ನಕಲಿ ಅಂಕಪಟ್ಟಿ ತಯಾರಿ: ಬೆಳಗಾವಿಯಲ್ಲಿ ನಾಲ್ವರು ಆರೋಪಿಗಳ ಬಂಧನ

ನಕಲಿ ಅಂಕಪಟ್ಟಿ ತಯಾರಿಸುತ್ತಿದ್ದ ನಾಲ್ವರನ್ನು ಬೆಳಗಾವಿ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ನಕಲಿ ಅಂಕಪಟ್ಟಿ ತಯಾರಿ: ಬೆಳಗಾವಿಯಲ್ಲಿ ನಾಲ್ವರು ಆರೋಪಿಗಳ ಬಂಧನ
ನಕಲಿ ಅಂಕಪಟ್ಟಿ ತಯಾರಿ: ಬೆಳಗಾವಿಯಲ್ಲಿ ನಾಲ್ವರು ಆರೋಪಿಗಳ ಬಂಧನ
ಬೆಳಗಾವಿ: ನಕಲಿ ಅಂಕಪಟ್ಟಿ ತಯಾರಿಸುತ್ತಿದ್ದ ನಾಲ್ವರನ್ನು ಬೆಳಗಾವಿ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಸೆ.20ರಂದು ಗದಗದ ಅಮರಗೋಳದಲ್ಲಿ ಶರಣಯ್ಯ ಚನ್ನಯ್ಯ ‌ಹಿರೇಮಠ ರನ್ನು ಪೋಲೀಸರು ಬಂಧಿಸಿದ್ದರು. ಅವರು ನೀಡಿದ ಮಾಹಿತಿಯ ಮೇರೆಗೆ ಗದಗ ಜಿಲ್ಲೆಯ ರೋಣ ನ್ಯಾಯಾಲಯದಲ್ಲಿ ಎಸ್‌ ಡಿಎ ಆಗಿ ಕಾರ್ಯನಿರ್ವಹಿಸುತ್ತಿರುವ ಅಮರಗೋಳದ ನಿವಾಸಿ ಅಂದಯ್ಯ ಗವಿಸಿದ್ದಯ್ಯ‌ ಹಿರೇಮಠ ಚಿತ್ರದುರ್ಗ ‌ಜಿಲ್ಲಾ ನ್ಯಾಯಾಲಯದಲ್ಲಿ ಅಟೆಂಡರ್ ಆಗಿರುವ ದಾವಣಗೆರೆಯ ನಿಟುವಳ್ಳಿ ಆಂಜನೇಯ ಬಡಾವಣೆಯ ರತ್ನಮ್ಮ ಕೆ.ಎಂ. ಹಾಗೂ ದಾವಣಗೆರೆ ಸಮೀಪದ ತೊಳಹುಣಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎನ್. ಉಮಾನಾಯ್ಕ ರನ್ನು ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಶರಣಯ್ಯ ಚನ್ನಯ್ಯ ಹಿರೇಮಠ, ಜಿಲ್ಲಾ ನ್ಯಾಯಾಲಯದಲ್ಲಿ ಆಹ್ವಾನಿಸಿರುವ ಹುದ್ದೆಗೆ 3 ಅರ್ಜಿ ಸಲ್ಲಿಸಿದ್ದಾರೆ. ಅವುಗಳಲ್ಲಿ ಎರಡು ಅರ್ಜಿಗಳಲ್ಲಿ ದಾವಣಗೆರೆ ಜಿಲ್ಲೆಯ ತೊಳಹುಣಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯಲ್ಲಿ ಶೇ 95ರಷ್ಟು ಅಂಕಗಳನ್ನು ಪಡೆದ ಬಗ್ಗೆ ಅಂಕಪಟ್ಟಿ ಲಗತ್ತಿಸಿದ್ದಾರೆ. ಇನ್ನೊಂದು ಅರ್ಜಿಯಲ್ಲಿ ಗದಗದ ಹುಯಿಲಗೋಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯಲ್ಲಿ ಶೇ 81ರಷ್ಟು ಅಂಕ ಪಡೆದಿರುವ ಅಂಕಪಟ್ಟಿ ತೋರಿಸಿದ್ದಾರೆ.
ಇದು ನಕಲಿ ಅಂಕಪಟ್ಟಿ ಆಗಿರುವ ಸಾಧ್ಯತೆ ಇದೆ, ಈ ಸಂಬಂಧ ತನಿಖೆ ನಡೆಸಬೇಕು ಎಂದು ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಆರ್.ಎಸ್. ಕಡಕೋಳ ಸೆ.15ರಂದು ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಶರಣಯ್ಯ ಅವರನ್ನು ಬಂಧಿಸಿ, ಅವರು ನೀಡಿದ ಮಾಹಿತಿ ಆಧಾರಿಸಿ ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. 
ಆರೋಪಿಗಳು ನಕಲಿ ಅಂಕಪಟ್ಟಿ, ವರ್ಗಾವಣೆ ಪ್ರಮಾಣಪತ್ರ, ಕನ್ನಡ ಮಾಧ್ಯಮ ಪ್ರಮಾಣಪತ್ರ, ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರ, ಸನ್ನಡತೆಯ ಪ್ರಮಾಣಪತ್ರವನ್ನು ನಕಲು ಮಾಡುತ್ತಿದ್ದರು ಎಂದು ತನಿಖೆ ನ್ಡೆಸಿದ ಪೋಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com