ಕ್ಷಯ ರೋಗದ ಬಗ್ಗೆ ಸರ್ಕಾರಕ್ಕೆ ಮಾಹಿತಿ ದಾಖಲಿಸುವಲ್ಲಿ ಖಾಸಗಿ ವಲಯ ನಿರ್ಲಕ್ಷ್ಯ

ಇತ್ತೀಚಿಗೆ ಬಿಡುಗಡೆಯಾದ ಭಾರತೀಯ ಕ್ಷಯ ರೋಗ ವರದಿ 2018ರ ಪ್ರಕಾರ ಕ್ಷಯ ರೋಗದ ಬಗ್ಗೆ ಸರ್ಕಾರಕ್ಕೆ ಮಾಹಿತಿ ದಾಖಲಿಸುವಲ್ಲಿ ಖಾಸಗಿ ವಲಯ ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

 ಬೆಂಗಳೂರು : ಇತ್ತೀಚಿಗೆ ಬಿಡುಗಡೆಯಾದ ಭಾರತೀಯ ಕ್ಷಯ ರೋಗ ವರದಿ 2018ರ ಪ್ರಕಾರ  ಕ್ಷಯ ರೋಗದ ಬಗ್ಗೆ ಸರ್ಕಾರಕ್ಕೆ ಮಾಹಿತಿ ದಾಖಲಿಸುವಲ್ಲಿ ಖಾಸಗಿ ವಲಯ ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದೆ.

ಸಾರ್ವಜನಿಕ ಕ್ಷೇತ್ರದಲ್ಲಿ ಲಕ್ಷ ಜನರಲ್ಲಿ 105 ಮಂದಿ ಮಾಹಿತಿ ನೀಡುತ್ತಿದ್ದರೆ, ಖಾಸಗಿ ವಲಯದಲ್ಲಿ ಲಕ್ಷದಲ್ಲಿ ಕೇವಲ 18 ಮಂದಿ ಮಾತ್ರ ಮಾಹಿತಿ ನೀಡುತ್ತಿರುವುದು ಕಂಡುಬಂದಿದೆ.ಲಕ್ಷ ಜನಸಂಖ್ಯೆಯಲ್ಲಿ 217 ರಲ್ಲಿ ಸೋಂಕಿದೆ ಎಂದು ಕೇಂದ್ರದ ಗುಣಮಟ್ಟ ದರ ತಿಳಿಸುತ್ತದೆ.

ಮಾರ್ಚ್ 24ರಂದು ಪ್ರಕಟಗೊಂಡಿರುವ ವರದಿ ಪ್ರಕಾರ 2017 ರಲ್ಲಿ  ಸಾರ್ವಜನಿಕ ಕ್ಷೇತ್ರದಲ್ಲಿ 69, 199 ಹಾಗೂ ಖಾಸಗಿ ಕ್ಷೇತ್ರದಲ್ಲಿ 11, 988 ಮಂದಿ ರೋಗಿ ಮಾಹಿತಿ ನೀಡಿದ್ದಾರೆ.ಖಾಸಗಿ ವಲಯದ ರೋಗಿಗಳು ಉಚಿತ ಗುಣಮಟ್ಟದ ಔಷಧಿ ಹಾಗೂ ಪ್ರಯೋಗಾಲಯದಿಂದ ವಿನಾಯಿತಿ ಪಡೆದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

ಕ್ಷಯ ರೋಗಿಯನ್ನು ಪತ್ತೆ ಹಚ್ಚುವಲ್ಲಿ ವಿಫಲವಾದರೆ ಇದೇ ಮೊದಲಬಾರಿಗೆ ಶಿಕ್ಷೆಯ ಪ್ರಮಾಣವನ್ನು  ಆರು ತಿಂಗಳಿಂದ 2 ವರ್ಷದವರೆಗೆ  ಕೇಂದ್ರಸರ್ಕಾರ ಹೆಚ್ಚಿಸಿದೆ. ಪ್ರಯೋಗಾಲಯ, ಕ್ಲಿನಿಕ್ಸ್, ಆಸ್ಪತ್ರೆ, ನರ್ಸಿಂಗ್ ಹೋಮ್ಸ್ ಗಳಲ್ಲಿ ಕಡ್ಡಾಯವಾಗಿ ಟಿಬಿ ನಿಯಂತ್ರಣ ಔಷಧಿ ಇಡುವಂತೆ ಸೂಚಿಸಲಾಗಿದೆ.

ಸಾರ್ವಜನಿಕ ಕ್ಷೇತ್ರದಲ್ಲಿ ಕ್ಷಯರೋಗ ಸೋಂಕುವನ್ನು ಹೆಚ್ಚಿನ ರೀತಿಯಲ್ಲಿ ಪತ್ತೆ ಹಚ್ಚುತ್ತಿರುವುದರಿಂದ  ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ.  ಕ್ಷಯ ಇಲ್ಲದ ಜನರಲ್ಲೂ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ರಾಜ್ಯ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ  ಇಲಾಖೆ  ಟಿಬಿ ವಿಭಾಗದ ಜಂಟಿ ನಿರ್ದೇಶಕ ಡಾ. ರಾಮಚಂದ್ರ ಬೈರಿ, ಶೇ. 60 ರಷ್ಟು ಜನರು ಸರ್ಕಾರಿ ಆಸ್ಪತ್ರೆಗೆ ಹೋಗುತ್ತಿದ್ದು, ಅವರಿಂದ ಉತ್ತಮ ಮಾಹಿತಿ ಪಡೆಯಲಾಗುತ್ತಿದೆ. ಶೇ, 40 ರಷ್ಟು ರೋಗಿಗಳು ಖಾಸಗಿ ವಲಯಕ್ಕೆ ತೆರಳುತ್ತಿದ್ದು, ಅವರಿಂದ ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿಲ್ಲ  ಇದನ್ನು ತಡೆಯಲು ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com