ಯಲಹಂಕ ಕ್ಷೇತ್ರ: ಹಳೆಯ ಸಮಸ್ಯೆಗಳನ್ನೇ ಹೊದ್ದುಕೊಂಡಿರುವ ಹೊಸ ಬೆಂಗಳೂರು

2007ರಲ್ಲಿ ಬಿಬಿಎಂಪಿ ವಿಸ್ತರಣೆಯಾದ ಬಳಿಕ ಯಲಹಂಕ ಮತ್ತು ಬ್ಯಾಟರಾಯನಪುರ ಮಹಾನಗರ ವ್ಯಾಪ್ತಿಗೆ ಸೇರಿದು ಈವರೆಗೂ ಇಲ್ಲಿ ಉತ್ತಮ ರಸ್ತೆಗಳಿಲ್ಲ. ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ ಹಾಗೂ ಒಳಚರಂಡಿ ಸಮಸ್ಯೆ ಕೊರತೆ ಎದ್ದುಕಾಣುತ್ತಿದೆ.
ಹೆಬ್ಬಾಳ ಮೇಲ್ಸುತುವೆ ಕೆಳಗೆ ರೈಲ್ವೆ ಹಳಿ ದಾಟುತ್ತಿರುವ ಜನರ ಚಿತ್ರ
ಹೆಬ್ಬಾಳ ಮೇಲ್ಸುತುವೆ ಕೆಳಗೆ ರೈಲ್ವೆ ಹಳಿ ದಾಟುತ್ತಿರುವ ಜನರ ಚಿತ್ರ
Updated on

ಬೆಂಗಳೂರು: ಕ್ರಿ. ಶ 16 ನೇ ಶತಮಾನದ ಮಧ್ಯಭಾಗದಲ್ಲಿ ಬೆಂಗಳೂರು ನಿರ್ಮಾತೃ ಕೆಂಪೇಗೌಡ ಉತ್ತರದಲ್ಲಿ ಯಲಹಂಕವನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ. ಕೆರೆಗಳನ್ನು ರಕ್ಷಿಸಿ, ಉತ್ತಮ ರಸ್ತೆಗಳನ್ನು ನಿರ್ಮಾಣ ಮಾಡಿ ಅವುಗಳನ್ನು ಜೀವಂತವಾಗಿ ಇಟ್ಟಕೊಂಡಿದ್ದರು.

ಆದರೆ,  2007ರಲ್ಲಿ ಬಿಬಿಎಂಪಿ ವಿಸ್ತರಣೆಯಾದ ಬಳಿಕ ಯಲಹಂಕ ಮತ್ತು ಬ್ಯಾಟರಾಯನಪುರ ಮಹಾನಗರ ವ್ಯಾಪ್ತಿಗೆ ಸೇರಿದು  ಈವರೆಗೂ ಇಲ್ಲಿ ಉತ್ತಮ ರಸ್ತೆಗಳಿಲ್ಲ. ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ ಹಾಗೂ ಒಳಚರಂಡಿ ಸಮಸ್ಯೆ ಕೊರತೆ ಎದ್ದುಕಾಣುತ್ತಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಕೆಲ ಐಟಿ ಬಿಟಿ, ಬಹುರಾಷ್ಟ್ರೀಯ ಕಂಪನಿಗಳು ಈ ಭಾಗದಲ್ಲಿಯೇ ಇರುವುದರಿಂದ ರಸ್ತೆಗಳೂ ಹಾಳಾಗಿದ್ದು. ಇಲ್ಲಿನ ಭೂಮಿಯ ಮೇಲೆ ಗಗನಕ್ಕೇರಿದೆ.

ದೂರದೃಷ್ಟಿಯ ಕೊರೆತಯಿಂದಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಲಂಹಕ ಸುತ್ತಮುತ್ತಲಿನ ಪ್ರದೇಶವನ್ನು ನಾಶಪಡಿಸಿದ್ದಾರೆ. ರಿಯಲ್ ಎಸ್ಟೇಟ್ ಹಬ್ ಆಗಿ ಈ ಪ್ರದೇಶ ಪರಿವರ್ತನೆಯಾಗಿದೆ ಎಂದು ನಿವೃತ್ತ ಶಿಕ್ಷಕ ಪಿ. ಜಿ. ಸದಾಶಿವಯ್ಯ ವಿಷಾಧ ವ್ಯಕ್ತಪಡಿಸುತ್ತಾರೆ.

ಯಲಹಂಕ ಮಾತ್ರವಲ್ಲದೇ, ಸುತ್ತಮುತ್ತಲಿನ ಪ್ರದೇಶಗಳಾದ ಹೆಬ್ಬಾಳ, ಕೊಡಿಗೇಹಳ್ಳಿ, ಬ್ಯಾಟರಾಯನಪುರ, ಯಶವಂತಪುರ, ಮತ್ತಿತರ ಪ್ರದೇಶಗಳಲ್ಲಿ ನೂರಾರು ಅಪಾರ್ಟ್ ಮೆಂಟ್ ಸಂಕೀರ್ಣಗಳು ತಲೆ ಎತ್ತಿವೆ.

