ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್'ಗಳಲ್ಲಿ ಅವ್ಯವಸ್ಥೆ: ಸಂಕಷ್ಟದಲ್ಲಿ ವಿದ್ಯಾರ್ಥಿನಿಯರು

ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಗಳಲ್ಲಿ ಅವ್ಯವಸ್ಥೆಗಳು ತಾಂಡವವಾಡುತ್ತಿದ್ದು, ಒಳಚರಂಡಿ ವ್ಯವಸ್ಥೆಗಳಿಲ್ಲದ ಕಾರಣ ವಿದ್ಯಾರ್ಥಿನಿಯರು ಬಯಲು ಶೌಚ ಬಳಕೆ ಮಾಡಿಕೊಂಡು ಸಂಕಷ್ಟದಲ್ಲಿ ಕಾಲ ಕಳೆಯುವಂತಾಗಿದೆ...
ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್'ಗಳಲ್ಲಿ ಅವ್ಯವಸ್ಥೆ: ಸಂಕಷ್ಟದಲ್ಲಿ ವಿದ್ಯಾರ್ಥಿನಿಯರು
ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್'ಗಳಲ್ಲಿ ಅವ್ಯವಸ್ಥೆ: ಸಂಕಷ್ಟದಲ್ಲಿ ವಿದ್ಯಾರ್ಥಿನಿಯರು
ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಗಳಲ್ಲಿ ಅವ್ಯವಸ್ಥೆಗಳು ತಾಂಡವವಾಡುತ್ತಿದ್ದು, ಒಳಚರಂಡಿ ವ್ಯವಸ್ಥೆಗಳಿಲ್ಲದ ಕಾರಣ ವಿದ್ಯಾರ್ಥಿನಿಯರು ಬಯಲು ಶೌಚ ಬಳಕೆ ಮಾಡಿಕೊಂಡು ಸಂಕಷ್ಟದಲ್ಲಿ ಕಾಲ ಕಳೆಯುವಂತಾಗಿದೆ. 
ಯಲಬುರ್ಗ ತಾಲೂಕಿನ ಕೊಪ್ಪಳ ಜಿಲ್ಲೆಯ ಮಂಗಳೂರು ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ ಈ ಅವ್ಯವಸ್ಥೆ ಕಂಡು ಬಂದಿದೆ. 
ಇದಲ್ಲದೆ, ನ್ಯಾಪ್ಕಿನ್ಸ್ ಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆಂಬ ಭಯದಿಂದ ಹಾಸ್ಟೆಲ್ ಸಿಬ್ಬಂದಿಗಳು ವಿದ್ಯಾರ್ಥಿನಿಯರಿಗೆ ಉಚಿತ ನ್ಯಾಪ್ಕಿನ್ಸ್ ಗಳನ್ನು ಕೊಡಲು ನಿರಾಕರಿಸುತ್ತಿದ್ದಾರೆ. 
ರಾಜ್ಯ ಕಾನೂನು ಸೇವಾ ಪ್ರಾಧಿಕಾರ (ಕೆಎಸ್ಎಲ್ಎಸ್ಎ) ನಿರ್ದೇಶನದಂತೆ ಆಗಸ್ಟ್ ತಿಂಗಳಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (ಡಿಎಲ್ಎಸ್ಎ) ಸದಸ್ಯರು ಹಾಗೂ ಕಾರ್ಯದರ್ಶಿಗಳು ಸಾಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ 30 ಜಿಲ್ಲೆಗಳ ಹಾಸ್ಟೆಲ್ ಗಳಲ್ಲಿ ಪರಿಶೀಲನೆ ನಡೆಸಿದ್ದರು. 
