ಮಾಂಸಹಾರ ಸೇವನೆ ನಿಲ್ಲಿಸಿ, ಸಸ್ಯಹಾರಿಗಳಾಗಿ: ದಲೈಲಾಮಾ

ಪ್ರಪಂಚದಾದ್ಯಂತ ಸಸ್ಯಹಾರವನ್ನು ಉತ್ತೇಜಿಸುವ ಅಗತ್ಯತೆಯಿದೆ ಎಂದು ಟಿಬೆಟ್ ಧರ್ಮಗುರು ದಲೈಲಾಮಾ ಪ್ರತಿಪಾದಿಸಿದ್ದಾರೆ. ...
ದಲೈಲಾಮಾ
ದಲೈಲಾಮಾ
ಬೆಂಗಳೂರು: ಪ್ರಪಂಚದಾದ್ಯಂತ ಸಸ್ಯಹಾರವನ್ನು ಉತ್ತೇಜಿಸುವ ಅಗತ್ಯತೆಯಿದೆ ಎಂದು ಟಿಬೆಟ್ ಧರ್ಮಗುರು ದಲೈಲಾಮಾ ಪ್ರತಿಪಾದಿಸಿದ್ದಾರೆ. 
ನಗರದ ವನ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ದಲೈಲಾಮಾ,
ನಾವು ತೀರಾ ಅಧಿಕ ಎನ್ನುವಷ್ಟು ಮಾಂಸಹಾರ ಸೇವನೆ ಮಾಡುತ್ತಿದ್ದೇವೆ,  ಪ್ರಾಣಿಗಳ ಹಾಗೂ ಪ್ರಕೃತಿ ವಿರುದ್ಧ ಕ್ರೂರತೆ ತೋರುತ್ತಿದ್ದೇವೆ,  ಪ್ರಾಣವಿರುವ ಎಲ್ಲಾ ಜೀವಿಗಳ ಮೇಲೆ ನಾವು ಸೂಕ್ಷ್ಮತೆ ತೋರಬೇಕು, ಅವು ತುಂಬಾ ಚಿಕ್ಕವು, ಅವುಗಳು ನೋವು ಮತ್ತು ಸಂತೋಷ ಅನುಭವಿಸುತ್ತವೆ ಎಂದು ಹೇಳಿದ್ದಾರೆ.
ಭಾರತ ಜಾತ್ಯಾತೀತೆಯನ್ನು ಬಹುದೊಡ್ಡ ದೇಶ, ಜಾತ್ಯಾತೀತತೆ ಇಂದಿಗೂ ಜ್ವಲಂತ ವಿಷಯ ಎಂದು ಹೇಳಿದ್ದಾರೆ, ಭಾರತದ ಜಾತ್ಯಾತೀತತೆಯ ಸಂಪ್ರದಾಯವನ್ನು ದಲೈ ಲಾಮಾ ಹಾಡಿ ಹೊಗಳಿದ್ದಾರೆ, 
ಅತಿಯಾಗಿ ಬರುವ ಕೋಪ ಹಾಗೂ ಮತ್ತಿತರ ಋಣಾತ್ಮಕ ವಿಷಯಗಳ ಬಗ್ಗೆ  ಮಾತನಾಡಿದ ದಲೇ ಲಾಮಾ, ಮನುಷ್ಯಕರಲ್ಲಿ ಶಾಂತಿ ಮತ್ತು ಪ್ರೀತಿ ಇರಬೇಕು, ಇದೆಲ್ಲಾವನ್ನು ನಮಗೆ ಧರ್ಮ ನೀಡುತ್ತದೆ ಎಂದು ಹೇಳಿದರು. 2,600 ವರ್ಷಗಳಷ್ಟು ಹಿಂದಿನದಾದ ಭಾರತದಲ್ಲಿ ವಿಜ್ಞಾನ ಮತ್ತು ಮನಃಶಾಸ್ತ್ರ ತುಂಬಾ ಮುಂದುವರಿದಿದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com