ಸ್ವಚ್ಛ ರೈಲ್ವೆ ನಿಲ್ದಾಣ ಪಟ್ಟಿಯಲ್ಲಿ 11ನೇ ಸ್ಥಾನಕ್ಕೆ ಕುಸಿದ ಬೆಂಗಳೂರು ರೈಲ್ವೆ ನಿಲ್ದಾಣ!

ವರ್ಷಕ್ಕೆ 50 ಕೋಟಿ ಆದಾಯ ತರುವ ಸಂಗೋಳಿ ರಾಯಣ್ಣ ಬೆಂಗಳೂರು ಕೇಂದ್ರ ರೈಲ್ವೆ ನಿಲ್ದಾಣ ಸ್ವಚ್ಛ ರೈಲ್ವೆ ನಿಲ್ದಾಣಗಳ ಪಟ್ಟಿಯಲ್ಲಿ 11ನೇ ಸ್ಥಾನಕ್ಕೆ ಕುಸಿದಿದೆ...
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ
ನವದೆಹಲಿ: ವರ್ಷಕ್ಕೆ 50 ಕೋಟಿ ಆದಾಯ ತರುವ ಸಂಗೋಳಿ ರಾಯಣ್ಣ ಬೆಂಗಳೂರು ಕೇಂದ್ರ ರೈಲ್ವೆ ನಿಲ್ದಾಣ ಸ್ವಚ್ಛ ರೈಲ್ವೆ ನಿಲ್ದಾಣಗಳ ಪಟ್ಟಿಯಲ್ಲಿ 11ನೇ ಸ್ಥಾನಕ್ಕೆ ಕುಸಿದಿದೆ. 
ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೊಯಲ್ ಅವರು ಬಿಡುಗಡೆ ಮಾಡಿರುವ ಸ್ವಚ್ಛ ರೈಲ್ವೆ ನಿಲ್ದಾಣಗಳ ಪಟ್ಟಿಯಲ್ಲಿ ಬೆಂಗಳೂರು ರೈಲ್ವೆ ನಿಲ್ದಾಣ 1 ಸ್ಥಾನ ಕುಸಿದು 11ನೇ ಸ್ಥಾನಕ್ಕೆ ಜಾರಿದೆ. ಎ1 ವರ್ಗದ ಬೆಂಗಳೂರು ರೈಲ್ವೆ ನಿಲ್ದಾಣ 2017ರಲ್ಲಿ ಬಿಡುಗಡೆಯಾಗಿದ್ದ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿತ್ತು. 
ವಾರ್ಷಿಕವಾಗಿ 60 ಕೋಟಿ ರು. ಹಣ ಸಂಪಾದಿಸುವ ರೈಲ್ವೆ ನಿಲ್ದಾಣಗಳು ಎ1  ವರ್ಗಕ್ಕೆ ಸೇರುತ್ತವೆ. 8 ರಿಂದ 60 ಕೋಟಿ ರು. ವಾರ್ಷಿಕ ಹಣ ಸಂಪಾದಿಸುವ ರೈಲ್ವೆ ನಿಲ್ದಾಣಗಳು ಎ ಕ್ಯಾಟಗರಿಗೆ ಸೇರುತ್ತವೆ. 
ದೇಶದ 407 ರೈಲ್ವೆ ನಿಲ್ದಾಣಗಳಲ್ಲಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣ 11ನೇ ಸ್ವಚ್ಛ ರೈಲು ನಿಲ್ದಾಣ ಎಂಬ ಸ್ಥಾನ ಪಡೆದಿದ್ದು, ಎ1 ವರ್ಗದಲ್ಲಿ ಜೋದ್ ಪುರ ರೈಲ್ವೆ ನಿಲ್ದಾಣ ಪ್ರಥಮ ಸ್ಥಾನ ಪಡೆದಿದ್ದು ಎ ವರ್ಗದಲ್ಲಿ ಮನ್ವಾರ್ ರೈಲ್ವೆ ನಿಲ್ದಾಣ ಪ್ರಥಮ ಸ್ಥಾನ ಪಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com