ಇದರಂತೆ 12 ಡಿಎಲ್ಎಸ್ಎಗಳು ಆಗಸ್ಟ್ 18 ಗಡುವಿನೊಳಗಾಗಿ ವರದಿಯನ್ನು ಸಲ್ಲಿಸಿದ್ದು, ವರದಿಯಲ್ಲಿ ಅವ್ಯಸ್ಥೆಗಳಿರುವುದಾಗಿ ತಿಳಿಸಿದೆ ಎಂದು ಕೆಎಸ್ಎಲ್ಎಸ್ಎ ಮೂಲಗಳು ಮಾಹಿತಿ ನೀಡಿವೆ.
ಶೌಚಾಲಯಗಳಲ್ಲಿ ನೀರಿಲ್ಲ ಕಾರಣ ಬೀದರ್ ನಲ್ಲಿರುವ ಹಾಸ್ಟೆಲ್ ವಿದ್ಯಾರ್ಥಿಗಳು ಬಯಲು ಶೌಚ ಮಾಡುತ್ತಿರುವುದು ಕಂಡು ಬಂದಿದೆ. ಇದಲ್ಲದೆ ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಆಹಾರದಲ್ಲಿ ನಿಯಮದಂತೆ ದಿನಕ್ಕೆ 660 ಗ್ರಾಂ ಗಳಷ್ಟಿನ ಪೌಷ್ಟಿಕಾಂಶವುಳ್ಳ ಆಹಾರವನ್ನೂ ನೀಡುತ್ತಿಲ್ಲ. ಕೊಠಡಿಗಳಲ್ಲೂ ಅವ್ಯವಸ್ಥೆಗಳು ಎದ್ದು ಕಾಣುತ್ತಿದೆ. ಧಾರವಾಡದಲ್ಲಿರು ಹಾಸ್ಟೆಲ್ ಗಳಲ್ಲಿ ಬೆಡ್ ಗಳಿಲ್ಲದ ಕಾರಣ ವಿದ್ಯಾರ್ಥಿಗಲು ಕಾರ್ಪೆಟ್ ಗಳನ್ನೇ ಬಳಕೆ ಮಾಡುವಂತಾಗಿದೆ. ಕೊಪ್ಪಳದಲ್ಲಿ ಒಂದು ಕೊಠಡಿಯಲ್ಲಿ 20 ವಿದ್ಯಾರ್ಥಿಗಳು ಕಾಲ ಕಳೆಯುವಂತಾಗಿದೆ. 
ರಾಯಚೂರು ಹೈದರಾಬಾದ್-ಕರ್ನಾಟಕ ಭಾಗಕ್ಕೆ ಬರುವುದರಿಂದ ಇಲ್ಲಿ ಆರ್ಥಿಕ ಕೊರತೆಗಳು ಎದುರಾಗುವುದಿಲ್ಲ. ಇಲಾಖೆಯ ವ್ಯವಸ್ಥೆ ಕಲ್ಪಿಸುವಲ್ಲಿ ನಿರ್ಲಕ್ಶ್ಯ ತೋರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಹಾಸ್ಟೆಲ್ ನಲ್ಲಿ ಈ ಮಟ್ಟಕ್ಕೆ ಅವ್ಯವಸ್ಥೆಗಳಿದ್ದರೂ ಕಲ್ಯಾಣ ಕೇಂದ್ರಕ್ಕೇಕೆ ದೂರು ನೀಡುತ್ತಿಲ್ಲ ಎಂಬ ಪ್ರಶ್ನೆಗೆ ವಿದ್ಯಾರ್ಥಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ದೂರು ನೀಡಿದರೆ ಪ್ರವೇಶವನ್ನು ರದ್ದು ಮಾಡುವುದಾಗಿ ವಾರ್ಡನ್ ಗಳು ಬೆದರಿಕೆ ಹಾಕುತ್ತಾರೆಂದು ಹೇಳಿದ್ದಾರೆ. 
ಪ್ರಕರಣ ಸಂಬಂಧ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಎಂ. ಲಕ್ಷ್ಮೀನಾರಾಯಣ ಮತ್ತು ಜಂಟಿ ನಿರ್ದೇಶಕ ಲಕ್ಷ್ಮಣ್ ರೆಡ್ಡಿಯವರು ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com