ಬೆಂಗಳೂರು: ನಗರಾದ್ಯಂತ ರಾರಾಜಿಸುತ್ತಿರುವ ಅನಧಿಕೃತ ಫ್ಲೆಕ್ಸ್ ಗಳನ್ನು ತೆರವುಗೊಳಿಸಿ ಹೈಕೋರ್ಟ್ ಸೂಚನೆ ಪಾಲಿಸಲು ಎಲ್ಲಾ ರಾಜಕಾರಣಿಗಳು ಸಹಕಾರ ನೀಡಬೇಕೆಂದು ಸಿಎಂ ಕುಮಾರ ಸ್ವಾಮಿ ಹೇಳಿದ್ದಾರೆ.
ಮಾಲಿನ್ಯ ತಪ್ಪಿಸುವುದ ಜೊತೆಗೆ ನಗರದ ಸೌಂದರ್ಯ ಹೆಚ್ಚಿಸುವ ಸಲುವಾಗಿ ಫ್ಲೆಕ್ಸ್ ಗಳನ್ನು ದೂರ ಇರಿಸಿಬೇಕೆಂದು ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ನೀಡಿದೆ. ಹೀಗಾಗಿ ರಾಜಕಾರಣಿಗಳಿಗೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಹಾಗೂ ಎಲ್ಲಾ ಪಕ್ಷದ ರಾಜಕೀಯ ಮುಖಂಡರುಗಳಿಗೆ ಕೋರ್ಟ್ ನಿರ್ದೇಶನ ಪಾಲಿಸಿ ಸಹಕಾರ ನೀಡಬೇಕು ಎಂದು ಹೇಳಿಕೆ ಬಿಡುಗಡೆ ಮಾಡಲಾಗಿದೆ.
ಇನ್ನೂ ಕರ್ತವ್ಯದಲ್ಲಿ ಲೋಪ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಸಿಎಂ ತಿಳಿಸಿದ್ದಾರೆ..
ಯಲಹಂಕ ಶಾಸಕ ಎಸ್, ಆರ್ ವಿಶ್ವನಾಥ್ ಅವರು ಕೂಡ ಎನ್ ಇಎಸ್ ರಸ್ತೆಯಲ್ಲಿ ಫ್ಲೆಕ್ಸ್ ಹಾಕಿದ್ದರು,. ಪಾಲಿಕೆ ಜಂಟಿ ಆಯುಕ್ತ, ಎಸ್ ನಾಗರಾಜ್ ಅಲ್ಲಿದ್ದ ಎಲ್ಲಾ ಫ್ಲೆಕ್ಸ್ ಗಳನ್ನು ತೆರವುಗೊಳಿಸಿದ್ದಾರೆ.