ಭಾರೀ ಮಳೆಗೆ 50 ಕಡೆ ಗುಡ್ಡ ಕುಸಿತ: ಬೆಂಗಳೂರು-ಮಂಗಳೂರು ರೈಲು 30 ದಿನ ಬಂದ್

ಬೆಂಗಳೂರು-ಮಂಗಳೂರು ರೈಲ್ವೆ ಹಳಿಯ ಮೇಲೆ ಸುಮಾರು 50ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿದು ಬಿದ್ದ ಪರಿಣಾಮ ಮುಂದಿನ 30 ದಿನಗಳ ಕಾಲ ಬೆಂಗಳೂರು-ಮಂಗಳೂರು ರೈಲು ಸಂಚಾರ ಬಂದ್ ಆಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಬೆಂಗಳೂರು-ಮಂಗಳೂರು ರೈಲ್ವೆ ಹಳಿಯ ಮೇಲೆ ಸುಮಾರು 50ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿದು ಬಿದ್ದ ಪರಿಣಾಮ ಮುಂದಿನ 30 ದಿನಗಳ ಕಾಲ ಬೆಂಗಳೂರು-ಮಂಗಳೂರು ರೈಲು ಸಂಚಾರ ಬಂದ್ ಆಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 
50 ಕಡೆ ಗುಡ್ಡ ಕುಸಿದುಬಿದ್ದಿದ್ದು, ಕೆಲವು ರೈಲ್ವೇ ಹಳಿಗಳ ಮೇಲೆ ಬೃಹತ್ ಆಕಾರದ ಬಂಡೆಗಳು ಉರುಳಿ ಬಿದ್ದಿವೆ. ಹೀಗಾಗಿ ಕನಿಷ್ಟ 30 ದಿನಗಳ ಕಾಲ ಬೆಂಗಳೂರು-ಮಂಗಳೂರು ರೈಲು ಸಂಚಾರ ಬಂದ್ ಆಗಲಿದೆ ಎಂದು ಹೇಳಲಾಗುತ್ತಿದೆ. 
ಸಕಲೇಶಪುರ ಪಟ್ಟಣದ ರೈಲ್ವೇ ನಿಲ್ದಾಣದಿಂದ ಯಡಕುಮರಿವರೆಗೆ ರೈಲ್ವೇ ಹಳಿ ಮೇಲೆ ವಿಪರೀತವಾಗಿ ಗುಡ್ಡಗಳು, ಬಂಡೆಗಳು ಕುಸಿತು ಬಿದ್ದಿವೆ. ಇದನ್ನು ತೆರವುಗೊಳಿಸಲು ಕೂಲಿ ಆಳುಗಳು ಸಿಗದೆ ರೈಲ್ವೇ ಸಿಬ್ಬಂದಿಗಳು ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ. 
ಇದಲ್ಲದೆ ಹಾಸನ- ಮಂಗಳೂರು, ಮಡಿಕೇರಿ-ಹಾಸನ, ಸೋಮವಾರ-ಶನಿವರ್ಸಂತೆಯ ಮಾರ್ಗಗಳಲ್ಲಿ ಬಿರುಗಾಳಿಗೆ ಭಾರೀ ಗಾತ್ರದ 100ಕ್ಕೂ ಹೆಚ್ಚು ಮರಗಳು ಉರುಳಿ ಬಿದ್ದಿದ್ದು, ರಸ್ತೆ ಸಂಚಾರ ಮಾರ್ಗಗಳನ್ನು ಬಂದ್ ಮಾಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com