ಕಾಶಿ ಹಲ್ವ ಪ್ರಿಯರಾಗಿದ್ದ ವಾಜಪೇಯಿಗೆ ಅವಿಭಜಿತ ದಕ್ಷಿಣ ಕನ್ನಡದ ಮೇಲೆ ಹೆಚ್ಚಿನ ಬಾಂಧವ್ಯ!

ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ಅಪಾರ ಒಲವು ಹೊಂದಿದ್ದರು. ...
ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಜೊತೆ ವಾಜಪೇಯಿ
ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಜೊತೆ ವಾಜಪೇಯಿ
Updated on: 
ಮಂಗಳೂರು: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ಅಪಾರ ಒಲವು ಹೊಂದಿದ್ದರು. 1957ರಲ್ಲಿ ಮೊದಲ ಬಾರಿಗೆ ದಕ್ಷಿಣ ಕನ್ನಡಕ್ಕೆ ಭೇಟಿ ನೀಡಿದರು, ಜನಸಂಘ ಪರವಾಗಿ ಪ್ರಚಾರಕ್ಕೆ ಬಂದಿದ್ದ ವಾಜಪೇಯಿ ಅವರಿಗೆ ಆಗ 32 ವರ್ಷ ವಯಸ್ಸಾಗಿತ್ತು.
ಯಾವಾಗ ಉಡುಪಿಗೆ ಬಂದರೂ ಬಿಜೆಪಿ ಮುಖಂಡ ಡಾ.ವಿ.ಎಸ್ ಆಚಾರ್ಯ ಅವರ ಜೊತೆ ಇರುತ್ತಿದ್ದರು ವಾಜಪೇಯಿ ಸುಮಾರು ಆರು ಬಾರಿ ಉಡುಪಿಗೆ  ಬಂದಿದ್ದ ಅವರು 5 ಸಲ ನಮ್ಮ ಮನೆಯಲ್ಲಿ ಬೆಳಗ್ಗಿನ ಉಪಹಾರ ಸೇವಿಸಿದ್ದರು ಎಂದು ಮಾಜಿ ಸಚಿವ ದಿವಂಗತ ವಿ.ಎಸ್ ಆಚಾರ್ಯ ಅವರ ಪುತ್ರ ಕಿರಣ್ ಆಚಾರ್ಯ ಹೇಳಿದ್ದಾರೆ. ನಮ್ಮ ತಂದೆ ಜೊತೆಗಿನ ಅವರ ಸ್ನೇಹ ಅಪಾರವಾಗಿತ್ತು.
ತಮ್ಮ ಸೌಮ್ಯ ಸ್ವಭಾವ ಹಾಗೂ ತಮಾಷೆಯಿಂದಾಗಿ ಅವರು ನಮ್ಮನ್ನೆಲ್ಲಾ ಆಕರ್ಷಿಸುತ್ತಿದ್ದರು,  ನಮ್ಮ ತಂದೆ ವಾಜಪೇಯಿ ಅವರಿಗಾಗಿ ಕಾರು ಡ್ರೈವಿಂಗ್ ಮಾಡುತ್ತಿದ್ದರು,  ನಮ್ಮ ತಂದೆ ಕಾರು ಚಾಲನೆ ಮಾಡುತ್ತಿದ್ದರೇ ನಾನು ಮತ್ತು ವಾಜಪೇಯಿ ಅವರು ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದೆವು.  ಆದಿನಗಳಲ್ಲಿ ಸಿಗುತ್ತಿದ್ದ ಸಂತೋಷವನ್ನು ನಾನು ಯಾವಾಗಲೂ ಸ್ಮರಿಸುತ್ತೇನೆ ಜೊತೆಗೆ ನಮ್ಮ ತಂದೆ ಮತ್ತು ವಾಜಪೇಯಿ ಓಡಾಡಿದ್ದ ಮಾರುತಿ 800 ಕಾರು ನನ್ನ ಬಳಿಯಿದೆ ಎಂದು ಕಿರಣ್ ಸ್ಮರಿಸಿದ್ದಾರೆ.  
1980 ರಲ್ಲಿ ವಾಜಪೇಯಿ ಉಡುಪಿಗೆ ಬಂದಿದ್ದರು, ನಮ್ಮ ತಂದೆ ಅವರಿಗಾಗಿ ಟಯೋಟಾ ಕ್ರೌನ್ ಸೂರಕ್ ಸಲೂನ್ ಕಾರನ್ನು ಅವರ ಸ್ನೇಹಿತ ರಾಕಿ ಡಯಾಸ್ ಅವರಿಂದ ತೆಗೆದುಕೊಂಡು ಬಂದಿದ್ದರು, ಆ ಕಾರಿನಲ್ಲಿ ವಾಜಪೇಯಿ ಅವರನ್ನು ಕೇರಳದ ಕಣ್ಣೂರಿಗೆ ಪಕ್ಷದ ಕಾರ್ಯಕ್ರಮಕ್ಕಾಗಿ ಕರೆದೊಯ್ದಿದ್ದರು.  ಆವಾಗ ನಾನು ಪಿಯುಸಿ ಓದುತ್ತಿದ್ದೆ ಎಂದು ಕಿರಣ್ ಹೇಳಿದ್ದಾರೆ. ಮಧುಮೇಹವಿದ್ದರೂ ಯಾವಾಗಲೂ ಕಾಶಿ ಹಲ್ವಾ ತಿನ್ನುತ್ತಿದ್ದ ವಾಜಪೇಯಿ ಅವರು ಯಾವುದೇ ಬೆಂಗಾವಲು ವಾಹನವಿಲ್ಲದೇ ,ಸಂಚರಿಸುತ್ತಿದ್ದರು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com