ಕೇರಳ ಪ್ರವಾಹ :ವಿಧಾನಪರಿಷತ್ ಸದಸ್ಯರಿಂದ ಒಂದು ತಿಂಗಳ ಸಂಬಳ ಪರಿಹಾರ

ಕೇರಳದಲ್ಲಿ ಭಾರಿ ಪ್ರವಾಹದಿಂದ ಮನೆ, ಮಠ ಕಳೆದುಕೊಂಡು ನಿರಾಶ್ರಿತರಾದವರಿಗೆ ವಿಧಾನಪರಿಷತ್ ಸದಸ್ಯರಾದ ಹೆಚ್. ಎಂ. ರೇವಣ್ಣ ಹಾಗೂ ವಿ.ಎಸ್. ಉಗ್ರಪ್ಪ ಒಂದು ತಿಂಗಳ ಸಂಬಳದ ಪರಿಹಾರ ನೀಡಿದ್ದಾರೆ.
ಹೆಚ್. ಎಂ. ರೇವಣ್ಣ, ವಿ.ಎಸ್ . ಉಗ್ರಪ್ಪ
ಹೆಚ್. ಎಂ. ರೇವಣ್ಣ, ವಿ.ಎಸ್ . ಉಗ್ರಪ್ಪ

 ಬೆಂಗಳೂರು: ಕೇರಳದಲ್ಲಿ ಭಾರಿ ಪ್ರವಾಹದಿಂದ ಮನೆ, ಮಠ ಕಳೆದುಕೊಂಡು ನಿರಾಶ್ರಿತರಾದವರಿಗೆ ವಿಧಾನಪರಿಷತ್ ಸದಸ್ಯರಾದ ಹೆಚ್. ಎಂ. ರೇವಣ್ಣ ಹಾಗೂ ವಿ.ಎಸ್. ಉಗ್ರಪ್ಪ ಒಂದು ತಿಂಗಳ ಸಂಬಳದ ಪರಿಹಾರ ನೀಡಿದ್ದಾರೆ.

ನೆರೆಯ ಕೇರಳದಲ್ಲಿ ಭಾರಿ ಮಳೆ ಹಾಗೂ ಪ್ರವಾಹದಿಂದ ಅಪಾರ ಪ್ರಮಾಣದ ಜೀವ, ಆಸ್ತಿ ಪಾಸ್ತಿ ನಷ್ಟ ಉಂಟಾಗಿದ್ದು, ರಾಜ್ಯದ ಜನರು ನೆರವಿನ ಹಸ್ತ ಚಾಚುವಂತೆ ಹೆಚ್ ಎಂ ರೇವಣ್ಣ ಹಾಗೂ ಉಗ್ರಪ್ಪ ಮನವಿ ಮಾಡಿಕೊಂಡಿದ್ದಾರೆ.

 ಕೇರಳದಲ್ಲಿನ ಪ್ರವಾಹದಿಂದ ಸಂತ್ರಸ್ತರಾದವರಿಗೆ ಕರ್ನಾಟಕ ಸರ್ಕಾರ 10 ಕೋಟಿ ರೂಪಾಯಿ ಪರಿಹಾರವನ್ನು ಈಗಾಗಲೇ ನೀಡಿದ್ದು,  ಕೇಂದ್ರಸರ್ಕಾರ ಸೂಕ್ತ ಆರ್ಥಿಕ ನೆರವು ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com