ಬೆಂಗಳೂರು: ಇರಾನಿ ಗ್ಯಾಂಗ್ ಇಬ್ಬರು ಸಹಚರರ ಬಂಧನ
ಬೆಂಗಳೂರು: ಇರಾನಿ ಗ್ಯಾಂಗ್ ಇಬ್ಬರು ಸಹಚರರ ಬಂಧನ

ಬೆಂಗಳೂರು: ಇರಾನಿ ಗ್ಯಾಂಗ್ ಇಬ್ಬರು ಸಹಚರರ ಬಂಧನ

ಮನೆಗಳ್ಳತನ, ಮಹಿಳೆಯರ ಸರ ಅಪಹರಣ ನಡೆಸುತ್ತಿದ್ದ ಕುಖ್ಯಾತ ಇರಾನಿ ಗ್ಯಾಂಗ್ ನ ಇಬ್ಬರು ಸದಸ್ಯರನ್ನು ಬೆಂಗಳೂರು ಪೋಲೀಸರು ಬಂಧಿಸಿದ್ದಾರೆ.
Published on
ಬೆಂಗಳೂರು: ಮನೆಗಳ್ಳತನ, ಮಹಿಳೆಯರ ಸರ ಅಪಹರಣ ನಡೆಸುತ್ತಿದ್ದ ಕುಖ್ಯಾತ ಇರಾನಿ ಗ್ಯಾಂಗ್ ನ ಇಬ್ಬರು ಸದಸ್ಯರನ್ನು ಬೆಂಗಳೂರು ಪೋಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಹೆಣ್ಣೂರು ಠಾಣೆ ಪೋಲೀಸರು ಆರೋಪಿಗಳನ್ನು ಬಂಧಿಸಿ 31.92 ಲಕ್ಷ ರೂ. ಮೌಲ್ಯದ 1 ಕೆ.ಜಿ 83 ಗ್ರಾಂ ಚಿನ್ನದ  ಆಭರಣವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಮಹಾರಾಷ್ಟ್ರದ ಅಲ್ರೇನ್‌ ನಗರದ ಫರ್ಮಾನ್‌ ಅಲಿ (25) ಹಾಗೂ ಕಲಬುರ್ಗಿಯ ಬಾಕರ್‌ ಅಲಿ (30)  ಎಂದು ಗುರುತಿಸಲಾಗಿದ್ದು ಇವರ ವಿಚಾರಣೆಯಿಂಡ ವಿವಿಧೆಡೆ ನಡೆದಿದ್ದ 22  ಅಪರಾಧ ಪ್ರಕರಣಗಳ ಸುಳಿವು ದೊರಕಿದೆ ಎಂದು ಪೋಲೀಸರು ಹೇಳಿದರು.
ಬೈಕುಗಳಲ್ಲಿ ತೆರಳಿ ಮಹಿಳೆಯರ ಸರ ಕದಿಯುತ್ತಿದ್ದದ್ದಲ್ಲದೆ ಬೀಗ ಹಾಕಿರುತ್ತಿದ್ದ ಮನೆಗಳ ಕಳ್ಳತನ ಮಾಡುತ್ತಿದ್ದರು. ಪರ ಊರುಗಳಿಂದ ಬರುತ್ತಿದ್ದ ಅವರು ಇಲ್ಲಿ ದರೋಡೆ ನಡೆಸಿ ಮತ್ತೆ ತಮ್ಮ ಊರುಗಳಿಗೆ ಪರಾರಿಯಾಗುತ್ತಿದ್ದರು. ಸುಮಾರು ಒಂದು ವರ್ಷದಿಂದ ಇವರು ಈ ಕೃತ್ಯದಲ್ಲಿ ನಿರತರಾಗಿದ್ದರು ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ಕದ್ದ ಚಿನ್ನಾಭರಣಗಳನ್ನು ನಗರದಲ್ಲಿ ವಿಲೇವಾರಿ ಮಾಡುತ್ತಿದ್ದ ಮಾಹಿತಿ ಪಡೆದ ಪೋಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com