

ಬೆಂಗಳೂರು : ವಿವಾದಿತ ಜಾಗದಲ್ಲಿ ಹನುಮನ ಪ್ರತಿಮೆ ಪ್ರತಿಷ್ಠಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಪದ್ಮನಾಭ ರೆಡ್ಡಿ ಸೇರಿದಂತೆ 18 ಜನರ ವಿರುದ್ಧ ಕಾಚರಕನಹಳ್ಳಿಯ ಎಸಿಪಿ ಪ್ರಕರಣ ದಾಖಲಿಸಿದ್ದಾರೆ.
ಪ್ರತಿಮೆ ನಿರ್ಮಾಣಕ್ಕಾಗಿಯೇ ಹೆಚ್ ಬಿಆರ್ ಲೇಔಟ್ ನಲ್ಲಿ ಭೂಮಿಯನ್ನು ಆತಿಕ್ರಮಿಸಿಕೊಳ್ಳಲು ಪದ್ಮನಾಭ ರೆಡ್ಡಿ ಮತ್ತಿತರರು ಯತ್ನಿಸಿದ್ದಾರೆ ಎಂದು ದೂರು ದಾಖಲಾಗಿತ್ತು.ದೂರು ದಾಖಲಾದ ನಂತರ ದಂಪತಿಯನ್ನು ಬಂಧಿಸಲಾಗಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ.
ದೂರಿನ ಆಧಾರದ ಮೇಲೆ ಎಸಿಪಿ ಎಂ. ಕೆ. ಜಗದೀಶ್ ಎಫ್ ಐ ಆರ್ ದಾಖಲಿಸಿಕೊಂಡಿದ್ದು, ಮುನಿರೆಡ್ಡಿ, ಗೋಪಾಲ್ ರೆಡ್ಡಿ, ಪದ್ಮನಾಭ ರೆಡ್ಡಿ, ಜಗನ್ನಾಥ ರೆಡ್ಡಿ, ಸುಬ್ಬರಾಜ್, ಕೆ, ಮುನಿರಾಜ್ ಕೆ, ಭಾರತಿ ಶ್ರೀನಿವಾಸಲು, ಶ್ಯಾಮ್ ಪ್ರಸಾದ್ , ಬಾಬು ರೆಡ್ಡಿ, ಜಯಂತ್ ಎಸ್ ಪಾಟೀಲ್, ನಟರಾಜ್, ಆನಂದ್, ಥಣಿಸಂದ್ರದ ಮುನಿರಾಜ್, ನಾಗಾವಾರದ ಮುನಿರಾಜ್, ಚಂದ್ರು , ಜಗದೀಶ್ ರೆಡ್ಡಿ, ರಾಧಾಕೃಷ್ಣ ಮತ್ತಿತರನ್ನು ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಮೆ ಸಾಗಿಸುವ ಮಾರ್ಗದಲ್ಲಿ ರಸ್ತೆ ಹಾನಿ, ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪ್ರತಿಮೆ ಪ್ರತಿಷ್ಠಾಪಿಸುವ ಜಾಗದ ವಿವಾದ ಹೈಕೋರ್ಟ್ ನಲ್ಲಿರುವ ಬಗ್ಗೆ ಎಸಿಪಿ ಜಗದೀಶ್ ಸ್ಥಳೀಯ ನಾಗರಿಕರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಇದು ಕಾನೂನು ಬಾಹಿರವಾಗಿದೆ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ ಕೆಲ ಸ್ಥಳೀಯರು ಪೊಲೀಸ್ ಅಧಿಕಾರಿಗಳು ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಅಲ್ಲಿಂದ ಪೊಲೀಸರು ಹೋಗುವಂತೆ ಕೆಲ ಮಹಿಳೆಯರು ಒತ್ತಾಯಿಸಿದ್ದಾರೆಯ ಈ ಸಂಬಂಧ ಜಗದೀಶ್ ಅವರು ಕೆಜಿ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸೋಮವಾರ ಹೆಚ್ ಬಿಆರ್ ಲೇಔಟ್ ನ ಮುಖ್ಯರಸ್ತೆಯಲ್ಲಿ ಹನುಮನ ಪ್ರತಿಮೆ ಸಾಗಿಸುವಾಗ ರಸ್ತೆ ಹಾನಿಯಾಗಿತ್ತು. ಐದು ವಿದ್ಯುತ್ ಕಂಬಗಳು ನೆಲಕ್ಕುರುಳಿ ಬಿದಿದ್ದವು. 62 ಅಡಿ ಎತ್ತರದ 750 ಟನ್ ತೂಕದ ಬೃಹತ್ ಪ್ರತಿಮೆಯನ್ನು ಕೋಲಾರದ ಮಾರ್ಗವಾಗಿ ನಗರಕ್ಕೆ ತರಲಾಗಿತ್ತು.
ಹೈಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂದು ಜಿಲ್ಲಾಡಳಿತ ಹೇಳಿದೆ. ಆದರೆ ಇದು ರಾಜಕೀಯ ವಿವಾದ ಪಡೆದುಕೊಂಡಿದ್ದು,ಪ್ರತಿಮೆ ಪ್ರತಿಷ್ಠಾಪನೆ ವಿಳಂಬಕ್ಕೆ ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ. ಜೆ. ಜಾರ್ಜ್ ವಿಳಂಬ ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.