30 ವರ್ಷಗಳ ಹಿಂದೆ ಈ ಪ್ರದೇಶ ನಗರದ ಹೊರವಲಯವಾಗಿತ್ತು. ಆದರೆ, ಇಂದು ಇವೆಲ್ಲವೂ ನಗರ ವ್ಯಾಪ್ತಿಯೊಳಗೆ ಸೇರ್ಪಡೆಗೊಂಡಿವೆ. ಹೆಚ್ಚಿನ ಸಂಖ್ಯೆಯ ಜನರು ಈ ಕಡೆ ವಾಸಿಸಲು ಆಗಮಿಸುತ್ತಿದ್ದಾರೆ. ಇದು ಹೊಸ ಬೆಂಗಳೂರು ಆಗಿದೆ. ಬಹುತೇಕ ಮಂದಿ ಇಲ್ಲಿನವರಲ್ಲಾ, ಬೇರೆ ರಾಜ್ಯಗಳಿಂದ ಬಂದವರೆ ಇಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ.

ಮತದಾರರ ಸಂಖ್ಯೆ ಇಲ್ಲಿ ಹೆಚ್ಚಿದೆ. ಹೊಸ ಬೆಂಗಳೂರಿನ ಮತದಾರರನ್ನು ಸಂರ್ಪಕಿಸುವುದೇ ಅಭ್ಯರ್ಥಿಗಳ ಪ್ರಮುಖ ಸಮಸ್ಯೆಯಾಗಿದೆ ಎಂದು ಕೊಡಿಗೇಹಳ್ಳಿ ನಿವಾಸಿ ಆರ್. ಸಿ. ಪಾಟೀಲ್ ಹೇಳುತ್ತಾರೆ.

ಆರ್ . ಟಿ. ನಗರವನ್ನು ಹೆಬ್ಬಾಳಕ್ಕೆ ಸೇರಿಸಲಾಗಿದೆ. ಚರಂಡಿಗಳೆಲ್ಲಾ ಹೂಳು ತುಂಬಿಕೊಂಡಿವೆ. ಅವುಗಳಿಂದ ಅಧಿಕ ಮಳೆ ಬಿದ್ದಾಗ ಪ್ರವಾಹ ಪರಿಸ್ಥಿತಿ ತಲೆದೋರಲಿದೆ. ಕೊನೆಯ ಬಾರಿಗೆ ಯಾವಾಗ ಹೂಳು ತೆಗೆಯಲಾಯಿತು ಎಂಬ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಾರೆ ಬಣ್ಣದ ಅಂಗಡಿ ವ್ಯಾಪಾರಿ ನರಸಿಂಹ ರೆಡ್ಡಿ.

ಬ್ಯಾಟರಾಯನಪುರ, ಯಲಹಂಕಕ್ಕೆ ಹತ್ತಿರದಲ್ಲಿದ್ದರೂ ರಸ್ತೆಗಳು , ಉದ್ಯಾನಗಳು, ಸರಿಯಾಗಿಲ್ಲ. ಮರಗಳು ಮಾಯವಾಗಿವೆ. ಸ್ಥಳೀಯ ಬಸ್ ಸಂಪರ್ಕದ ಕೊರತೆ ಹೆಚ್ಚಾಗಿದೆ. 18 ವರ್ಷದಿಂದ ನೋಡುತ್ತಿದ್ದೀವಿ ಇಲ್ಲಿ ಸರಿಯಾದ ಬಸ್ ವ್ಯವಸ್ಥೆಯೇ ಇಲ್ಲ ಬಿಬಿಎಪಿಗೆ ಒಳಪಟ್ಟಿದ್ದರೂ ಮೆಜೆಸ್ಟಿಕ್, ಮಾರ್ಕೆಟ್ ಗೆ ಹೋಗಲು ಸರಿಯಾದ ಬಸ್ ಸೌಲಭ್ಯವಿಲ್ಲ ಎಂದು ಅಂಚೆ ಇಲಾಖೆ ನಿವೃತ್ತ ಅಧಿಕಾರಿ ಆರ್. ವೆಂಕಟರಾಮ್ ಆರೋಪಿಸುತ್ತಾರೆ.

ಯಶವಂತಪುರ ಮೆಟ್ರೋ ರೈಲು ಸಂಪರ್ಕದಿಂದ ಈ ಭಾಗದ ನಿವಾಸಿಗಳಿಗೆ ಸ್ವಲ್ಪ ಅನುಕೂಲವಾಗಿದೆ. ಆರು ವರ್ಷಗಳ ನಂತರ ಪರಿಸ್ಥಿತಿ ಮತ್ತಷ್ಟು ಹಾಳಾಗಿದೆ. ಮಳೆ ಬಂದಾಗ ಮಳೆ ನೀರಿಲ್ಲಾ ಮನೆಗೆ ಬರುತ್ತದೆ. ಕಳೆದ ಬಾರಿ ಶಾಸಕ ಬಂದು ಭರವಸೆ ನೀಡಿದ್ದರು. ಆದರೆ, ಯಾವುದೇ ರೀತಿಯ ಕೆಲಸ ಮಾಡಲಿಲ್ಲ . ಹೋದ ವಾರ ಇಂತಹ ಸಮಸ್ಯೆಯನ್ನು ಎದುರಿಸಬೇಕಾಯಿತು ಎಂದು ಬಾಯಣ್ಣ ಲೇಔಟ್ ನಿವಾಸಿ ಜಯಂತಿ ನೋವು ತೋಡಿಕೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com