ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.59.56 ವಿದ್ಯಾರ್ಥಿಗಳು ತೇರ್ಗಡೆ

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಒಟ್ಟಾರೆ ಶೇಕಡಾ 59.56 ಫಲಿತಾಂಶ ಬಂದಿದೆ. ಈ ಬಾರಿ ಮೊದಲ ಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿದ್ದು, 91.49, ಎರಡನೇ ಸ್ಥಾನದಲ್ಲಿ...
Published on

ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಒಟ್ಟಾರೆ ಶೇಕಡಾ 59.56 ಫಲಿತಾಂಶ ಬಂದಿದೆ.

ದಕ್ಷಿಣ ಕನ್ನಡ ಪ್ರಥಮ ಸ್ಥಾನ ಪಡೆದಿದ್ದು(ಶೇ.91.49), ಉಡುಪಿ ಜಿಲ್ಲೆ ದ್ವಿತೀಯ(ಶೇ.90.67), ಕೊಡಗು ತೃತೀಯ(ಶೇ.83.94), ಮಡಿಕೇರಿ ನಾಲ್ಕನೇ ಸ್ಥಾನ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಕೊನೆ ಸ್ಥಾನ ಪಡೆದಿದೆ. ಎಂದು ಪಿಯು ಬೋರ್ಡ್ ನಿರ್ದೇಶಕಿ ಶಿಖಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಎಂದಿನಂತೆ ಈ ವರ್ಷವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಈ ವರ್ಷ 6,85,713 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 4,08, 421 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇಕಡಾ 68ರಷ್ಟು, ವಾಣಿಜ್ಯ ಶೇಕಡಾ 63 ಮತ್ತು ಕಲಾ ವಿಭಾಗದಲ್ಲಿ ಶೇಕಡಾ 45ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ರಾಜ್ಯದ ಒಟ್ಟು 68 ಕಾಲೇಜುಗಳಲ್ಲಿ ಶೇಕಡಾ 100 ಫಲಿತಾಂಶ ಬಂದರೆ 118 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಕಂಡಿದೆ ಎಂದು ಪಿಯು ಮಂಡಳಿ ನಿರ್ದೇಶಕಿ ಸಿ.ಶಿಖಾ ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಇಂದು ಮಧ್ಯಾಹ್ನದ 1 ಗಂಟೆ ಬಳಿಕ ವೆಬ್ ಸೈಟ್ ಗಳಲ್ಲಿ ಫಲಿತಾಂಶ ಲಭ್ಯವಿದ್ದು, ನಾಳೆ ಆಯಾ ಕಾಲೇಜುಗಳಲ್ಲಿ ಫಲಿತಾಂಶ ದೊರೆಯಲಿದೆ.

ಒಟ್ಟು ಆರು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ  3,37,860 ಬಾಲಕಿಯರು ಮತ್ತು 3,52,292 ಬಾಲಕರು ಸೇರಿದ್ದಾರೆ.

ಎಸ್​​ಎಂಎಸ್​ ಮೂಲಕ ಫಲಿತಾಂಶ
ವಿದ್ಯಾರ್ಥಿಗಳು ಎಸ್​ಎಂಎಸ್​ ಮಾಡುವ ಮೂಲಕ ಫಲಿತಾಂಶ ಪಡೆಯಬಹುದಾಗಿದೆ. ತಮ್ಮ ಮೊಬೈಲ್​ನಿಂದ KAR12 ಎಂದು ಟೈಪ್​ ಮಾಡಿ ಒಂದು ಸ್ಪೇಸ್​ ಕೊಟ್ಟು ನಿಮ್ಮ ರೋಲ್​ ನಂಬರ್​ ನಮೂದಿಸಿ 56263ಗೆ ಸಂದೇಶ ಕಳುಹಿಸುವ ಮೂಲಕ ಫಲಿತಾಂಶ ಪಡೆಯಬಹುದು.

ಪಿಯುಸಿ ಫಲಿತಾಂಶ ಪ್ರಕಟವಾಗುವ ವೆಬ್ ಸೈಟ್ ಗಳ ವಿವರ:
1. http://www.pue.kar.nic.in
2. http://karresults.nic.in
3. http://puc.kar.nic.in

ಸೋಮವಾರ ಪ್ರಕಟಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಈ ವರ್ಷ ಒಟ್ಟಾರೆ ತೇರ್ಗಡೆಯಲ್ಲಿ ಶೇಕಡಾ 7.1ರಷ್ಟು ಏರಿಕೆ ಕಂಡುಬಂದಿದೆ.

ಕಳೆದ ವರ್ಷ ರಾಜ್ಯದಲ್ಲಿ ಒಟ್ಟಾರೆ ಶೇಕಡಾ 52.38ರಷ್ಟು ಫಲಿತಾಂಶ ಕಂಡುಬಂದಿದ್ದು, ಈ ವರ್ಷ ಶೇಕಡಾ 59.56ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಒಟ್ಟು ತೇರ್ಗಡೆ ಹೊಂದಿರುವ 4,08.421 ವಿದ್ಯಾರ್ಥಿಗಳಲ್ಲಿ 54,692 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ, ಮೊದಲ ದರ್ಜೆಯಲ್ಲಿ 2,13,611, ದ್ವಿತೀಯ ದರ್ಜೆಯಲ್ಲಿ 82,532 ಹಾಗೂ ಮೂರನೇ ದರ್ಜೆಯಲ್ಲಿ 57,586 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಈ ವರ್ಷ ಕೂಡ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ಶೇಕಡಾ 59.95ರಷ್ಟು ಗ್ರಾಮೀಣ ವಿದ್ಯಾರ್ಥಿಗಳು ಮತ್ತು ಶೇಕಡಾ 59.45ರಷ್ಟು ನಗರ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಈ ವರ್ಷ ತೇರ್ಗಡೆ ಹೊಂದಿದ ಬಾಲಕಿಯರ ಸಂಖ್ಯೆ ಶೇಕಡಾ 67.11 ಮತ್ತು ಬಾಲಕರು ಶೇಕಡಾ 52.30. ಇಲಾಖೆಯ ಅಧಿಕೃತ ವೆಬ್ ಸೈಟ್ kseeb.kar.nic.in and results.nic.in

ವಿಜ್ಞಾನ ವಿಭಾಗದಲ್ಲಿ 600ರಲ್ಲಿ 597 ಅಂಕಗಳು, ವಾಣಿಜ್ಯ ವಿಭಾಗದಲ್ಲಿ 600ರಲ್ಲಿ 595 ಅಂಕಗಳು ಬಂದಿವೆ.

ಈ ಪರೀಕ್ಷೆಯಲ್ಲಿ ತೇರ್ಗಡೆಯಾಗದವರಿಗೆ ಪೂರಕ ಪರೀಕ್ಷೆಗಳನ್ನು ಜೂನ್ 8ರಿಂದ 20ರವರೆಗೆ ನಡೆಸಲಾಗುವುದು ಎಂದು ಶಿಖಾ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com