ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಈ ಮಸೂದೆಯ ವಿಚಾರ ಎಲ್ಲಾ ಮಾದ್ಯ್ಮಗಳಲ್ಲಿ ಬಂದಿದ್ದು ಇದೀಗ ಲೇವಾದೇವಿದಾರರು, ಬ್ಯಾಂಕ್ ಗಳು ತಮ್ಮಲ್ಲಿ ಸಾಲ ಪಡೆದ ಸಣ್ಣ ರೈತರು, ಹಿಡುವಳಿದಾರರು, ಕಾರ್ಮಿಒಕರ ಮೇಲೆ ಒತ್ತಡ ಹಾಕುತ್ತಿದೆ. ಇದನ್ನು ಗಮನಿಸಿದ ಸರ್ಕಾರ ಸಾಲಗಾರರ ಮೇಲೆ ಕಾನೂನುಬಾಹಿರ ಒತ್ತಡ ಹಾಕುವಂತಿಲ್ಲ, ದೌರ್ಜನ್ಯ ಎಸಗುವಂತಿಲ್ಲ ಎಂದು ಸೂಚಿಸಿದ್ದಲ್ಲದೆ ಅಂತಹಾ ಒತ್ತಡ, ದೌರ್ಜನ್ಯ ನಡೆಸಿದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸುತ್ತೋಲೆಯಲ್ಲಿ ಹೇಳಿದೆ.