ಜಲಂಧರ್ ನಿಂದ ತಪ್ಪಿಸಿಕೊಂಡಿದ್ದ ಬಾಲಕಿ ಬೆಂಗಳೂರು ರೈಲು ನಿಲ್ದಾಣದಲ್ಲಿ ಪತ್ತೆ

ಪಂಜಾಬ್ ನ ಜಲಂಧರ್ ನಿಂದ ಒಂದು ವಾರ ಹಿಂದೆ ಕಾಣೆಯಾಗಿದ್ದ 13 ವರ್ಷದ ಬಾಲಕಿ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾಳೆ. ಬೆಂಅಗಳೂರಿನ ಪೋಲೀಸರು ಅವಳನ್ನು ಮತ್ತೆ ಅವಳ ಪೋಷಕರೊಂದಿಗೆ ಸೇರಿಸಿದ್ದಾರೆ.
ಪೋಲೀಸ್ ರಕ್ಷಣೆಯಲ್ಲಿ ಪೋಷಕರನ್ನು ಸೇರಿದ ಬಾಲಕಿ
ಪೋಲೀಸ್ ರಕ್ಷಣೆಯಲ್ಲಿ ಪೋಷಕರನ್ನು ಸೇರಿದ ಬಾಲಕಿ
ಬೆಂಗಳೂರು: ಪಂಜಾಬ್ ನ ಜಲಂಧರ್ ನಿಂದ ಒಂದು ವಾರ ಹಿಂದೆ ಕಾಣೆಯಾಗಿದ್ದ 13 ವರ್ಷದ ಬಾಲಕಿ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾಳೆ. ಬೆಂಅಗಳೂರಿನ ಪೋಲೀಸರು ಅವಳನ್ನು ಮತ್ತೆ ಅವಳ ಪೋಷಕರೊಂದಿಗೆ ಸೇರಿಸಿದ್ದಾರೆ.
ಜಲಂಧರ್ ನಿಂದ ಹೊರಟಿದ್ದ ಬಾಲಕಿ ಎರ್ಡು ರೈಲುಗಳಾನ್ನು ಬದಲಿಸಿ ಬೆಂಗಳೂರು ತಲುಪಿದ್ದಳು.
ತನ್ನ ಸೋದರ ಸಂಬಂಧಿ ರಾಜೇಶ್ ಕುಮಾರ್ ಜೊತೆಯಲ್ಲಿ ಆಗಮಿಸಿದ್ದ ಬಾಲಕಿಯ ತಾಯಿ ಲಲಿತಾ ದೇವಿ ನಿನ್ನೆ ಸಂಜೆ ಕರ್ನಾಟಕ ಎಕ್ಸ್ ಪ್ರೆಸ್ ಮೂಲಕ ಬೆಂಗಳೂರು ಸಿಟಿ ರೈಲು ನಿಲ್ದಾಣ ತಲುಪಿದರು. 
ನನ್ನ ಮಗಳು ಕ್ಷೇಮವಾಗಿದ್ದಾಳೆ. ದೇಶದ ಎಲ್ಲೆಡೆ ರೈಲ್ವೆ ಮಂದಳಿ ಸ್ಥಾಪಿಸಿರುವ ಮಕ್ಕಳ ರಕ್ಷಣಾ ತಂದಕ್ಕೆ ನನ್ನ ಧನ್ಯವಾದಗಳು  ಎಂದು ಬಾಲಕಿಯ ತಾಯಿ ರೈಲ್ವೆ ಸಿಬ್ಬಂದಿಗಳಿಗೆ ಧನ್ಯವಾದ ಹೇಳಿದ್ದಾರೆ
ಇದಕ್ಕೂ ಮುನ್ನ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಪೋಲೀಸ್ ಜೀನಾ ಪಿಂಟೊ, ಭಾನುವಾರ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಕುಳಿತಿದ್ದ ಬಾಲಕಿಯನ್ನು ಪತ್ತೆಹಚ್ಚಿದರು.
ರೈಲು ನಿಲ್ದಾಣದ ನಾಲ್ಕನೇ ಫ್ಲಾಟ್ ಫಾರಂ ನಲ್ಲಿ ಕುಳಿತಿದ್ದ ಬಾಲಕಿ ರಂಜಿತಾ ಕುಮಾರಿ(ಹೆಸರು ಬದಲಿಸಲಾಗಿದೆ) ಯನ್ನು ಎಕ್ಸ್ ಪ್ರೆಸ್  ವರದಿಗಾರರು ಭೇಟಿಯಾಗಿದ್ದಾರೆ. ಬಾಲಕಿಯ ತಾಯಿ ಸಹ ಅಲ್ಲೇ ಸನಿಹದಲ್ಲಿ ಕುಳಿತಿದ್ದು ಇಬ್ಬರೂ ಏನೊಂದೂ ಮಾತನಾಡುತ್ತಿರಲಿಲ್ಲ.
ಎಕ್ಸ್ ಪ್ರೆಸ್ ನೊಡನೆ ಮಾತನಾಡಿದ ಬಾಲಕಿಯ ತಾಯಿ, "ಮಗಳು ಏಕೆ ಮನೆ ತ್ಯೊರೆದು ಓಡಿ ಬಂದಿದ್ದಾಳೆ ಎನ್ನುವುದು ನನಗೆ ಇನ್ನೂ ತಿಳಿದಿಲ್ಲ. ನಾನು ಮತ್ತು ನನ್ನ ಪತಿ ನಮಗಿರುವ ನಾಲ್ಕು ಮಕ್ಕಳನ್ನೂ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದೆವು. ನಮ್ಮಿಬ್ಬರ ನಡುವೆ ಎಲ್ಲಾ ಸಂಸಾರದಲ್ಲಿರುವಂತೆ ಕೆಲವು ಬಾರಿ ಸಣ್ಣ ಪುಟ್ಟ ಜಗಳ ಆಗುತ್ತಿತ್ತು. ಆದರೆ ಆ ಜಗಳ ಈಕೆಯ ಮೇಲೆ ಹೀಗೆ ಪರಿಣಾಮ ಉಂಟು ಮಾಡುತ್ತದೆ ಎಂದು ನಿರೀಕ್ಷಿಸಿರಲಿಲ್ಲ." ಎಂದರು.
ಬಾಲಕಿಯ ತಂದೆ ಆಯುರ್ವೇದ ಚಿಕಿತ್ಸಾಲಯ ಒಂದರಲ್ಲಿ ಮಸಾಜುದಾರರಾಗಿದ್ದು ತಾಯಿ ಗೃಹಿಣಿಯಾಗಿದ್ದಾರೆ. ಬಾಲಕಿಗೆ ಓರ್ವ ತಮ್ಮ ಮತ್ತು ಇಬ್ಬರು ಹಿರಿಯ ಸೋದರಿಯರಿದ್ದಾರೆ.
ಬಾಲಕಿ ತನ್ನ ಮನೆಯಲ್ಲಿ ನಡೆಯುತ್ತಿದ್ದ ಎಲ್ಲಾ ಜಗಳ, ಕಲಹದಿಂದ ನೊಂದಿದ್ದಳು.ಬಾಲಕಿ ಮನೆಯಿಂದ ತಪ್ಪಿಸಿಕೊಂಡಾಗ ಅವಳ ತಂದೆ ಜಲಂಧರ್ ಪೋಲೀಸ್ ಠಾಣೆಗೆ ದೂರು ನೀಡಿದ್ದು ಪೋಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com