ಬೆಂಗಳೂರು ಕೆಸಿ ಜನರಲ್ ಆಸ್ಪತ್ರೆಯಲ್ಲಿ ಯುವತಿಗೆ ಲೈಂಗಿಕ ಕಿರುಕುಳ ಪ್ರಕರಣ, ಲಿಖಿತ ಕ್ಷಮಾದಾನದ ಬಳಿಕ ಸುಖಾಂತ್ಯ

ಆಸ್ಪತ್ರೆಯಲ್ಲಿ ಇಂಟರ್ ಟ್ರೈನಿಂಗ್ ನಲ್ಲಿರುವ ಎಂಬಿಬಿಎಸ್ ವಿದ್ಯಾರ್ಥಿನಿಗೆ ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯ ಹಿರಿಯ ವೈದ್ಯಕೀಯ ಅಧಿಕಾರಿ.....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಆಸ್ಪತ್ರೆಯಲ್ಲಿ ಇಂಟರ್ ಟ್ರೈನಿಂಗ್ ನಲ್ಲಿರುವ ಎಂಬಿಬಿಎಸ್ ವಿದ್ಯಾರ್ಥಿನಿಗೆ ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯ ಹಿರಿಯ ವೈದ್ಯಕೀಯ ಅಧಿಕಾರಿ ಯೊಬ್ಬರು ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. 
ಅಧಿಕಾರಿ ಲಿಖಿತ ಕ್ಷಮಾಪಣೆಯನ್ನು ನೀಡಿದ ಬಳಿಕ ಪ್ರಕರಣ ಸುಖಾಂತ ಕಂಡಿದೆ.
ಮಲ್ಲೇಶ್ವರದ ಆಸ್ಪತ್ರೆ ಮೂಲಗಳ ಪ್ರಕಾರ, ಸೆ.23 ರಂದು ಆಸ್ಪತ್ರೆಯ ಅಪಘಾತ ವಿಭಾಗದ ಉಸ್ತುವಾರಿ ಹೊಂದಿದ್ದ ವೈದ್ಯಕೀಯ ಅಧಿಕಾರಿ, ಇಂಟ ಟ್ರೈನಿಂಗ್ ನಲ್ಲಿದ್ದ ಯುವತಿಯನ್ನು ಮಧ್ಯರಾತ್ರಿ 2 ಗಂಟೆಗೆ ಅಸೈನ್ ಮೆಂಟ್ ಕೊಡುವುದಾಗಿ ಹೇಳಿ ತನ್ನ ಕೋಣೆಗೆ ಕರೆಸಿಕೊಂಡಿದ್ದಾರೆ. ಯುವತಿ ಬಂದೊಡನೆ ಬಾಗಿಲನ್ನು ಲಾಕ್ ಮಾಡಿದ ಅಧಿಕಾರಿ "ನಿನ್ನ ಹೃದಯ ಬಡಿತವನ್ನು ಪರೀಕ್ಷಿಸಬೇಕು" ಎಂದೆನ್ನುತ್ತಾ ಅನಗತ್ಯವಾಗಿ ಆಕೆಯನ್ನು ಸ್ಪರ್ಷಿಸಿದ್ದಾರೆ ಎನ್ನಲಾಗಿದೆ. ಜತೆ೩ಗೆ ಆಕೆಗೆ ಲೈಂಗಿಕ ಕಿರುಕುಳ ನೀಡಲು ಮುಂದಾದಾಗ ಯುವತಿ ಬಾಗಿಲನ್ನು  ತೆರೆದು ತನ್ನನ್ನು ಹೊರಹೋಗಲು ಬಿಡುವಂತೆ ಮನವಿ ಮಾಡಿದ್ದಾರೆ. ಅಧುಇಕಾರಿ ಆಕೆಯ ಮನವಿಗೆ ಸ್ಪಂದಿಸದೆ ಹೋದಾಗ ಯುವತಿ ತಾನೇ ಬಾಗಿಲು ತೆರೆದು ಓಡಿ ಹೋಗಿದ್ದಲ್ಲದೆ ತುರ್ತು ಅಲಾರಾಂ ಬಟನ್ ಒತ್ತಿ ಎಚ್ಚರಿಸಿದ್ದಾರೆ.
ಸರ್ಕಾರಿ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದ ಯುವತಿ ತಕ್ಷಣ ಆಸ್ಪತ್ರೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.  ದೂರನ್ನು ಪರಿಶೀಲಿಸಿದ ವೈದ್ಯಕೀಯ ಸೂಪರಿಂಟೆಂಡೆಂಟ್, ವೈದ್ಯರಿಂದ ವಿವರ ಕೇಳಿದರು.ಜತೆಗೆ ಇನ್ನಿತರೆ ಇಂಟರ್ ಟ್ರೈನಿಂಗ್ ವಿದ್ಯಾರ್ಥಿಗಳನ್ನೂ ಸಹ ಮಾತನಾಡಿಸಿದ್ದಾರೆ.
ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ. ರವಿ ಕುಮಾರ್ ಎಕ್ಸ್ ಪ್ರೆಸ್ ಗೆ ಈ ಮಾಹಿತಿ ನೀಡಿದ್ದಾರೆ.  "ಘಟನೆಯ ಬಗ್ಗೆ ನಮ್ಮ ಗಮನಕ್ಕೆ ಬಂದೊಡನೆ ಸಂಬಧಪಟ್ಟ ವೈದ್ಯರಿಗೆ ನೋಟೀಸ್ ನೀಡಲಾಗಿದೆ. ಕಿರುಕುಳಕ್ಕೆ ಒಳಗಾದ ಯುವತಿ ಬೇಡಿಕೆಯಂತೆ ಆ ವೈದ್ಯಾಧಿಕಾರಿ ಲಿಖಿತ ರೂಪದ ಕ್ಷಮಾದಾನ ಪತ್ರ ನೀಡಿದ್ದಾರೆ" ಎಂದು ಅವರು ತಿಳಿಸಿದರು.
ಆಸ್ಪತ್ರೆ ಯ ಹಿರಿಯ ಅಧಿಕಾರಿಗಳು ಪೊಲೀಸರನ್ನು ಸಂಪರ್ಕಿಸಿರುವುದನ್ನು ತಿಳಿದ ಆ ಯುವತಿ ತನ್ನ ಇಂತರ್ ಶಿಪ್ ಗೆಿದರಿಂದ ಅಡ್ಡಿ ಉಂಟಾಗುವ ಕಾರಣ ಈ ಪ್ರಕರಣದ ಕುರಿತು ಪೋಲೀಸರಿಗೆ ಮಾಹಿತಿ ನೀಡುವುದು ಬೇಡ ಎಂದು ಮನವಿ ಮಾಡಿದ್ದಳು.  ಯುವತಿಯ ಭವಿಷ್ಯದ ದೃಷ್ಟಿಯಿಂದ ನಾವು ಈ ಕುರಿತಂತೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಿಲ್ಲ ಎಂಡು ಡಾ. ಕುಮಾರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com