ಧೂದ್ಸಾಗರ ಫಾಲ್ಸ್ ಬಳಿ ಗುಡ್ಡ ಕುಸಿತ: ರೈಲು ಸಂಚಾರ ಸ್ಥಗಿತ

ಬೆಳಗಾವಿ ಮತ್ತು ಖಾನಾಪುರ ಅರಣ್ಯ ಪ್ರದೇಶಗಳಲ್ಲಿ ಮಳೆ ಅಬ್ಬರ ಮಂಗಳವಾರ ಕೂಡ ಮುಂದುವರೆದಿದ್ದು, ಗೋವಾ ರಾಜ್ಯ ವ್ಯಾಪ್ತಿಯ ಧೂದ್ ಸಾಗರ ಜಲಪಾತದ ಬಳಿ ಗುಡ್ಡವೊಂದು ಕುಸಿದುಬಿದ್ದಿದೆ...
ಧೂದ್ಸಾಗರ ಫಾಲ್ಸ್ ಬಳಿ ಗುಡ್ಡ ಕುಸಿತ: ರೈಲು ಸ್ಥಗಿತ
ಧೂದ್ಸಾಗರ ಫಾಲ್ಸ್ ಬಳಿ ಗುಡ್ಡ ಕುಸಿತ: ರೈಲು ಸ್ಥಗಿತ
ಬೆಳಗಾವಿ: ಬೆಳಗಾವಿ ಮತ್ತು ಖಾನಾಪುರ ಅರಣ್ಯ ಪ್ರದೇಶಗಳಲ್ಲಿ ಮಳೆ ಅಬ್ಬರ ಮಂಗಳವಾರ ಕೂಡ ಮುಂದುವರೆದಿದ್ದು, ಗೋವಾ ರಾಜ್ಯ ವ್ಯಾಪ್ತಿಯ ಧೂದ್ ಸಾಗರ ಜಲಪಾತದ ಬಳಿ ಗುಡ್ಡವೊಂದು ಕುಸಿದುಬಿದ್ದಿದೆ. 
ಗುಡ್ಡ ಕುಸಿದು ಬಿದ್ದ ಪರಿಣಾಮ ನಿಜಾಮುದ್ದೀನ್-ವಾಸ್ಕೋ ರೈಲು ಸಂಚರ ರದ್ದುಗೊಂಡಿದೆ. ಲೋಂಡಾ-ಬೆಳಗಾವಿ-ಮಿರಜ್ ರೈಲು ಹಳಿ ಮಾರ್ಗ 37/800ರಿಂದ 900 ಮೀಟರ್ ವ್ಯಾಪ್ತಿಯಲ್ಲಿ ಗುಡ್ಡ ಕುಸಿದಿದೆ. ಹೀಗಾಗಿ ನಿಜಾಮುದ್ದೀನ್ ಲಿಂಕ್ ಎಕ್ಸ್'ಪ್ರೆಸ್ ಮತ್ತು ವಿಎಸ್'ಜಿ-ಎಸ್'ಬಿಸಿ ಎಕ್ಸ್'ಪ್ರೆಸ್ ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಸುರಿಯುತ್ತಿರುವ ಮಳೆಯ ನಡೆಯುವೆಯೇ ಮಣ್ಣು ಮತ್ತು ಕಲ್ಲುಗಳನ್ನು ತೆರವುಗೊಳಿಸುವ ಕಾರ್ಯ ನಡೆದಿದೆ. ಗೋವಾದಿಂದ ರೈಲು ಪ್ರಯಾಣಿಕರು ಬಸ್ ಮೂಲಕ ಬೆಳಗಾವಿಗೆ ಬರುತ್ತಿದ್ದಾರೆ. 
ರೈಲು ಹಳಿಗಳನ್ನು ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಿದ್ದ ವೇಳೆ ನಿನ್ನೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಗುಡ್ಡ ಕುಸಿಯುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಧಿಕಾರಿಗಳು ಅಗತ್ಯ ಪರಿಕರಗಳಾದ ಆಹಾರ, ಟೆಂಟ್ ಹಾಗೂ ಟಾರ್ಚ್ ಗಳನ್ನು ತೆಗೆದುಕೊಂಡು ಹಳಿಗಳನ್ನು ಸರಿಪಡಿಸಲು ಸ್ಥಳಕ್ಕೆ ಧಾವಿಸಿದ್ದಾರೆ. ಹಳಿಗಳನ್ನು ಸರಿಪಡಿಸಲು 6-8 ಗಂಟೆಗಳು ಕಾಲಾವಕಾಶ ಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com