ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ವಾಜಪೇಯಿ ಸಹಿಯಿಂದ ನಿಧಿ ಸಂಗ್ರಹ

1999ರಲ್ಲಿ ಪಾಕಿಸ್ತಾನದ ಸಾವಿರಾರು ಉಗ್ರರು ಹಾಗೂ ಯೋಧರು ಕಾಶ್ಮೀರ ಕಣಿವೆಗೆ ನುಗ್ಗಿ ಕಾರ್ಗಿಲ್ ಸೇರಿದಂತೆ ಹಲವು ಪ್ರದೇಶಗಳನ್ನು ವಶಪಡಿಸಿಕೊಂಡಿತ್ತು. ಈ ವೇಳೆ ವಾಜಪೇಯಿ ಸರ್ಕಾರ ತಡ ಮಾಡದೆ ಸೇನೆಯನ್ನು ಕಾಶ್ಮೀರಕ್ಕೆ ರವಾನಿಸಿತು...
ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ವಾಜಪೇಯಿ ಸಹಿಯಿಂದ ನಿಧಿ ಸಂಗ್ರಹ
ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ವಾಜಪೇಯಿ ಸಹಿಯಿಂದ ನಿಧಿ ಸಂಗ್ರಹ
Updated on
1999ರಲ್ಲಿ ಪಾಕಿಸ್ತಾನದ ಸಾವಿರಾರು ಉಗ್ರರು ಹಾಗೂ ಯೋಧರು ಕಾಶ್ಮೀರ ಕಣಿವೆಗೆ ನುಗ್ಗಿ ಕಾರ್ಗಿಲ್ ಸೇರಿದಂತೆ ಹಲವು ಪ್ರದೇಶಗಳನ್ನು ವಶಪಡಿಸಿಕೊಂಡಿತ್ತು. ಈ ವೇಳೆ ವಾಜಪೇಯಿ ಸರ್ಕಾರ ತಡ ಮಾಡದೆ ಸೇನೆಯನ್ನು ಕಾಶ್ಮೀರಕ್ಕೆ ರವಾನಿಸಿತು. ಆಗ ಆಪರೇಷನ್ ವಿಜಯ ಅರ್ಥಾತ್ ಕಾರ್ಗಿಲ್ ಸಮರ ಆರಂಭವಾಗಿತ್ತು. 
ಭಾರತೀಯ ಸೇನೆಗೆ ಉಗ್ರರಷ್ಟೇ ಅಲ್ಲದೆ, ಭಾರಿ ಚಳಿ, ಹಿಮಪಾತ ಇನ್ನಿಲ್ಲದಂತೆ ಕಾಡಿತ್ತು. ಉಗ್ರರ ವಿರುದ್ಧದ ಹೋರಾಟದಲ್ಲಿ 500ಕ್ಕೂ ಹೆಚ್ಚು ಭಾರತೀಯ ಯೋಧರು ಹತರಾದರು. 600ಕ್ಕೂ ಹೆಚ್ಚು ಪಾಕಿಸ್ತಾನಿ ಉಗ್ರರು, ಯೋಧರು ಸಾವನ್ನಪ್ಪಿದ್ದರು. 
ಕಾರ್ಗಿಲ್ ಆಸುಪಾಸಿನ ಬಹುತೇಕ ಪ್ರದೇಶಗಳನ್ನು ಭಾರತೀಯ ಸೇನಾಪಡೆಗಳು ಉಗ್ರರ ಮುಷ್ಠಿಯಿಂದ ಬಿಡಿಸಿದ್ದವು. ಅಂದಿನ ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಬಹಿರಂಗವಾಗಿಯೇ ಸೋಲನ್ನೊಪ್ಪಿಕೊಂಡಿದ್ದರು. ಯೋಧರು, ಭಾರತೀಯ ಸೇನೆ ಹಾಗೂ ವಾಜಪೇಯಿ ಆ ಸಂದರ್ಭದಲ್ಲಿ ಹೀರೋಗಳಾದರು. ಭಾರತೀಯರಲ್ಲಿ ರಾಷ್ಟ್ರದ ಬಗೆಗಿನ ಪ್ರೇಮ ಉತ್ತುಂಗಕ್ಕೆ ಏರಿತ್ತು. 
