1.2 ಬಿಲಿಯನ್ ಮಂದಿಗೆ ನೊಟೀಸ್ ಕಳುಹಿಸಲಿ: ಮೇಧಾ ಪಾಟ್ಕರ್

ಗೌರಿ ತಮ್ಮ ಲೇಖನಗಳನ್ನು ಪ್ರಚೋದನಾಕಾರಿಯಾಗಿ ಬರೆಯುತ್ತಿರಲಿಲ್ಲ, ಆಕೆ ಯಾವಾಗಲೂ, ದಲಿತರು, ಆದಿವಾಸಿಗಳು, ಮತ್ತು ಹಿಂದುಳಿದ ವರ್ಗಗಳ...
ಗೌರಿ ಲಂಕೇಶ್
ಗೌರಿ ಲಂಕೇಶ್
ಬೆಂಗಳೂರು: ಗೌರಿ ತಮ್ಮ ಲೇಖನಗಳನ್ನು ಪ್ರಚೋದನಾಕಾರಿಯಾಗಿ ಬರೆಯುತ್ತಿರಲಿಲ್ಲ,  ಆಕೆ ಯಾವಾಗಲೂ, ದಲಿತರು, ಆದಿವಾಸಿಗಳು, ಮತ್ತು ಹಿಂದುಳಿದ ವರ್ಗಗಳ ಬಗ್ಗೆ ಸದಾ ದನಿಯೆತ್ತುತ್ತಿದ್ದರು. ಅಧಿಕಾರದಲ್ಲಿರುವ ಕೆಲ ಹೇಡಿಗಳ ವಿರುದ್ಧ ಮಾತನಾಡಿದ್ದಕ್ಕೆ ಗೌರಿ ಅವರ ವಿರೋಧ ಕಟ್ಟಿಕೊಂಡಿದ್ದರು ಎಂದು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಹೇಳಿದ್ದಾರೆ.
ಪತ್ರಕರ್ತೆ  ಗೌರಿ ಲಂಕೇಶ್ ಹತ್ಯೆ ಖಂಡಿಸಿ ನಗರದ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ನಾನು ಗೌರಿ ಪ್ರತಿರೋಧ ಸಮಾವೇಶದಲ್ಲಿ ಮಾತನಾಡಿದ ಅವರು, ಮಾತನಾಡಿದ್ದಕ್ಕೆ ಗೌರಿಯನ್ನು ಕೊಲ್ಲಲಾಯಿತು. ರಾಮಚಂದ್ರ ಗುಹಾ ಮಾತನಾಡಿದ್ದಕ್ಕೆ, ನೊಟೀಸ್ ನೀಡಲಾಗಿದೆ, 1.2 ಬಿಲಿಯನ್ ಜನಕ್ಕೆ ಈಗ ನೊಟೀಸ್ ನೀಡಲಿ ಎಂದು ಸವಾಲು ಹಾಕಿದ ಅವರು ಮೋದಿ ಏಕೆ ಮಾತನಾಡುತ್ತಿಲ್ಲ, ಮೋದಿ ಎಲ್ಲಿ ಎಂದು ಪ್ರಶ್ನಿಸಿದರು. 
ಇನ್ನೂ ಇದೇ ವೇಳೆ ಮಾತನಾಡಿದ ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ, ನಾನು ಭಾರತೀಯ ಪ್ರಜಾಪ್ರಭುತ್ವದ ಸೈನಿಕ, ಅಧಿಕಾರದಲ್ಲಿರುವವರು ನಿರಂಕುಶಾಧಿಕಾರಿಗಳಂತೆ ಮೆರೆಯುತ್ತಿದ್ದಾರೆ. ಹಿಂದೂ ರಾಷ್ಟ್ರ ಬೇಕೆಂದು ಬಯಸಿದವರಿಗೆ ಮಹಾತ್ಮ ಗಾಂಧಿ ಬಲಿಪಶುವಾದರು, ತಮ್ಮ ತತ್ವ ಸಿದ್ದಾಂತಗಳಿಂದ ಗೌರಿ ಅವರನ್ನು ಹೊರ ಹಾಕಲು ಸಾಧ್ಯವೇ ಇಲ್ಲ, ಅವರ ತತ್ವಗಳು ಬುಲೆಟ್ ವಿರುದ್ಧ ಹೋರಾಡುತ್ತವೆ ಎಂದು ಹೇಳಿದ್ದಾರೆ. ಸಾಹಿತಿ ಚಂದ್ರ ಶೇಖರ್ ಪಾಟೀಲ್ ಗೌರಿ ಲಂಕೇಶ್ ನೆನಪಿಗಾಗಿ ಶೋಕಗೀತೆ ಹಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com