

ಮಂಗಳೂರು: ನೆರೆ ಸಂತ್ರಸ್ತ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶದ ಸಂತ್ರಸ್ತ ಜನರಿಗೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಯೋಜನೆಯಡಿ ಶಾಶ್ವತ ಮನೆ ಒದಗಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ನಗರಾಭಿವೃದ್ದಿ ಮತ್ತು ವಸತಿ ಸಚಿವ ಯು. ಟಿ. ಖಾದರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂ ಕುಸಿತದಿಂದಾದ ಹಾನಿ ಕುರಿತಂತೆ ಎರಡು ತಂಡಗಳ ವರದಿಗಳನ್ನು ಮುಖ್ಯಮಂತ್ರಿ ಪರಿಶೀಲನೆ ನಡೆಸಲಿದ್ದಾರೆ ನಂತರ ಪರಿಹಾರದ ಬಗ್ಗೆ ಸರ್ಕಾರ ನೀಲಿನಕ್ಷೆ ರೂಪಿಸಲಿದೆ ಎಂದರು.
ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ಆಯುಕ್ತ ಅನುಪ್ ಕುಮಾರ್ ಹಾಗೂ ಎಜಿಎಂ ಪಾಷ ನೇತೃತ್ವದಲ್ಲಿನ ತಂಡ ಕೊಡಗು ಮತ್ತು ಜೋಡುಪಾಳ್ಯದಲ್ಲಿ ಆಸ್ತಿಪಾಸ್ತಿನ ನಷ್ಟ ಕುರಿತಂತೆ ಅಧ್ಯಯನ ನಡೆಸಲಿದ್ದು. ಜಿಲ್ಲಾಡಳಿತದೊಂದಿಗೆ ಚರ್ಚೆ ನಡೆಸಲಿದ್ದಾರೆ. ನಂತರ ಮುಖ್ಯಮಂತ್ರಿಗೆ ವರದಿ ಸಲ್ಲಿಸಲಿದ್ದಾರೆ ಎಂದು ಹೇಳಿದರು.
ಇಸ್ರೋ ಮತ್ತು ಭೌಗೋಳಿಕ ಇಲಾಖೆಯನ್ನೊಳಗೊಂಡ ಮತ್ತೊಂದ ತಂಡ ಭೂ ಕುಸಿತ ಕುರಿತಂತೆ ಅಧ್ಯಯನ ನಡೆಸಲಿದೆ. ಸ್ಥಳಾಂತರಗೊಂಡವರಿಗೆ ಹೊಸ ಹಾಗೂ ಗುಣಮಟ್ಟದ ಮನೆ ಕಟ್ಟಿಸುವ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿದೆ ಎಂದರು .