ಬೆಳ್ಳಂದೂರು ಕೆರೆಯಲ್ಲಿ ಮತ್ತೆ ವಿಷಯುಕ್ತ ನೊರೆ

ಬೆಂಗಳೂರಿನ ಸುಮಾರು 262 ಕೆರೆಗಳಲ್ಲಿ ಬೆಳ್ಳಂದೂರು ಕೆರೆ ವಿಷಕಾರಿ ನೊರೆ ಸೋರಿಕೆಯಿಂದಾಗಿ ನಗರದಲ್ಲಿನ ಸಂಕೇತವಾಗಿ ಮಾರ್ಪಟ್ಟಿದೆ.
ಬೆಳ್ಳಂದೂರು ಕೆರೆ
ಬೆಳ್ಳಂದೂರು ಕೆರೆ
Updated on

ಬೆಂಗಳೂರು : ಬೆಂಗಳೂರಿನ ಸುಮಾರು  262 ಕೆರೆಗಳಲ್ಲಿ ಬೆಳ್ಳಂದೂರು ಕೆರೆ  ವಿಷಕಾರಿ ನೊರೆ ಸೋರಿಕೆಯ  ಸಂಕೇತವಾಗಿ ಮಾರ್ಪಟ್ಟಿದ್ದು, ತ್ಯಾಜ್ಯ ನಿರ್ವಹಣೆ ಸಮಸ್ಯೆಯಿಂದಾಗಿ ಮತ್ತೆ ವಿಷಯುಕ್ತ ನೊರೆ ಕಾಣಿಸಿಕೊಂಡಿದೆ.

ವಿಷಕಾರಿ ನೊರೆ  ನೀರನ್ನು ನಿಯಂತ್ರಣಕ್ಕೆ ತಂದರೆ ಇಲ್ಲಿನ ನೀರನ್ನು ಇಡೀ ಬೆಂಗಳೂರಿಗೆ  ನೀಡಬಹುದು ಎಂದು ವರದಿಗಳು ಹೇಳುತ್ತವೆ.

ಆದರೆ,ಇತ್ತೀಚಿನ ದಿನಗಳಲ್ಲಿ ಅನೇಕ ಬಾರಿ ವಿಷಕಾರಿ ನೊರೆ ಇಲ್ಲಿ ಸೋರಿಕೆಯಾಗುತ್ತಲೇ ಇದೆ. ಅನೇಕ ಸಂದರ್ಭಗಳಲ್ಲಿ ಬೆಂಕಿಯೂ ಕಾಣಿಸಿಕೊಂಡಿದೆ.

ಕಳೆದ ವರ್ಷ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ  ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿತ್ತು ಕೆರೆಯ ಸುತ್ತಮುತ್ತಲಿನ 76 ಕಲುಷಿತ ಉದ್ಯಮಗಳನ್ನು ಸಂಪೂರ್ಣವಾಗಿ ಮುಚ್ಚುವಂತೆ  ಆದೇಶ ನೀಡಿತ್ತು.

ನೊರೆ ನಿಯಂತ್ರಿಸಲು ಬಿಡಿಎ ಹಲವು ಕ್ರಮ ಕೈಗೊಂಡಿದ್ದರೂ ಮಳೆ ಬಂದಾಗಲೆಲ್ಲ ಇದು ಮತ್ತೆ ಮರುಕಳಿಸುತ್ತಿದೆ. ಇದು ಮುಗಿಯದ ಗೋಳಿನಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com