ಐತಿಹಾಸಿಕ ಕಡಲೇಕಾಯಿ ಪರಷೆಗೆ ಚಾಲನೆ: ಮೇಯರ್ ಉದ್ಘಾಟನೆ

ನಗರದ ಐತಿಹಾಸಿಕ ಉತ್ಸವ ಕಡಲೆಕಾಯಿ ಪರಿಷೆ ಆರಂಭವಾಗಿದೆ. ಬೆಂಗಳೂರು ನಿರ್ಮಾತೃ ಕೆಂಪೇಗೌಡರು...
ಕಡಲೆಕಾಯಿ ರಾಶಿಗೆ ಹೂವಿನ ಹಾರ ಇಟ್ಟು ಪೂಜೆ ಸಲ್ಲಿಸಿದ ಶಾಸಕ ರವಿ ಸುಬ್ರಹ್ಮಣ್ಯ, ಮೇಯರ್ ಗಂಗಾಂಬಿಕಾ ಹಾಗೂ ಇತರರು
ಕಡಲೆಕಾಯಿ ರಾಶಿಗೆ ಹೂವಿನ ಹಾರ ಇಟ್ಟು ಪೂಜೆ ಸಲ್ಲಿಸಿದ ಶಾಸಕ ರವಿ ಸುಬ್ರಹ್ಮಣ್ಯ, ಮೇಯರ್ ಗಂಗಾಂಬಿಕಾ ಹಾಗೂ ಇತರರು
Updated on

ಬೆಂಗಳೂರು: ನಗರದ ಐತಿಹಾಸಿಕ ಉತ್ಸವ ಕಡಲೆಕಾಯಿ ಪರಿಷೆ ಆರಂಭವಾಗಿದೆ. ಬೆಂಗಳೂರು ನಿರ್ಮಾತೃ ಕೆಂಪೇಗೌಡರು 1786ರಲ್ಲಿ ಕಟ್ಟಿಸಿದ ದೊಡ್ಡ ಬಸವನ ದೇವಾಲಯದ ಮುಂದೆ ಪ್ರತಿ ವರ್ಷದಂತೆ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಆರಂಭವಾಗುವ ಕಡಲೇಕಾಯಿ ಪರಷೆ ಕಾರ್ಯಕ್ರಮವನ್ನು ಮೇಯಕ್ ಗಂಗಾಂಬಿಕೆ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ, ಐತಿಹಾಸಿಕ ಕಡಲೆಕಾಯಿ ಪರಿಷೆ ನಾಡಪ್ರಭು ಕೆಂಪೇಗೌಡರ ಕಾಲದಿಂದಲೂ  ನಡೆದು ಬಂದ ಸಂಪ್ರದಾಯ.ಇದೀಗ ಆಧುನಿಕ ಯುಗದಲ್ಲಿ ಜನಸಾಮ್ಯಾನರಿಗೆ ಮತ್ತು ಮಕ್ಕಳಿಗೆ ಹಬ್ಬದ ಅಚರಣೆ ಬಗ್ಗೆ ತಿಳಿದಿಲ್ಲ .ಮುಂದಿನ ದಿನಗಳಲ್ಲಿ ಬಸವನಗುಡಿ ಕಡಲೇಕಾಯಿ ಪರಿಷೆ ರಾಷ್ಟೀಯ ಪ್ರವಾಸಿತಾಣ ಮಾಡಲು ಬಿಬಿಎಂಪಿಯಲ್ಲಿ ಚರ್ಚೆ ಮಾಡಲಾಗುವುದು ಎಂದರು.

ಈ ವರ್ಷದ ವಿಶೇಷವೆಂದರೆ ಕಡಲೇಕಾಯಿ ಪರಿಷೆ ನಡೆಯುವ ಸ್ಥಳ ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಿ ಅಚರಿಸಲಾಗುತ್ತಿದೆ. ಆರೋಗ್ಯ, ಪರಿಸರ ಮಾರಕವಾಗಿರುವ ಪ್ಲಾಸ್ಟಿಕ್ ಬಳಸಬೇಡಿ ,ಬಟ್ಟೆ ,ಸೆಣಬಿನ ಕೈಚೀಲಗಳನ್ನು ಬಳಸಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಬಂದ ಅತಿಥಿಗಳು ಡೊಡ್ಡ ಬಸವಣ್ಣ ದೇಗುಲ ದರ್ಶನ ಪಡೆದು, ಕಡಲೇಕಾಯಿ ತುಲಭಾರ ಮಾಡಿಸಿದರು. ಸಾರ್ವಜನಿಕರಿಗೆ ಉಚಿತವಾಗಿ ಕಡಲೇಕಾಯಿ ವಿತರಣೆ ಮಾಡಲಾಯಿತು.

ಬಸವನಗುಡಿ ಕ್ಷೇತ್ರದ ಶಾಸಕ ರವಿಸುಬ್ರಮಣ್ಯ,ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್, ವಿಧಾನಪರಿಷತ್ತು ಸದಸ್ಯ ಟಿ.ಎ.ಶರವಣ ,ಮಾಜಿ ಮಹಾಪೌರರಾದ ಸತ್ಯನಾರಾಯಣ್ ಕಟ್ಟೆ, ಬಿ.ಬಿ.ಎಂ.ಪಿ.ಸದಸ್ಯರುಗಳಾದ ಕೆಂಪೇಗೌಡ, ನಂದಿನಿ ವಿಜಯ ವಿಠ್ಠಲ ,ಸವಿತಾ ಮಾಯಣ್ಣ ಗೌಡ , ಶಾಮಲ ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com