ಮಂಗಳೂರು: ಗ್ರಾಹಕನಿಂದ 5 ರೂ. ಹೆಚ್ಚು ಪಡೆದಿದ್ದಕ್ಕೆ ಪಾರ್ಕಿಂಗ್ ಕಾಂಟ್ರಾಕ್ಟರ್ ಗೆ 2.58 ಲಕ್ಷ ದಂಡ

ಗ್ರಾಹಕರೊಬ್ಬರಿಗೆ 5 ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸಿರುವ ವಿಡಿಯೊ ಕ್ಲಿಪ್ ಸಾಮಾಜಿಕ ....
ಮಂಗಳೂರು ವಿಮಾನ ನಿಲ್ದಾಣ
ಮಂಗಳೂರು ವಿಮಾನ ನಿಲ್ದಾಣ

ಮಂಗಳೂರು: ಗ್ರಾಹಕರೊಬ್ಬರಿಗೆ 5 ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸಿರುವ ವಿಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಮಂಗಳೂರು ವಿಮಾನ ನಿಲ್ದಾಣದ ಪಾರ್ಕಿಂಗ್ ಕಾಂಟ್ರಾಕ್ಟರ್ ಗೆ 2,58,500 ರೂಪಾಯಿ ದಂಡ ವಿಧಿಸಲಾಗಿದೆ.

ಮಂಗಳೂರು ವಿಮಾನ ನಿಲ್ದಾಣದ ಪಾರ್ಕಿಂಗ್ ಲಾಟ್ ನಲ್ಲಿ ತಾನಿರಿಸಿದ್ದ ಕಾರಿಗೆ 55 ರೂಪಾಯಿ ಬದಲು 60 ರೂಪಾಯಿ ಶುಲ್ಕವಿಧಿಸಿದ್ದಕ್ಕೆ ಗ್ರಾಹಕರೊಬ್ಬರು ಪಾರ್ಕಿಂಗ್ ಲಾಟ್ ಸಿಬ್ಬಂದಿಯನ್ನು ಪ್ರಶ್ನೆ ಮಾಡುತ್ತಿರುವ ವಿಡಿಯೊ ವೈರಲ್ ಆಗಿತ್ತು. ತನ್ನ ಐಡಿ ಕಾರ್ಡನ್ನು ತೋರಿಸಿ ಸಿಬ್ಬಂದಿ ಗ್ರಾಹಕನಿಗೆ ಬೆದರಿಕೆ ಕೂಡ ಹಾಕುತ್ತಿದ್ದರು. ಇದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಪಾರ್ಕಿಂಗ್ ಲಾಟ್ ಸಿಬ್ಬಂದಿಗೆ ಭಾರೀ ಟೀಕೆಗಳು ಕೇಳಿಬಂದಿದ್ದವು. ಇಂತಹ ಪ್ರಕರಣಗಳನ್ನು ಏಕೆ ಪರೀಕ್ಷೆ ನಡೆಸುವುದಿಲ್ಲ ಎಂದು ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಜನರು ಬೈಯುತ್ತಿದ್ದಾರೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ವಿ.ವಿ.ರಾವ್, ಪಾರ್ಕಿಂಗ್ ಕಾಂಟ್ರಾಕ್ಟರ್ ಆಗಿರುವ ಎಸ್ಎಸ್ ಎಂಟರ್ ಪ್ರೈಸಸ್ ವಿರುದ್ಧ ದಂಡ ವಿಧಿಸಿದ್ದಾರೆ. ಎರಡು ತಿಂಗಳ ಹಿಂದೆ ಈ ಘಟನೆ ನಡೆದಿದ್ದು ಇಂತಹ ದೂರು ಸ್ವೀಕರಿಸುತ್ತಿರುವುದು ಇದು ಮೂರನೇ ಬಾರಿಗೆ. ಮೊದಲೆರಡು ಸಲ ಕಾಂಟ್ರಾಕ್ಟರ್ ಗೆ ಕೆಲವು ಸಾವಿರಗಳವರೆಗೆ ಮಾತ್ರ ದಂಡ ವಿಧಿಸಲಾಗಿತ್ತು. ಈ ಬಾರಿ ತಿಂಗಳ ಅನುಮತಿ ಶುಲ್ಕದಲ್ಲಿ ಶೇಕಡಾ 10ರಷ್ಟು ದಂಡ ವಿಧಿಸಲು ತೀರ್ಮಾನಿಸಿದ್ದೇವೆ ಎಂದು ವಿವಿ ರಾವ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com