ಬೆಂಗಳೂರು: ಆರು ಕೋಚ್ ಗಳ ಮೆಟ್ರೋ ಸಂಚಾರ ಇನ್ನಷ್ಟು ವಿಳಂಬ ಸಾಧ್ಯತೆ

ಮೆಟ್ರೊ ರೈಲು ಸುರಕ್ಷತಾ ಆಯುಕ್ತ (ಸಿಎಂಆರ್ಎಸ್) ಗುರುವಾರ ಆರು ಕೋಚ್ (ಬೋಗಿ) ಗಳ ಮೆಟ್ರೋ ರೈಲು ಪ್ರಾಯೋಗಿಕ ಸಂಚಾರವನ್ನು ಸರ್ ಎಂ ವಿಶ್ವೇಶ್ವರಯ್ಯ ನಿಲ್ದಾಣದಿಂದ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳುರು: ಮೆಟ್ರೊ ರೈಲು ಸುರಕ್ಷತಾ ಆಯುಕ್ತ (ಸಿಎಂಆರ್ಎಸ್) ಗುರುವಾರ ಆರು ಕೋಚ್  ಗಳ ಮೆಟ್ರೋ ರೈಲು ಪ್ರಾಯೋಗಿಕ ಸಂಚಾರವನ್ನು ಸರ್ ಎಂ ವಿಶ್ವೇಶ್ವರಯ್ಯ ನಿಲ್ದಾಣದಿಂದ ಬೈಯಪ್ಪನಹಳ್ಳಿ ನಿಲ್ದಾಣದ ನಡುವೆ ಆಯೋಜಿಸಿತ್ತು. 
ಈ ಸಂಬಂಧ ನಿರ್ಣಾಯಕ ಪರೀಕ್ಷೆಗಳಿನ್ನೂ ನಡೆಯಬೇಕಾಗಿದೆ. ಹೆಚ್ಚುವರಿ ಪರಿಶೀಲನೆಗಳನ್ನು ನಡೆಸಿದ ಬಳಿಕವಷ್ಟೇ ಆರು ಕೋಚ್ ಮೆಟ್ರೋ ಸಂಚಾರ ಸಾರ್ವಜನಿಕರಿಗೆ ಮುಕ್ತವಾಗಲಿದೆ
ಗುರುವಾರ ಬೆಳಿಗ್ಗೆ 10.30ಕ್ಕೆ ಪ್ರಾರಂಭವಾದ ಪರೀಕ್ಷಾರ್ಥ ಸಂಚಾರದಲ್ಲಿ ಸಿಎಂಆರ್ ಎಸ್ ಕೆಲವು ಬಗೆಯ ಪರೀಕ್ಷೆಗಳನ್ನು ನಡೆಸಿದೆ ಎಂದು ಧಿಕಾರಿಗಳು ಹೇಳಿದ್ದಾರೆ.
"ಇದು ಕೇವಲ ಒಂದು ಪ್ರಾಥಮಿಕ ತಪಾಸಣೆ ಮಾತ್ರ. ಎಲೆಕ್ಟ್ರೋ ಮ್ಯಾಗ್ನೆಟಿಕ್ ಕಾಂಪ್ಯಾಟಿಬಿಲಿಟಿ (ಇಎಂಸಿ) ಪರೀಕ್ಷೆಗಳನ್ನು ಇನ್ನೂ ಮಾಡಬೇಕಿದ್ದು ಇದು ತಕ್ಕಷ್ಟು ಸಮಯ ತೆಗೆದುಕೊಳ್ಳಲಿದೆ" ಬಿಎಂಆರ್ ಸಿಎಲ್ ನಿರ್ದೇಶಾಕ ಮಹೇಂದ್ರ ಜೈನ್ ಹೇಳಿದರು. 
ಆರು ಕೋಚ್ ಗಳ ಮೆಟ್ರೋ ರೈಲು ಸಂಚಾರ ಪ್ರಾರಂಭಕ್ಕೆ ಮುನ್ನ ಎರಡು ಬೇರೆ ಬೇರೆ ಏಜನ್ಸಿಗಳ  ಅಂತರರಾಷ್ಟ್ರೀಯ ವೀಕ್ಷಕರು ಪರಿಶೀಲನೆ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ಇನ್ನೋರ್ವ ಅಧಿಕಾರಿಗಳು ಹೇಳಿದ್ದಾರೆ."ಪ್ರಯಾಣಿಕರನ್ನು ಹೊತ್ತು ಮೆಟ್ರೋ ಸಂಚಾರ ನಡೆಸುವಾಗ ರೈಲು ಹೊರಸೂಸುವ ವಿದ್ಯುತ್ಕಾಂತೀಯ ಅಲೆಗಳ ಪರಿಣಾಮವನ್ನು  ನಿರ್ಣಯಿಸಬೇಕು. ಖಚಿತವಾಗಿ ಹೇಳಬೇಕೆಂದರೆ ರೈಲುಗಳಲ್ಲಿ ಅಳವಡಿಸಲಾಗಿರುವ ಪೇಸ್ ಮೇಕರ್ ಗಳು ಪ್ರಯಾಣಿಕರ ಮೇಲೆ ಯಾವ ಪರಿಣಾಮ ಬೀರುವುದಿಲ್ಲ ಎನ್ನುವುದನ್ನು ನಾವು ದುಪ್ಪಟ್ಟು ಎಚ್ಚರಿಕೆಯಿಂದ ಪರೀಕ್ಷಿಸಬೇಕು" ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com