ಚುನಾವಣೆ ಸಿದ್ಧತೆ ಪರಿಶೀಲಿಸಲು ರಾಜ್ಯಕ್ಕೆ ಚುನಾವಣಾ ಆಯುಕ್ತ ರಾವತ್ ಭೇಟಿ

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಚುನಾವಣಾ ಸಿದ್ಧತೆಗಳನ್ನು ಪರಿಶೀಲನೆ ನಡೆಸಲು 3 ದಿನಗಳ ಕಾಲ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಅವರು ರಾಜ್ಯಕ್ಕೆ ಭೇಟಿ ನೀಡಿದ್ದಾರೆ...
ಚುನಾವಣೆ ಸಿದ್ಧತೆ ಪರಿಶೀಲಿಸಲು ರಾಜ್ಯಕ್ಕೆ ಚುನಾವಣಾ ಆಯುಕ್ತ ರಾವತ್ ಭೇಟಿ
ಚುನಾವಣೆ ಸಿದ್ಧತೆ ಪರಿಶೀಲಿಸಲು ರಾಜ್ಯಕ್ಕೆ ಚುನಾವಣಾ ಆಯುಕ್ತ ರಾವತ್ ಭೇಟಿ
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಚುನಾವಣಾ ಸಿದ್ಧತೆಗಳನ್ನು ಪರಿಶೀಲನೆ ನಡೆಸಲು 3 ದಿನಗಳ ಕಾಲ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಅವರು ರಾಜ್ಯಕ್ಕೆ ಭೇಟಿ ನೀಡಿದ್ದಾರೆ,
ಓಂ ಪ್ರಕಾಶ್ ರಾವತ್ ಅವರೊಂದಿಗೆ ಚುನಾವಣಾ ಆಯುಕ್ತ ಸುನಿಲ್ ಅರೋರಾ ಮತ್ತು ಅಶೋಕ್ ಲವಾಸ ಅವರೂ ಕೂಡ ಸಾಥ್ ನೀಡಿದ್ದಾರೆ.
ನಗರಕ್ಕೆ ಭೇಟಿ ನೀಡಿದ ಓಂ ಪ್ರಕಾಶ್ ರಾವತ್ ಅವರು, ಜನರಲ್ಲಿ ಜಾಗೃತಿ ಮೂಡಸಲು ಹಲವಾರು ವಿಷಯಗಳ ಕುರಿತ ಪೋಸ್ಟರ್ ಗಳು ಹಾಗೂ ಸಾಕ್ಷ್ಯಚಿತ್ರಗಳನ್ನು ಬಿಡುಗಡೆ ಮಾಡಿದರು. 
ಮಹಿಳೆಯರ ಪಿಂಕ್ ಮತಗಟ್ಟೆ ಹೆಸರು ಸಖಿ
ರಾಜ್ಯ ವಿಧಾನಸಭಾ ಚುನಾವಣೆಯ ಇತಿಹಾಸದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಮಹಿಳಾ ಮತದಾರರನ್ನು ಪ್ರೋತ್ಯಾಹಿಸಲು ಮತ್ತು ಆಕರ್ಷಿಸಲು ಮಹಿಳೆಯರಿಂದ, ಮಹಿಳೆಯರಿಗಾಗಿ ಹಾಗೂ ಮಹಿಳೆಯರಿಗೋಸ್ಕರ ಎಂಬ ಪರಿಕಲ್ಪನೆಯೊಂದಿಗೆ ಸಖಿ ಹೆಸರಿನಲ್ಲಿ ಪಿಂಕ್ ಮತಗಟ್ಟೆಗಳನ್ನು ತೆರಯಲಾಗುತ್ತಿದೆ. 
ಮಹಿಳೆಯರನ್ನು ಮತಗಟ್ಟೆಗಳತ್ತ ಸೆಳೆಯಲು ಹಾಗೂ ಜಾಗೃತಿ ಮೂಡಿಸುವ ಸಲುವಾಗಿ ಪ್ರಚಾರ ಸಂದೇಶದ ವಿಡಿಯೋವನ್ನು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಅವರು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಬಿಡುಗಡೆ ಮಾಡಿದರು. 
ಚುನಾವಣಾ ಆಯೋಗವು ಒಳಗೊಳ್ಳುವ, ಸುಮಗ ಮತ್ತು ನೈತಿಕ ಚುನಾವಣೆ ಎಂಬ ಹೆಸರನ್ನು ಘೋಷ ವಾಕ್ಯವಾಗಿ ಕೊಟ್ಟಿದ್ದು, ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ. 
ಮೊದಲ ಬಾರಿಗೆ ಸ್ಥಾಪಿಸಲಾಗುತ್ತಿರುವ ಸಖಿ ಮತಗಟ್ಟೆಗಳಲ್ಲಿ ಎಲ್ಲಾ ಸಿಬ್ಬಂದಿಗಳು ಮಹಿಳೆಯರೇ ಇರಲಿದ್ದಾರೆ. ಚುನಾವಣಾಧಿಕಾರಿ, ಮತಗಟ್ಟೆ ಅಧಿಕಾರಿ, ಚುನಾವಣಾ ಸಿಬ್ಬಂದಿ, ಪೊಲೀಸರು ಸೇರಿದಂತೆ ಎಲ್ಲಾ ವಿಭಾಗದಲ್ಲಿಯೂ ಮಹಿಳೆಯರೇ ಕಾರ್ಯವನ್ನು ನಿರ್ವಹಿಸಲಿದ್ದಾರೆ. ಪ್ರತಿ ಕ್ಷೇತ್ರದಲ್ಲಿ ಒಂದರಂತೆ ಎಲ್ಲಾ 224 ಕ್ಷೇತ್ರಗಳಲ್ಲಿ ಮಹಿಳಾ ಮತಗಟ್ಟೆಗಳನ್ನು ಆರಂಭಿಸಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com