ಜಯನಗರ ನ್ಯಾಷನಲ್ ಕಾಲೇಜಿನ ವಿಶ್ವಾಸ್ ಮೃತ ಪಟ್ಟ ವಿದ್ಯಾರ್ಥಿಯಾಗಿದ್ದು, ಕಾಲೇಜು ವತಿಯಿಂದ ರಾವುಗೊಡ್ಲು ಬೆಟ್ಟಕ್ಕೆ ಎನ್‍ಸಿಸಿ ಕ್ಯಾಂಪ್‍ಗೆ 25 ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲಾಗಿತ್ತು. ಸಂದರ್ಭದಲ್ಲಿ ಗುಂಡಾಂಜನೇಯ ದೇವಾಲಯದ ಕಲ್ಯಾಣಿಗೆ ಇಳಿದಿದ್ದ ವಿದ್ಯಾರ್ಥಿಗಳು ಸೆಲ್ಫಿ ಕ್ಲಿಕಿಸಿಕೊಳ್ಳುವಾಗಲೇ ಅತ್ತ ವಿಶ್ವಾಸ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರಂತ ನಡೆದಿದೆ.