ನಾಗರಾಜ್
ರಾಜ್ಯ
ಜೀವ ಉಳಿಸಿಕೊಳ್ಳಲು ಮಂಗಳೂರು ಸಮುದ್ರದಲ್ಲಿ ಸತತ 6 ಗಂಟೆ ಈಜಾಡಿದ ಮೀನುಗಾರ!
ಮೀನುಗಾರನೊಬ್ಬ ತನ್ನ ಜೀವ ಉಳಿಸಿಕೊಳ್ಳಲು ಸತತ ಆರು ಗಂಟೆ ಈಜಾಡಿರುವ ಘಟನೆ ಮಂಗಳೂರು ಹೊಸ ಬಂದರಿನಲ್ಲಿ ನಡೆದಿದೆ....
ಮಂಗಳೂರು: ಮೀನುಗಾರನೊಬ್ಬ ತನ್ನ ಜೀವ ಉಳಿಸಿಕೊಳ್ಳಲು ಸತತ ಆರು ಗಂಟೆ ಈಜಾಡಿರುವ ಘಟನೆ ಮಂಗಳೂರು ಹೊಸ ಬಂದರಿನಲ್ಲಿ ನಡೆದಿದೆ.
ತಮಿಳುನಾಡು ಮೂಲದ ಮೀನುಗಾರ ನಾಗರಾಜ್ ಕೃಷ್ಣ ಮಾರುತಿ ಬೋಟ್‌ನಿಂದ ಆಕಸ್ಮಿಕವಾಗಿ ಕೆಳ ಬಿದ್ದಿದ್ದಾರೆ.
ಆಗಸ್ಟ್ 16 ರಂದು ಬೆಳಗ್ಗೆ 10 ಗಂಟೆಗೆ ಪಣಂಬೂರು ಬೀಚ್ ನಿಂದ 20 ಮೈಲಿ ದೂರದಲ್ಲಿ ಈ ದುರಂತ ಸಂಭವಿಸಿದೆ, ಬೋಟ್‌ನಲ್ಲಿದ್ದವರು ಇತರ ಬೋಟ್‌ನವರಿಗೆ ವಿಚಾರ ತಿಳಿಸಿದ್ದಾರೆ.
40 ಕ್ಕೂ ಹೆಚ್ಚು ಬೋಟ್‌ನಲ್ಲಿದ್ದ ಮೀನುಗಾರರು ಹುಡುಕಾಡಿದರೂ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ.
ಈ ವಿಚಾರವನ್ನು ಎನ್‌ಎಮ್‌ಪಿಟಿಯಲ್ಲಿರುವ ಕೋಸ್ಟ್ ಗಾರ್ಡ್ ಸಿಬ್ಬಂದಿಗೆ ತಿಳಿಸಿದಾಗ ಹುಡುಕಾಟಕ್ಕಿಳಿದಿದ್ದು, 6 ಗಂಟೆಗಳ ಬಳಿಕ ನಾಗರಾಜ್‌ನನ್ನು ರಕ್ಷಿಸಿ ಪಣಂಬೂರಿಗೆ ಕರೆ ತಂದಿದ್ದಾರೆ. ಅಲ್ಲಿಯವರೆಗೂ ನಾಗರಾಜ್ ಸಮುದ್ರದಲ್ಲಿ ಈಜಾಡುತ್ತಿದ್ದರು.