ಕಾರ್ಗಿಲ್ ಸಂದರ್ಭದಲ್ಲಿ ಇಡೀ ದೇಶ ನಿಧಿ ಸಂಗ್ರಹ ಮಾಡಲು ಮುಂದಾಗಿತ್ತು. ಕನ್ನಡಕ್ಕೆ ಅನುವಾದಗೊಂಡಿದ್ದ ವಾಜಪೇಯಿಯವರ 10 ಕವಿಕೆಗಳು ವಾಜಪೇಯಿಯವರ ಗಮನವನ್ನು ಸೆಳೆದಿತ್ತು. ವಾಜಪೇಯಿಯವರೇ ವೈಯಕ್ತಿಕವಾಗಿ 5 ಪುಸ್ತಕಗಳಿಗೆ ಸಹಿ ಮಾಡಿ ಕವಿತೆಗಳನ್ನು ಅನುವಾದ ಮಾಡಿದ್ದ ಪತ್ರಕರ್ತ ಹಾಗೂ ಸಾಹಿತಿ ಕಾತ್ಕರ್ ಅವರಿಗೆ ಕಳುಹಿಸಿಕೊಂಡಿದ್ದರು. 
ವಾಜಪೇಯಿಯವರು ಸಹಿ ಮಾಡಿದ್ದ ಈ ಪುಸ್ತಕಗಳನ್ನು ಕಾತ್ಕರ್ ಅವರು ಹರಾಜು ಮಾಡಲು ನಿರ್ಧರಿಸಿದ್ದರು. 
ಬೆಳಗಾವಿಯಲ್ಲಿ ನನಗೆ ಗೌರವ ಸಲ್ಲಿಸುವ ಸಲುವಾಗಿ ಸಣ್ಣ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮದ ವೇಳೆ ಯುದ್ಧಕ್ಕೆ ಸಂಗ್ರಹವಾದ ನಿಧಿಯನ್ನು ರವಾನಿಸಲಾಗುತ್ತದೆ ಎಂದು ಹೇಳಿ ಕಾರ್ಯಕ್ರಮದಲ್ಲಿಯೇ ಪುಸ್ತಕವನ್ನು ಹರಾಜು ಮಾಡುವುದಾಗಿ ಘೋಷಿಸಿದ್ದೆ. 
ಈ ವೇಳೆ ಕಾರ್ಯಕ್ರಮದಲ್ಲಿ ಹಾಜರಿದ್ದ ಇಬ್ಬರು ಉದ್ಯಮಿಗಳು ಮುಂದೆ ಬಂದಿದ್ದರು. ಬಳಿಕ 4 ಪುಸ್ತಕಗಳನ್ನು ಖರೀದಿಸಿ ರೂ.61,000 ಮತ್ತು 51,000 ಹಣವನ್ನು ನೀಡಿದ್ದರು. ಇದರಂತೆ ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ರೂ.1.15 ಲಕ್ಷ ನಿಧಿ ಸಂಗ್ರಹಿಸಿ ನೀಡಲಾಗಿತ್ತು ಎಂದು ಕಾತ್ಕರ್ ಅವರು ಹೇಳಿದ್ದಾರೆ. 
ವಿಮರ್ಶಕ ಡಾ.ಜಿ.ಎಸ್ ಅಮೂರ್ ಅವರು ಮಾತನಾಡಿ, ರಾಜಕೀಯ ವ್ಯಕ್ತಿಯೊಬ್ಬರು ಕವಿತೆಗಾರ ಅಥವಾ ಬರಹಗಾರರಾದರೆ, ಜನರ ಸಮಸ್ಯೆಗಳನ್ನು ಅತ್ಯುತ್ತಮವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ರಾಮ್ ಮನೋಹರ್ ಲೋಹಗ್ಯಾ ಕೂಡ ಅಂತಹ ರಾಜಕಾರಣಿಯಾಗಿದ್ದರು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com