ಡಿಸೆಂಬರ್ ಅಂತ್ಯದೊಳಗೆ 'ಉಜ್ವಲ ಯೋಜನೆ'ಯ ಲಾಭ ಎಲ್ಲರನ್ನೂ ತಲುಪಲಿದೆ: ಸಚಿವ

2018ರ ಡಿಸೆಂಬರ್ ಅಂತ್ಯದೊಳಗೆ ಪ್ರಧಾನಮಂತ್ರಿ ಉಜ್ವರ ಯೋಜನೆಯ ಲಾಭ ಪ್ರತೀಯೊಬ್ಬರನ್ನೂ ತಲುಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿ ಸಚಿವಾಲಯದ ನಿರ್ದೇಶಕ (ಎಲ್'ಪಿಜಿ) ನಿರ್ದೇಶಕ ಕೆ.ಎಂ. ಮಹೇಶ್ ಅವರು ಹೇಳಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: 2018ರ ಡಿಸೆಂಬರ್ ಅಂತ್ಯದೊಳಗೆ ಪ್ರಧಾನಮಂತ್ರಿ ಉಜ್ವರ ಯೋಜನೆಯ ಲಾಭ ಪ್ರತೀಯೊಬ್ಬರನ್ನೂ ತಲುಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿ ಸಚಿವಾಲಯದ ನಿರ್ದೇಶಕ (ಎಲ್'ಪಿಜಿ) ನಿರ್ದೇಶಕ ಕೆ.ಎಂ. ಮಹೇಶ್ ಅವರು ಹೇಳಿದ್ದಾರೆ. 
ಯೋಜನೆ ಕುರಿತಂತೆ ಮಾತನಾಡಿರುವ ಅವರು, ಉಜ್ವಲ ಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯದಿಂದ ಒಟ್ಟು 20,40,826 ಅರ್ಜಿಗಳು ಬಂದಿವೆ. ಇದರಲ್ಲಿ ಈಗಾಗಲೇ 15,94,439 ಅರ್ಜಿಗಳನ್ನು ಪರಿಗಣಿಸಿ ಯೋಜನೆ ತಲುವಂತೆ ಮಾಡಲಾಗಿದೆ. ಉನ್ನುಳಿದವರಿಗೆ ಪ್ರಸಕ್ತ ಸಾಲಿನ ಡಿಸೆಂಬರ್ ಅಂತ್ಯದೊಳಗೆ ಅನುಕೂಲಗಳು ತಲುವಂತೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. 
ಯೋಜನೆಯಡಿಯಲ್ಲಿ 2,040,826 ಅರ್ಜಿಗಳನ್ನು ಸಲ್ಲಿಸುವ ಮೂಲಕ ಕರ್ನಾಟಕ ರಾಜ್ಯ 12ನೇ ಸ್ಥಾನವನ್ನು ಪಡೆದುಕೊಂಡಿದೆ. ಉತ್ತರ ಪ್ರದೇಶ 12,084,879 ಅರ್ಜಿಗಳ ಮೂಲಕ ಮೊದಲ ಸ್ಥಾನದಲ್ಲಿದೆ. ಬಿಹಾರ 10,496,175), ಪಶ್ಚಿಮ ಬಂಗಾಳ 8,482,638 ಅರ್ಜಿಗಳನ್ನು ಸಲ್ಲಿಸಿದೆ. ಇನ್ನು ಕರ್ನಾಟಕ ರಾಜ್ಯದ ತುಮಕೂರಿನಿಂದೇ ಒಟ್ಟು 1,12,926 ಅರ್ಜಿಗಳು ಬಂದಿದ್ದವು. ರಾಯಚೂರು 1,11,262, ಬೆಳಗಾವಿ 91,214 ಅರ್ಜಿ ಸಲ್ಲಿಸಿದ್ದವು. ಕೊಡಗಿನಿಂದ ಅತ್ಯಂತ ಕಡಿಮೆ 3,914 ಅರ್ಜಿಗಳು ಬಂದಿದ್ದವು. ದಕ್ಷಿಣ ಕನ್ನಡದಿಂದ 13,693, ಬೆಂಗಳೂರು ನಗರದಿಂದ 13,358 ಅರ್ಜಿಗಳು ಬಂದಿವೆ ಎಂದು ವಿವರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com