ರಾಜ್ಯವು ಪ್ರವಾಹ, ಬರಗಾಲ ಪರಿಸ್ಥಿತಿಯನ್ನು ಒಟ್ಟಿಗೆ ಎದುರಿಸುತ್ತಿದೆ!

ರಾಜ್ಯ ಈ ವರ್ಷ ಮಳೆಗಾಲದಲ್ಲಿ ವಿಚಿತ್ರ ಹವಾಮಾನವನ್ನು ಎದುರಿಸುತ್ತಿದೆ. ಕರಾವಳಿ ಮತ್ತು ಮಲೆನಾಡು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ರಾಜ್ಯ ಈ ವರ್ಷ ಮಳೆಗಾಲದಲ್ಲಿ ವಿಚಿತ್ರ ಹವಾಮಾನವನ್ನು ಎದುರಿಸುತ್ತಿದೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಹಾಗೂ ದಕ್ಷಿಣ ಕರ್ನಾಟಕ ಭಾಗಗಳಲ್ಲಿ ತೀವ್ರ ಮಳೆಯಿಂದ ಪ್ರವಾಹ ಪರಿಸ್ಥಿತಿ ಎದುರಾಗಿದ್ದರೆ ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ಬರಗಾಲ ಉಂಟಾಗಿದೆ.

ಇದೇ ಪರಿಸ್ಥಿತಿ ಮುಂದಿನ 8-10 ದಿನಗಳ ಕಾಲ ಮುಂದುವರಿದರೆ ರಾಜ್ಯದಲ್ಲಿ ಬರಗಾಲ ಮತ್ತು ನೆರೆ ಪ್ರವಾಹದಿಂದ ಉಂಟಾದ ನಷ್ಟದ ಬಗ್ಗೆ ಮೌಲ್ಯಮಾಪನ ನಡೆಸಬೇಕಾಗಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.

ಕಳೆದ ಕೆಲ ದಿನಗಳಿಂದ ಕರಾವಳಿ, ಮಲೆನಾಡು ಭಾಗಗಳಲ್ಲಿ ಹಾಗೂ ಕೊಡಗು, ಮೈಸೂರು ಮೊದಲಾದ ಭಾಗಗಳಲ್ಲಿ ತೀವ್ರ ಮಳೆಯಾಗುತ್ತಿದೆ. ಇದೇ ಸಮಯದಲ್ಲಿ ಉತ್ತರ ಕರ್ನಾಟಕ ಪ್ರದೇಶಗಳಾದ ಬಳ್ಳಾರಿ, ರಾಯಚೂರು, ಕೊಪ್ಪಳ, ಕಲಬುರ್ಗಿ, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಮಳೆಯೇ ಇಲ್ಲ. ಅಧಿಕಾರಿಗಳು ಪ್ರಸ್ತುತ ನೆರೆ ಪ್ರವಾಹದಿಂದ ಉಂಟಾದ ಹಾನಿ ಮತ್ತು ಪರಿಹಾರ ಕಾರ್ಯಗಳ ಮೇಲೆ ಗಮನ ಹರಿಸುತ್ತಿದ್ದಾರೆ. ಬರ ನಿರ್ವಹಣೆ ಕೆಲಸ ಮತ್ತೆ ಆರಂಭವಾಗಲಿದೆ.

ವಿಪತ್ತು ನಿರ್ವಹಣೆಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗಂಗರಾಮ್ ಬಡೆರಿಯಾ ಪ್ರತಿಕ್ರಿಯೆ ನೀಡಿ, ಸಾಕಷ್ಟು ಸಿಬ್ಬಂದಿ ಮತ್ತು ಯಂತ್ರಗಳ ಸಹಾಯದಿಂದ ನೆರೆ ಪರಿಸ್ಥಿತಿಯನ್ನು ಸದ್ಯ ನಿಭಾಯಿಸಲಾಗುತ್ತಿದೆ. ಸರಾಸರಿ ಶೇಕಡಾ 60ಕ್ಕಿಂತ ಕಡಿಮೆ ಮಳೆಯಾದರೆ ಬರಗಾಲ ಎಂದು ಪರಿಗಣಿಸಲಾಗುತ್ತದೆ ಎಂದರು.

