ಶೂನ್ಯ ಫಲಿತಾಂಶ; 10 ಕಾಲೇಜುಗಳ ಮಾನ್ಯತೆ ರದ್ದು

ಸತತ ಮೂರು ವರ್ಷಗಳಿಂದ ಶೂನ್ಯ ಫಲಿತಾಂಶ ಪಡೆದ 10 ಖಾಸಗಿ ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಮಾನ್ಯತೆಯನ್ನು 2018-19ನೇ ಶೈಕ್ಷಣಿಕ ಸಾಲಿನಿಂದ ಅನ್ವಯಿಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಹಿಂಪಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಸತತ ಮೂರು ವರ್ಷಗಳಿಂದ ಶೂನ್ಯ ಫಲಿತಾಂಶ ಪಡೆದ 10 ಖಾಸಗಿ ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಮಾನ್ಯತೆಯನ್ನು 2018-19ನೇ ಶೈಕ್ಷಣಿಕ ಸಾಲಿನಿಂದ ಅನ್ವಯಿಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಹಿಂಪಡೆದಿದೆ. 
2015, 16 ಹಾಗೂ 2018ನೇ ಸಾಲಿ ಪರೀಕ್ಷೆಗಳಲ್ಲಿ ಈ 10 ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಶೂನ್ಯ ಫಲಿತಾಂಶ ಪಡೆದ ಹಿನ್ನಲೆಯಲ್ಲಿ ಅವುಗಳ ಮಂಜೂರಾತಿ ಆದೇಶವನ್ನು ರದ್ದು ಪಡಿಸಲು ಶಿಫಾರಸು ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಶೂನ್ಯ ಫಲಿತಾಂಶ ಹಿನ್ನಲೆಯಲ್ಲಿ, ಫಲಿತಾಂಶಗಳತ್ತ ಗಮನಹರಿಸಿ ಸುಧಾರಿಸಿಕೊಳ್ಳುವಂತೆ ಸರ್ಕಾರ ಈ ಹಿಂದೆಯೇ ಕಾಲೇಜುಗಳಿಗೆ ನೋಟಿಸ್ ಮಾಡಿತ್ತು. ಆದರೂ, ಫಲಿತಾಂಶ ಶೂನ್ಯದಲ್ಲಿಯೇ ಮುಂದುವರೆದ ಹಿನ್ನಲೆಯಲ್ಲಿ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ. 
ಮಾನ್ಯತೆ ರದ್ದುಕೊಂಡಿರುವ ಕಾಲೇಜುಗಳು ವಿವರ ಇಂತಿದೆ...
ಬಳ್ಳಾರಿಯ ಎಸ್.ಜೆ.ಬಸವೇಶ್ವರ ಪದವಿಪೂರ್ವ ಕಾಲೇಜು, ಬಾಗಲಕೋಟೆ ಕಾಂಚನೇಶ್ವರ ಪದವಿಪೂರ್ವ ಕಾಲೇಜು, ಬೆಳಗಾವಿಯ ರೇಖಾ ಪಿ. ಪಾಟೀಲ ಪದವಿಪೂರ್ವ ಕಾಲೇಜು, ದಾವಣಗೆಲೆಯ ಗೌಸಿಯಾ ಪದವಿಪೂರ್ವ ಕಾಲೇಜು, ಹಾವೇರಿಯ ಮಾರುತಿ ಸ್ವತಂತ್ರ ಪದವಿಪೂರ್ವ ಕಾಲೇಜು, ರಾಣಿ ಬೇಗಂ ಪದವಿಪೂರ್ವ ಕಾಲೇಜು, ಕಲಬುರಗಿಯ ಮೆಹಬೂಬ್ ಸುಬಾನಿ ಪದವಿಪೂರ್ವ ಕಾಲೇಜು, ಬ್ಯಾಪ್ಟಿಸ್ಟ್ ಪದವಿಪೂರ್ವ ಕಾಲೇಜು, ಹುಸೈನಿ ಪದವಿಪೂರ್ವ ಕಾಲೇಜು 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com