣಗಳ ಸಂಗ್ರಹ "ಹಣಕ್ಲಾಸು" ಪುಸ್ತಕ ಹಾಗೂ ಬಿಆರ್ ಪ್ರಸಾದ್ ಅವರ ಶಿಕ್ಷಕರ ಡೈರಿಯಿಂದ ಪುಸ್ತಕ ಸೆ.13 ರಂದು ಬಿಡುಗಡೆಯಾಗಲಿದೆ. 
ಸಮೃದ್ಧ ಸಾಹಿತ್ಯ ಪ್ರಕಾಶನ ಹಣಕ್ಲಾಸು ಹಾಗೂ ಶಿಕ್ಷಕರ ಡೈರಿಯಿಂದ ಪುಸ್ತಕಗಳನ್ನು ಪ್ರಕಟಿಸಿದ್ದು, ಸೆ.13 ರ ಸಂಜೆ 6:00 ಕ್ಕೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಬಿಡುಗಡೆಯಾಗಲಿದೆ. 
ಬೆಂಗಳೂರು ಇತಿಹಾಸ ತಜ್ಞರಾದ ಸುರೇಶ್ ಮೂನಾ,  ವಿಜ್ಞಾನಿಗಳು ಹಾಗೂ ಅಂಕಣಕಾರರು ಆದ ಸುಧೀಂದ್ರ ಹಾಲ್ದೊಡ್ಡೇರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಸಮೃದ್ಧ ಪರಿಚಯ ಸೇವ ಪ್ರಶಸ್ತಿ ಪುರಸ್ಕೃತರಾದ ವಿನೋದ ಪ್ರಕಾಶ್, ವಿಜಯ ನಾಯಕ್, ಶ್ರೀದೇವಿ ರೆಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com