ವಿಪತ್ತು ನಿರ್ವಹಣೆಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗಂಗರಾಮ್ ಬಡೆರಿಯಾ ಪ್ರತಿಕ್ರಿಯೆ ನೀಡಿ, ಸಾಕಷ್ಟು ಸಿಬ್ಬಂದಿ ಮತ್ತು ಯಂತ್ರಗಳ ಸಹಾಯದಿಂದ ನೆರೆ ಪರಿಸ್ಥಿತಿಯನ್ನು ಸದ್ಯ ನಿಭಾಯಿಸಲಾಗುತ್ತಿದೆ. ಸರಾಸರಿಗಿಂತ ಶೇಕಡಾ 60ರಷ್ಟು ಮಳೆಗೆ ಕೊರತೆಯಾದರೆ ಬರಗಾಲ ಎಂದು ಪರಿಗಣಿಸಲಾಗುತ್ತದೆ ಎಂದರು. ಪ್ರಸ್ತುತ ಶೇಕಡಾ 40ರಷ್ಟು ಮಳೆಯಾಗುತ್ತಿದೆ. ಆಗಸ್ಟ್ ಕೊನೆಯವರೆಗೆ ಸಮಯವಿದೆ.

ಇದೇ ಪರಿಸ್ಥಿತಿ ಮುಂದುವರಿದರೆ ಸರ್ಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ. ಅಂತರ್ಜಲ ಬರಗಾಲ ಸೂಚ್ಯಂಕ, ನದಿ ನೀರಿನ ಹರಿವು ಬರ, ಇಸ್ರೊ, ಭಾರೀ ಮತ್ತು ಸಣ್ಣ ನೀರಾವರಿ ಇಲಾಖೆ ಮೊದಲಾದವುಗಳಿಂದ ನಾವು ಅಂಕಿಅಂಶಗಳನ್ನು ಪಡೆದುಕೊಳ್ಳುತ್ತೇವೆ. ಬೆಳೆ ನಾಶದ ಅಂದಾಜನ್ನು ಕೂಡ ಲೆಕ್ಕಹಾಕುತ್ತೇವೆ ಎಂದು ಅವರು ಹೇಳಿದರು.

ನೆರೆ ಪ್ರವಾಹದಿಂದ ಅನೇಕ ಕಡೆಗಳಲ್ಲಿ ರಸ್ತೆ, ಸೇತುವೆ, ಕಟ್ಟಡಗಳು ಮತ್ತು ಇತರ ಅಗತ್ಯ ಮೂಲಭೂತ ಸೌಕರ್ಯಗಳು ಹಾನಿಗೀಡಾಗಿವೆ. ಮಾನವ ಮತ್ತು ಪಶುಗಳು ಅನೇಕ ಕಡೆಗಳಲ್ಲಿ ಜೀವ ಕಳೆದುಕೊಂಡಿದ್ದಾರೆ. ರಾಜ್ಯದ 13 ಜಲಾಶಯಗಳಲ್ಲಿ ಇತಿಹಾಸದಲ್ಲಿಯೇ  ಇದೇ ಮೊದಲ ವರ್ಷ ಮಳೆಗಾಲದಲ್ಲಿ ಈ ಎಲ್ಲಾ ಜಲಾಶಯಗಳು ಭರ್ತಿಯಾಗಿ ನೀರು ಉಕ್ಕಿ ಹರಿಯುತ್ತಿದೆ. ಇದರಿಂದ ಅಣೆಕಟ್ಟುಗಳಿಗೆ ಹಾನಿ ಮತ್ತು ಜಲಾನಯನ ಪ್ರದೇಶದ ರೈತರ ಬೆಳೆಗಳು ನಾಶವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com