ರಕ್ಷಣಾ ಕಾರ್ಯ ಇಂದು ಅಂತಿಮ ಹಂತ ತಲುಪಿದ್ದು, 4,320 ಮಂದಿಯನ್ನು ರಕ್ಷಿಸಿ, ಜಿಲ್ಲೆಯ 41 ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಸುಮಾರು 50 ಮಂದಿ ಇನ್ನು ನಾಪತ್ತೆಯಾಗಿದ್ದಾರೆ ಅಥವಾ ಪ್ರವಾಹದಲ್ಲಿ ಸಿಲುಕಿರುವ ಸಾಧ್ಯತೆ ಇದ್ದು, ಅವರಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.