ಮಹಾರಾಷ್ಟ್ರದಲ್ಲಿ ಭಾರೀ ಮಳೆ: ವಿಜಯಪುರದ ತಾರಾಪುರ ಗ್ರಾಮ ಈಗ ದ್ವೀಪ!

ಮಹಾರಾಷ್ಟ್ರ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಭೀಮಾ ನದಿ ತುಂಬಿ ಹರಿಯುತ್ತಿದ್ದು, ಇದರ ಬರಿಣಾಮ ವಿಜಯಪುರದ ಕೆಲ ಗ್ರಾಮಗಳು ದ್ವೀಪದಂತೆ ನಿರ್ಮಾಣಗೊಂಡಿವೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಿಜಯಪುರ: ಮಹಾರಾಷ್ಟ್ರ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಭೀಮಾ ನದಿ ತುಂಬಿ ಹರಿಯುತ್ತಿದ್ದು, ಇದರ ಬರಿಣಾಮ ವಿಜಯಪುರದ ಕೆಲ ಗ್ರಾಮಗಳು ದ್ವೀಪದಂತೆ ನಿರ್ಮಾಣಗೊಂಡಿವೆ. 
ಮಹಾರಾಷ್ಟ್ರ ಉಜ್ಜಯಿನಿ ಜಲಾಶಯದ ಒಳ ಹರಿವು ಹೆಚ್ಚಾಗಿದ್ದು. ಅಧಿಕಾರಿಗಳು 20,000 ಟಿಎಂಸಿ ನೀರನ್ನು ಬಿಡುಗಡೆ ಮಾಡಿದ್ದಾರೆ. ಇದರಿ ಪರಿಣಾಮ ವಿಜಯಪುರದ ತಾರಾಪುರ ಗ್ರಾಮದ ಸುತ್ತಲೂ ನೀರು ತುಂಬಿದೆ. ಗ್ರಾಮದಲ್ಲಿ ನೀರು ತುಂಬುತ್ತಿರುವ ಪರಿಣಾಮ ರಸ್ತೆ ಸಂಪರ್ಕಗಳನ್ನು ಕಳೆದುಕೊಳ್ಳುತ್ತಿದೆ. 
ನದಿ ತುಂಬಿ ಹರಿಯುತ್ತಿರುವುದರಿಂದ ಕೃಷಿ ಭೂಮಿಗಳು ನಾಶವಾಗಿವೆ. ಬ್ಯಾಂಕ್ ಆಫ್ ರಿವರ್ ಬಳಿ ಬಳಿ ಅಳವಡಿಸಲಾಗಿರುವ ಜಲ ವಿದ್ಯುತ್ ಮೋಟಾರ್ ಗಳು ಸಂಪೂರ್ಣವಾಗಿ ನಾಶವಾಗಿವೆ. ತಾರಾಪುರ ಗ್ರಾಮಕ್ಕೆ ಸಂಪರ್ಕವನ್ನು ಹೊಂದಿರುವ ಸೇತುವೆ ಕೂಡ ನಾಶಗೊಂಡಿದೆ. ಇದರ ಪರಿಣಾಮ ಗ್ರಾಮಸ್ಥರು ಇದೀಗ ಆತಂಕದಲ್ಲಿ ಜೀವನ ನಡೆಸುವಂತಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com