ರಾಹುಲ್ ಪ್ರಧಾನಿ ಮೋದಿ ಅಪ್ಪಿದ ರೀತಿ ಬಾಲಿಶವಾಗಿತ್ತು: ಜೆಡಿಎಸ್ ಅಧ್ಯಕ್ಷ ವಿಶ್ವನಾಥ್

ಸಂಸತ್ತಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಅಪ್ಪಿಕೊಂಡ ರೀತಿ ಬಾಲಿಶವಾಗಿತ್ತು ಎಂದು ಜೆಡಿಎಸ್ ನೂತನ ಅಧ್ಯಕ್ಷ ವಿಶ್ವನಾಥ್ ಅವರು ಸೋಮವಾರ ಹೇಳಿದ್ದಾರೆ...
ಜೆಡಿಎಸ್ ನೂತನ ಅಧ್ಯಕ್ಷ ವಿಶ್ವನಾಥ್
ಜೆಡಿಎಸ್ ನೂತನ ಅಧ್ಯಕ್ಷ ವಿಶ್ವನಾಥ್
ಬೆಂಗಳೂರು: ಸಂಸತ್ತಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಅಪ್ಪಿಕೊಂಡ ರೀತಿ ಬಾಲಿಶವಾಗಿತ್ತು ಎಂದು ಜೆಡಿಎಸ್ ನೂತನ ಅಧ್ಯಕ್ಷ ವಿಶ್ವನಾಥ್ ಅವರು ಸೋಮವಾರ ಹೇಳಿದ್ದಾರೆ. 
ಈ ಕುರಿತಂತೆ ಮಾತನಾಡಿರುವ ಅವರು, ಅವಿಶ್ವಾಸ ನಿರ್ಣಯ ಮಂಡನೆ ವೇಳೆ ರಾಹುಲ್ ಗಾಂಧಿಯವರು ಮೋದಿಯರನ್ನು ಅಪ್ಪಿಕೊಂಡ ರೀತಿ ಬಾಲಿಶವಾಗಿತ್ತು. ಇದು ಕೇವಲ ನನ್ನ ಮಾತಲ್ಲ. ಪ್ರತೀಯೊಬ್ಬರೂ ಹೇಳುತ್ತಿದ್ದಾರೆ. ಇಡೀ ದೇಶವೇ ಹೇಳುತ್ತಿದೆ ಎಂದು ಹೇಳಿದ್ದಾರೆ. 
ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿದ್ದು, ಈ ನಡುವಲ್ಲೇ ವಿಶ್ವನಾಥ್ ಅವರ ಈ ಹೇಳಿಕೆ ಕಿಡಿ ಹೊತ್ತುವಂತೆ ಮಾಡಿದೆ. 
ಜುಲೈ.20 ರಂದು ಆಂಧ್ರಪ್ರದೇಶ ತೆಲುಗು ದೇಶಂ ಪಕ್ಷ ಹಾಗೂ ಕಾಂಗ್ರೆಸ್ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಆಡಳಿತಾರೂಢ ಪಕ್ಷ ಎನ್'ಡಿಎ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿತ್ತು. ಈ ವೇಳೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿಯವರು ಅಂತಿಮವಾಗಿ ಮೋದಿಯವರ ಬಳಿ ಹೋಗಿ ಹಸ್ತಲಾಘವ ಮಾಡಿ, ಅಪ್ಪಿಕೊಂಡಿದ್ದರು. ರಾಹುಲ್ ಅವರ ಈ ವರ್ತನೆಗೆ ಸಾಕಷ್ಟು ವಿರೋಧ ಹಾಗೂ ಟೀಕೆಗಳು ವ್ಯಕ್ತವಾಗಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com