ಬೆಂಗಳೂರು: ಸದ್ಯದಲ್ಲಿಯೇ ಜಾಹಿರಾತುಗಳಿಗೆ ವಿದ್ಯುತ್ ಸಂಪರ್ಕ ಕಟ್!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ನಗರದ ಅನೇಕ ಭಾಗಗಳಲ್ಲಿ ಹಾಕಿರುವ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ನಗರದ ಅನೇಕ ಭಾಗಗಳಲ್ಲಿ ಹಾಕಿರುವ ಜಾಹಿರಾತು ಫಲಕಗಳು ಇನ್ನು ಮುಂದೆ ಕತ್ತಲಾಗಲಿವೆ. ಇತ್ತೀಚೆಗೆ ಮಂಡಳಿ ಸಭೆಯಲ್ಲಿ ಜಾಹಿರಾತು ಫಲಕಗಳನ್ನು ಹಾಕುವುದಕ್ಕೆ ಪಾಲಿಕೆ ನಿಷೇಧ ಹೇರಿತ್ತು.

ಇವುಗಳಲ್ಲಿ ಇನ್ನು ಕೂಡ ವಿದ್ಯುತ್ ಪೂರೈಕೆಯಾಗುತ್ತಿದ್ದು ಬೆಸ್ಕಾಂಗೆ ಪತ್ರ ಬರೆದಿರುವ ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್, ಫಲಕಗಳನ್ನು ತೆಗೆಯಲು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಕೇಳಿಕೊಂಡಿದ್ದಾರೆ.

ಜಾಹಿರಾತು ಫಲಕಗಳ ಕುರಿತು ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿ ನಗರದ ಸೌಂದರ್ಯವನ್ನು ಕಾಪಾಡಲು ಮತ್ತು ಜಾಹಿರಾತುಗಳ ಹಾವಳಿಯನ್ನು ತಡೆಯಲು ಫಲಕಗಳನ್ನು ಕೆಡವಿಹಾಕುವಂತೆ ಆದೇಶ ನೀಡಿತ್ತು.

ಬೆಸ್ಕಾಂನ ತಾಂತ್ರಿಕ ತಂಡಕ್ಕೆ ಕೂಡಲೇ ಈ ಕುರಿತು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com