ಪುಟ್ಟಪರ್ತಿ ಸಾಯಿಬಾಬಾ ಭಕ್ತರಾಗಿದ್ದ ವಾಜಪೇಯಿ ಬೆಂಗಳೂರಿನ ಮಸಾಲ ದೋಸೆ ಹಾಗೂ 'ಕಾಫಿ ಹೌಸ್' ಕಾಫಿ ಪ್ರಿಯರಾಗಿದ್ದರು!

: ದೆಹಲಿಯಲ್ಲಿ ಪಕ್ಷದ ನಾಲ್ಕನೆ ಸಭೆ ಮುಗಿಸಿ ಹೊರಟ ಆ ನಾಯಕನಿಗೆ ಮಾಮೂಲಿ ಸಮಸ್ಯೆ ಎದುರಾಯಿತು. ಅಕ್ಕಪಕ್ಕದ ತಾಲೂಕಿನ ಪಕ್ಷದ ನಾಯಕರು ..
ಸಾಯಿಬಾಬಾ ಆಶೀರ್ವಾದ ಪಡೆಯುತ್ತಿರುವ ವಾಜಪೇಯಿ
ಸಾಯಿಬಾಬಾ ಆಶೀರ್ವಾದ ಪಡೆಯುತ್ತಿರುವ ವಾಜಪೇಯಿ
Updated on
ಬೆಂಗಳೂರು: ದೆಹಲಿಯಲ್ಲಿ ಪಕ್ಷದ ನಾಲ್ಕನೆ ಸಭೆ ಮುಗಿಸಿ ಹೊರಟ ಆ ನಾಯಕನಿಗೆ ಮಾಮೂಲಿ ಸಮಸ್ಯೆ ಎದುರಾಯಿತು. ಅಕ್ಕಪಕ್ಕದ ತಾಲೂಕಿನ ಪಕ್ಷದ ನಾಯಕರು ತಮ್ಮ ಊರಿಗೂ ಬಂದು ಅಲ್ಲಿಯೂ ಜನರನ್ನು ಉದ್ದೇಶಿಸಿ ಮಾತನಾಡಬೇಕು ಎಂದು ಒತ್ತಾಯ ಮಾಡುತ್ತಿದ್ದರು. ಹಲವು ಬಾರಿ  ಅವರು ನಮಮೊಗದಿಂದ ಒಪ್ಪಿಕೊಳ್ಳುತ್ತಿದ್ದರು. ಎಂದು ಮಾಜಿ ಪ್ರಧಾನಿ ಎಬಿ ವಾಜಪೇಯಿ ಅವರ ಜೊತೆಗೆ ಕಳೆದ ದಿನಗಳನ್ನು ಬಿಜೆಪಿ ಹಿರಿಯ ನಾಯಕ ರಾಮಚಂದ್ರಗೌಡ ಸ್ಮರಿಸಿಕೊಂಡಿದ್ದಾರೆ,
1970 ಮತ್ತು 80ರಲ್ಲಿ ಪಕ್ಷ ಸಂಕಷ್ಟದಲ್ಲಿದ್ದ ಸಮಯವದು,  ರಾಜ್ಯದಲ್ಲಿದ್ದ ಯಾವೊಬ್ಬ ಪಕ್ಷದ ಮುಖಂಡರ ಬಳಿ ಕಾರು ಇರಲಿಲ್ಲ, ನನ್ನ ಭಾವಮೈದುನನ ಹತ್ತಿರ ಒಂದು ಕಾರು ಇತ್ತು, ಅದನ್ನು ನಾನು ಕೊಡುವಂತೆ ಬೇಡಿಕೊಂಡೆ, ಪಕ್ಷದ ಮತ್ತೊಬ್ಬ ನಾಯಕ ನರಹರಿ ಅವರ ಹಳೇಯ ಅಂಬಾಸಿಡರ್ ಕಾರಿನಲ್ಲಿ ಅಟಲ್ ಜೀ ಅವರನ್ನು ಕರೆದುಕೊಂಡು ಎರಡು ಮೂರು ದಿನ ಪಕ್ಷದ ಸಭೆಗಳಲ್ಲಿ ಭಾಗವಹಿಸಿದೆವು. 
