ಕರುಣಾನಿಧಿ ವಿಧಿವಶ : ಕರ್ನಾಟಕದಲ್ಲಿ ಒಂದು ದಿನ ಶೋಕಾಚರಣೆ

ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ವಿಧಿವಶ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಒಂದು ದಿನ ಶೋಕಾಚರಣೆ ನಡೆಸಲು ಸರ್ಕಾರ ನಿರ್ಧರಿಸಿದೆ.
ಕರುಣಾನಿಧಿ
ಕರುಣಾನಿಧಿ

ಬೆಂಗಳೂರು :ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ವಿಧಿವಶ ಹಿನ್ನೆಲೆಯಲ್ಲಿ  ಕರ್ನಾಟಕದಲ್ಲಿ ಒಂದು ದಿನ ಶೋಕಾಚರಣೆ ನಡೆಸಲು ಸರ್ಕಾರ ನಿರ್ಧರಿಸಿದೆ.

ಕರುಣಾನಿಧಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ನಂತರ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಈ ನಿರ್ಧಾರ ಘೋಷಿಸಿದ್ದಾರೆ.  

ತಮಿಳುನಾಡು ಬೆಳವಣಿಗೆ ಹಾಗೂ ಡಿಎಂಕೆ ಪಕ್ಷವನ್ನು ಸದೃಢಗೊಳಿಸಲು ಕರುಣಾನಿಧಿ ತಮ್ಮ  ಜೀವಿತಾದುದ್ದಕ್ಕೂ ಶ್ರಮಿಸಿದ್ದರು. ಅನೇಕ ಬಾರಿ ಅವರನ್ನು ಭೇಟಿಯಾದ್ದಾಗ  ಪ್ರಾದೇಶಿಕ ಪಕ್ಷಗಳ ಪ್ರಾಮುಖ್ಯತೆಯನ್ನು ಅರ್ಥಮಾಡಿಸುತ್ತಿದ್ದರು  ಎಂದು  ಕುಮಾರಸ್ವಾಮಿ ಹೇಳಿದ್ದಾರೆ.

ಕರುಣಾನಿಧಿ ನಿಧನದಿಂದ ತಮಿಳುನಾಡು ದೂರದೃಷ್ಟಿವುಳ್ಳ ಒಬ್ಬ ನಾಯಕನನ್ನು ಕಳೆದುಕೊಂಡಂತಾಗಿದ್ದು, ದೇಶದ ರಾಜಕಾರಣದಲ್ಲಿ ಅನನ್ಯ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ ಎಂದು ಸಂತಾಪ ಸೂಚಿಸಿದ್ದಾರೆ

ಐದು ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ ನಿಧನಕ್ಕೆ ಕರ್ನಾಟಕ ಸಂತಾಪ ಸೂಚಿಸಿದೆ. ಅವರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಉಭಯ ರಾಜ್ಯಗಳ ನಡುವೆ ಕಾವೇರಿ ನದಿ ನೀರಿನ ಹಂಚಿಕೆ ಸಂಬಂಧ ಹೋರಾಟ ಭುಗಿಲೆದ್ದಿತ್ತು.

ಯಾವುದೇ ಅಹಿತರ ವಾತಾವರಣದ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ತಾತ್ಕಾಲಿಕವಾಗಿ ತಮಿಳುನಾಡಿಗೆ ಬಸ್ ಸೇವೆಯನ್ನು ರದ್ದುಗೊಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com