ಸಯೀದ್ ಅನ್ಸರ್ ಖಲೀಮ್ ಹಾಗೂ ಭಾರತಿ ವಿಭುತೆ ಹಾಗೂ ಹೆಚ್ ಜನಾರ್ದನ್ ಅವರಿದ್ದ ಸಮಿತಿ ಈ ಆದೇಶ ನೀಡಿದ್ದು, ಗ್ರಾಹಕರು ನಿಗದಿತ ವೌಲ್ಯಕ್ಕಿಂತ (10 ರೂ) ಹೆಚ್ಚಿನ ಹಣ ಪಡೆದಿದ್ದಾರೆ ( ಒಟ್ಟು 14 ರೂ). ಆದರೆ ಕೇವಲ 12 ರೂಪಾಯಿಗೆ ಮಾತ್ರ ಬಿಲ್ ನೀಡಿದ್ದಾರೆ. ಇದನ್ನು ವಿರೋಧಿಸಿ ಮಹೇಶ್ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಕಾನೂನು ಸಮರದ ಭಾಗವಾಗಿ ತಾವು ಖರೀದಿಸಿದ್ದ ತಂಪು ಪಾನೀಯವನ್ನು ತಯಾರಿಸಿದ್ದ ಸಂಸ್ಥೆ ಪೆಪ್ಸಿಕೊ ಇಂಡಿಯಾ ಸಂಸ್ಥೆಗೆ ನೊಟೀಸ್ ಕಳಿಸಿದ್ದಾರೆ. ಗ್ರಾಹಕನ ನೊಟೀಸ್ ಗೆ ಪ್ರತಿಕ್ರಿಯೆ ನೀಡಿದ್ದ ಪೆಪ್ಸಿಕೊ ಇಂಡಿಯಾ ಸಂಸ್ಥೆ, ತಮ್ಮ ಉತ್ಪನ್ನಗಳಿಗೆ ಬೇಕರಿ ಮಾಲಿಕ 4 ರೂ ಹೆಚ್ಚಿನ ಹಣ ಪಡೆಯುತ್ತಿರುವುದು ತಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲದೇ ನಿಗದಿತ ಮೌಲ್ಯವನ್ನು ಬಾಟಲ್ ಮೇಲೆಯೇ ಮುದ್ರಿಸಿರುವುದಾಗಿ ಸ್ಪಷ್ಟನೆ ನೀಡಿದೆ. ಈ ಹಿನ್ನೆಲೆಯಲ್ಲಿ ಪೆಪ್ಸಿ ಸಂಸ್ಥೆಯ ಮೇಲಿದ್ದ ಪ್ರಕರಣವನ್ನು ಕೈ ಬಿಡಲಾಗಿತ್ತು. ಆದರೆ ಕೂಲಿಂಗ್ ಹೆಸರಿನಲ್ಲಿ 4 ರೂ ಹೆಚ್ಚು ಪಡೆದಿದ್ದ ಬೇಕರಿ ಮಾಲಿಕನಿಗೆ 2.5 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.