ಹಳೇಯ ಅಂಬಾಸಿಡರ್ ಕಾರಿನಲ್ಲಿ ಹಳ್ಳಗುಂಡಿ ಬಿದ್ದ ರಸ್ತೆಗಳಲ್ಲಿ ಸಂಚರಿಸಿದೆವು, ಹಲವು ಬಾರಿ ಸರಿಯಾದ ಸೌಲಭ್ಯಗಳಿಲ್ಲದ ಪರಿಣಾಮ ಮಧ್ಯಾಹ್ನದ ಊಟ ಮಿಸ್ ಆಗುತ್ತಿತ್ತು,. ಆದರೆ ಈ ಬಗ್ಗೆ ಎಂದಿಗೂ ವಾಜಪೇಯಿ ದೂರಿರಲಿಲ್ಲ, ಅವರ ಪ್ರಕಾರ ಪಕ್ಷ ಮತ್ತು ದೇಶ ಎಲ್ಲಕ್ಕಿಂತ ದೊಡ್ಡದು, ಅದಕ್ಕಾರಿ ತಾವು ತಮ್ಮ ಎಲ್ಲಾ ಆಸಕ್ತಿಗಳನ್ನು ಬಿಡಲು ಸಿದ್ದ ಇರುವುದಾಗಿ ತಿಳಿಸಿದ್ದರು.
ಮೊದಲ ಬಾರಿಗೆ ವಾಜಪೇಯಿ ಅವರನ್ನು ಭೇಟಿ ಮಾಡಿದ ಕ್ಷಣವನ್ನು ನೆನೆಪಿಸಿಕೊಂಡಿರುವ ರಾಮಚಂದ್ರಗೌಡ ಅವರ ಜೊತೆಗಿನ ತಮ್ಮ ಸ್ನೇಹ ಮತ್ತಷ್ಟು ಗಟ್ಟಿಗೊಂಡ ಬಗ್ಗೆ ತಿಳಿಸಿದ್ದಾರೆ,. 1970ರ ಡಿಸೆಂಬರ್ 8 , ಅಟಲ್ ಬಿಹಾರಿ ವಾಜಪೇಯಿ ಅವರು ಭಾರತೀಯ ಜನಸಂಘದಿಂದ ಬೆಂಗಳೂರು ನಗರ ಕಾರ್ಪೋರೇಷನ್ ಗೆ ಸ್ಪರ್ಧಿಸಿದ್ದ 40 ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕೆಬಂದಿದ್ದರು,  ಎಲ್ಲಾ ಅಭ್ಯರ್ಥಿಗಳನ್ನ ಪರಿಚಯಿಸಲಾಯಿತು, ಆಗ ನೀವು ಗೆಲ್ಲುತ್ತೀರಿ ಎಂದು ನನಗೆ ಹೇಳಿದರು, ಅವರ ಮಾತಿನಂತೆ  ಬೆಂಗಳೂರು ಸಿಟಿ ಕಾರ್ಪೋರೇಷನ್ ಗೆ ಜನಸಂಘ ದಿಂದ ಆರಿಸಲ್ಪಟ್ಟ ಏಕೈಕ ಸದಸ್ಯನಾಗಿದ್ದೆ.
ನಂತರ ನನ್ನ ಮತ್ತು ವಾಜಪೇಯಿ ನಡುವಿನ ಸ್ನೇಹ ಮತ್ತಷ್ಟು ಗಟ್ಟಿಯಾಯಿತು, ಅವರನ್ನು ಬರ ಮಾಡಿಕೊಳ್ಳಲು ನಾನು ಸದಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದೆ, ಹಲವು ಬಾರಿ ಅವರು ನನ್ನ ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಅವರ ಸಂಗೀತದ ಬಗೆಗಿನ ಅಭಿರುಚಿ ಮತ್ತು ಅವರ ಕವಿತೆ ಅಧ್ಭುತವಾಗಿರುತ್ತಿತ್ತು, ಅವರು ಬಂದಾಗೆಲೆಲ್ಲಾ ತಪ್ಪದೇ ಕಾಫಿ ಹೌಸ್ ಗೆ (ಮೊದಲು ಎಂಜಿ ರಸ್ತೆಯಲ್ಲಿತ್ತು ಈಗ ಚರ್ಚ್ ಸ್ಟ್ರೀಟ್ ಗೆ ಸ್ಥಳಾಂತರವಾಗಿದೆ) ಭೇಟಿ ನೀಡಿ ಕಾಫಿ ಸವಿಯುತ್ತಿದ್ದರು.
