ವಿಚಾರಣೆ ವೇಳೆ ಬಿಬಿಎಂಪಿ ವಕೀಲ ವಿ. ಶ್ರೀನಿಧಿಯವರನ್ನು ಪ್ರಶ್ನಿಸಿದ ನ್ಯಾಯಾಲಯ, ನಿಮ್ಮ ಆಯುಕ್ತರ ಸಮಸ್ಯೆಯಾದರೂ ಏನು? ನಿಮ್ಮ ಆಯುಕ್ತರು ನ್ಯಾಯಾಲಯವೇ ಅವರಿಗೆ ಬಲವಂತದಿಂದ ಕೆಲಸ ಮಾಡಿಸುತ್ತಿರುವಂತೆ ವರ್ತಿಸುತ್ತಿದ್ದಾರೆ. ತಮ್ಮ ಕರ್ತವ್ಯ ನಿಭಾಯಿಸುವಂತೆ ತಿಳಿಸಿದರೆ, ನಿಮ್ಮ ಆಯುಕ್ತರಿಗೆ ಅದು ನಿರ್ದೇಶನವೇ? ಆಯುಕ್ತರು ನಿಮ್ಮ ಹಿಂದೆ ನಿಂತಿದ್ದಾರೆ. ನ್ಯಾಯಾಲಯದ ಆದೇಶದಂತೆ ಕೆಲಸ ಮಾಡಲು ಅವರಿಗೆ ಆಗದಿದ್ದರೆ, ಅದನ್ನು ಅವರು ಹೇಳಲಿ. ಅರ್ಹ ಅಧಿಕಾರಿಯನ್ನು ನೇಮಿಸುತ್ತೇವೆಂದು ತಿಳಿಸಿದೆ.