ಬೆಂಗಳೂರು: ಕೆಐಎ ನಿಂದ ಏರ್ ಬಸ್ ಎ 380 ವಿಮಾನ ಹಾರಾಟಕ್ಕೆ ಹಸಿರು ನಿಶಾನೆ

: ಬೆಂಗಳುರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ [ರಯಾಣಿಕರ ಸಂಚಾರದಲ್ಲಿ ಡಿಸೆಂಬರ್ 2019 ರಿಂದ ಗಮನಾರ್ಹ ಬದಲಾವಣೆ ಕಾಣುವ ನಿರೀಕ್ಷೆ ಇದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾ
Updated on
ಬೆಂಗಳೂರು: ಬೆಂಗಳುರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರ  ಸಂಚಾರದಲ್ಲಿ ಡಿಸೆಂಬರ್ 2019 ರಿಂದ ಗಮನಾರ್ಹ ಬದಲಾವಣೆ ಕಾಣುವ ನಿರೀಕ್ಷೆ ಇದೆ.
ಕೆಐಎ ನ ಎರಡನೇ ರನ್ ವೇ ಮೂಲಕ ಬೃಹತ್ ಗಾತ್ರದ ಏರ್ ಬಸ್  ಎ 380 ವಿಮಾನ ಕಾರ್ಯಾಚರಣೆಯು ಡಿಸೆಂಬರ್ 2019 ರಿಂದ ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ. ಇದಕ್ಕಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯ ( (ಡಿಜಿಸಿಎ) ನಿಂದ ಅನುಮತಿ ಪಡೆಯಲಾಗಿದೆ.
ಪ್ರಸ್ತುತ ಈ ವಿಮಾನ ಹಾರಾಟಕ್ಕೆ ಅನುಮತಿಸಲಾದ ದೇಶದ ಏಕೈಕ ನಗರ ನವದೆಹಲಿಯಾಗಿದೆ. 
"ಈ ವಾರದಲ್ಲಿ ನಾವು ಡಿಜಿಸಿಎನಿಂದ ಎ 380 ಕೋಡ್ 'ಎಫ್' ವಿಮಾನ ಹಾರಾಟಕ್ಕಾಗಿ ಅನುಮೋದನೆ ಪಡೆದಿದ್ದೇವೆ.ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ ಜಾಗತಿಕ ನಿಯಂತ್ರಕರಿಂದ ಅನುಮೋದನೆ ಸಿಕ್ಕಿದ ಬಳಿಕ ಡಿಜಿಸಿಎ ನಮಗೆ ವಿಮಾನ ಹಾರಾಟಕ್ಕೆ ಹಸಿರು ನಿಶಾನೆ ತೋರಿದೆ" ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ಜಾವೇದ್ ಮಲಿಕ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಇಲ್ಲಿಯವರೆಗೂ ಈ ದೊಡ್ಡ ಗಾತ್ರದ ವಿಮಾನವನ್ನು ನಮ್ಮ ಯಾವ ವಿಮಾನಯಾನ ಸಂಸ್ಥೆಯವರೂ ಹೊಂದಿಲ್ಲ. ಎಮಿರೇಟ್ಸ್, ಲುಫ್ತಾಂಜಾ, ಕತಾರ್ ಹಾಗೂ ಬ್ರಿಟೀಷ್ ಏರ್ ವೇಸ್ ಅವರು ಮಾತ್ರ ಈ ದೊಡ್ಡ ವಿಮಾನವನ್ನು ಹಾರಾಟ ನಡೆಸುತ್ತಾರೆ. ಅವರೆಲ್ಲರೂ ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳೆನ್ನುವುದು ಗಮನಾರ್ಹ."ಇದರಿಂದಾಗಿ ಭವಿಷ್ಯದಲ್ಲಿ ಭಾರತೀಯ ಆರ್ಥಿಕತೆಗೆ ಅನುಕೂಲವಾಗಲಿದೆ." ಮಲಿಕ್ ಹೇಳಿದರು.
ಪ್ರಸ್ತುತ ಕೆಐಎ ನಲ್ಲಿ A350, A330, A320, A390, ಬೋಯಿಂಗ್ 737 ATR, ಬೋಯಿಂಗ್ 777, ಬೋಯಿಂಗ್ 747 ಮತ್ತು ಬೋಯಿಂಗ್ 748 ವಿಮಾನಗಳು ಕಾರ್ಯಾಚರಿಸುತ್ತವೆ.
"ಪ್ರಸ್ತುತ ನಾವು ಗಂಟೆಯೊಂದಕ್ಕೆ 38 ವಿಮಾನಗಳ (ಆಗಮನ/ನಿರ್ಗಮನ) ಕಾರ್ಯಾಚರಣೆಗೊಳಿಸುವುದಕ್ಕೆ ಬದ್ದವಾಗಿದ್ದೇವೆ. ಎರಡನೇ ರನ್ ವೇ ಪ್ರಾರಂಭಗೊಂಡ ಬಳಿಕ ಈ ಸಂಖ್ಯೆ 55ಕ್ಕೆ ತಲುಪಲಿದೆ. ಡಿಸೆಂಬರ್ 2019 ಕ್ಕೆ ಎರಡನೇ ರನ್ ವೇ ಕಾರ್ಯಾಚರಣೆಗೆ ಲಭ್ಯವಾಗಲಿದೆ" ಅವರು ಹೇಳಿದ್ದಾರೆ.
ಎರಡನೇ ಟರ್ಮಿನಲ್ ವಿನ್ಯಾಸಕ್ಕಾಗಿ 2017ರಲ್ಲಿ ಅನುಮೋದನೆ ಪಡೆಯಲಾಗಿದ್ದು  ತನ್ನ ಮೊದಲ ಹಂತದಲ್ಲಿ 25 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸುವ ನಿರೀಕ್ಷೆ ಇದ್ದು ಇದು ಜೂನ್ 2021ರ ವೇಳೆಗೆ ಸಾಧ್ಯವಾಗಲಿದೆ.ಮುಂದಿನ ಹಂತದಲ್ಲಿ ಮತ್ತೆ  20 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ದೊರಕಲಿದೆ.
ಮೊದಲ ಹಂತದ ಟೆಂಡರ್ ಪ್ರಕ್ರಿಯೆ ಕಳೆದ ಮಾಹೆಯಲ್ಲಿ ಪ್ರಾರಂಭವಾಗಿದ್ದು ಬಿಐಎಎಲ್ ಸಂಸ್ಥೆಗೆ ಈ ಜವಾಬ್ದಾರಿ ವಹಿಸಲಾಗಿದೆ. 2017-2018ರ ಆರ್ಥಿಕ ವರ್ಷದಲ್ಲಿ ವಿಮಾನನಿಲ್ದಾಣವು 26.91 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸಿದೆ ಎಂದು ಮಲಿಕ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com