1970 ಮತ್ತು 80ರ ಸಮಯದಲ್ಲಿ  ಬೆಂಗಳೂರಿಗೆ ಬಂದರೇ ತಪ್ಪದೆ ಮಸಾಲ ದೋಸೆ ಮತ್ತು ಕಾಫಿ ಸವಿದು ಆಸ್ವಾದಿಸುತ್ತಿದ್ದರು. ರಾತ್ರಿ ಊಟಕ್ಕೆ ಅವರ ಮೆಚ್ಚಿನ ಚಪಾತಿ ಮತ್ತು ಕಿಚಡಿಯನ್ನು ನಮ್ಮ ಮನೆಯಲ್ಲಿ ತಯಾರಿಸಲಾಗುತ್ತಿತ್ತು ಎಂದು ಸ್ಮರಿಸಿದ್ದಾರೆ.
ಎಲ್ಲರ ಜೊತೆ ಸ್ನೇಹಮಯಿಯಾಗಿದ್ದ ವಾಜಪೇಯಿ ಸತ್ಯಸಾಯಿಬಾಬಾ ಅವರ ಭಕ್ತರಾಗಿದ್ದರು, ಬೆಂಗಳೂರಿಗೆ ಬಂದಾಗ ಪುಟ್ಟಪರ್ತಿಗೆ ಭೇಟಿ ನೀಡುತ್ತಿದ್ದರು. ನಂತರದ ದಿನಗಳಲ್ಲಿ ನಾನು ರಾಜ್ಯ ಪೊಲೀಸರಿಂದ ನನಗೆ ಎಚ್ಚರಿಕೆ ಬಂದಿತ್ತು. ನಂತರ  ವಿಮಾನ ನಿಲ್ದಾಣಕ್ಕೆ ಹೋಗಿ ನಾನೇ ಅವರನ್ನು ಕರೆದುಕೊಂಡು ಬರುತ್ತಿದ್ದೆ,  ಜೊತೆಗೆ ಅವರು ಪುಟ್ಟಪರ್ತಿಗೆ ಹೋಗಿ ಬರಲು ಕಾರಿನ ವ್ಯವಸ್ಥೆ ಮಾಡುತ್ತಿದ್ದೆ ಎಂದು ಗೌಡ ತಿಳಿಸಿದ್ದಾರೆ.
ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದಾಗ ವಾಜಪೇಯಿ ತಮ್ಮ ಬೆಸ್ಟ್ ಫ್ರೆಂಡ್ ಎಲ್.ಕೆ ಅಡ್ವಾಣಿ ಅವರ ಜೊತೆ ಬೆಂಗಳೂರಿನ ಜೈಲಿನಲ್ಲಿದ್ದರು. ಜನಸಂಘದ ನಾಯಕರು ಸಂಸದೀಯ ಸಭೆಯಲ್ಲಿ ಪಾಲ್ಗೋಳ್ಳಲು ಬೆಂಗಳೂರಿಗೆ ಬಂದಿದ್ದರು.  ಬಂಧಿತ ಹಲವು ನಾಯಕರನ್ನು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿಡಲಾಗಿತ್ತು, 1977 ರಲ್ಲಿ  ತುರ್ತು ಪರಿಸ್ತಿ ತೆರವುಗೊಳಿಸಲಾಯಿತು.  ತಿಂಗಳೊಳಗೆ ವಾಜಪೇಯಿ ಅವರನ್ನು ತಿಹಾರ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಈ ವೇಳೆ ವಾಜಪೇಯಿ ಸ್ವಲ್ಪ ಕನ್ನಡ ಕಲಿತಿದ್ದರು. ಒಂದು ವೇಳೆ ಅವರನ್ನು ತಿಹಾರ ಜೈಲಿಗೆ ಸ್ಥಳಾಂತರಿಸದಿದ್ದರೇ ಕನ್ನಡ ಮಾತನಾಡುವುದನ್ನು ಕಲಿಯುತ್ತಿದ್ದರು ಎಂದು ಹಲವು ಬಿಜೆಪಿ ಮುಖಂಡರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com